
ನವದೆಹಲಿ(ಜ.07): ತನ್ನ ಇತಿಹಾಸದಲ್ಲೇ ಅತ್ಯಂತ ಭಾರದ ರಾಕೆಟ್ ಉಡ್ಡಯನಕ್ಕೆ ಇಸ್ರೋ ಸಜ್ಜಾಗಿದೆ. ಭಾರತದ ದೂರಸಂಪರ್ಕ ಕ್ಷೇತ್ರದಲ್ಲಿ ಕ್ರಾಂತಿಗೆ ಜಿಸ್ಯಾಟ್-11 ಉಪಗ್ರಹವನ್ನು ಭಾರತ ಫ್ರಾನ್ಸ್ ಕೌರು ಉಡ್ಡಯನ ನೆಲೆಯಿಂದ ಉಡಾವಣೆ ಮಾಡಲು ನಿರ್ಧರಿಸಿದೆ.
6 ಟನ್ ತೂಕದ ಉಪಗ್ರಹ ಹಾರಿಬಿಡುವ ಸಾಮರ್ಥ್ಯ ಇಸ್ರೋಗೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಸಿದ್ಧಿಸಿಲ್ಲ. ಹೀಗಾಗಿ ಫ್ರಾನ್ಸ್‌ನ ಏರಿಯಾನ್-5 ರಾಕೆಟ್ ಮೂಲಕ ಮುಂದಿನ ಜೂನ್‌ನಲ್ಲಿ ಹಾರಿಬಿಡಲಾಗುವುದು. ಈ ಉಪಗ್ರಹ ಮೊದಲ ಬಾರಿ ಗ್ರಾಮೀಣ ಭಾರತದಲ್ಲಿ ಸೆಟಲೈಟ್ ಆಧಾರಿತ ಇಂಟರ್ನೆಟ್ ಸೇವೆಗಳನ್ನು ಒದಗಿಸಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.