
ನವದೆಹಲಿ(ಮೇ 04): ಬಾಹ್ಯಾಕಾಶ ಯೋಜನೆಗಳಲ್ಲಿ ಅದ್ವಿತೀಯ ಸಾಧನೆ ಮಾಡುತ್ತಿರುವ ಭಾರತೀಯ ವಿಜ್ಞಾನ ಸಂಸ್ಥೆ ಇಸ್ರೋ ಈಗ ಎಲ್ಲರಿಗೂ ಮಾದರಿ ಆಗುವಂತೆ ಸೋಲಾರ್ ಹೈಬ್ರಿಡ್ ಎಲೆಕ್ಟ್ರಿಕ್ ಕಾರೊಂದನ್ನು ತಯಾರಿಸಿದೆ. ಸೌರಶಕ್ತಿ ಮತ್ತು ವಿದ್ಯುತ್ ಎರಡರ ಸಂಯೋಗವಾಗಿರುವ ಈ ಕಾರನ್ನು ಇಸ್ರೋದ ತಂತ್ರಜ್ಞರೇ ಅಭಿವೃದ್ಧಿಪಡಿಸಿದ್ದಾರೆ. ಇತ್ತೀಚೆಗಷ್ಟೇ ತಿರುವನಂತಪುರಂನಲ್ಲಿರುವ ವಿಕ್ರಮ್ ಸಾರಾಭಾಯ್ ಸ್ಪೇಸ್ ಸೆಂಟರ್'ನಲ್ಲಿ ಈ ಕಾರಿನ ಯಶಸ್ವಿ ಪರೀಕ್ಷೆ ನಡೆಸಲಾಗಿದೆ.
ಪೆಟ್ರೋಲ್, ಡೀಸೆಲ್'ಗಳಿಂದ ಪರಿಸರಕ್ಕೆ ಹಾನಿಯಾಗುತ್ತಿರುವ ಹಿನ್ನೆಲೆಯಲ್ಲಿ ಪರ್ಯಾಯ ಇಂಧನ ಶಕ್ತಿಗೆ ಮಾನವನ ಅನ್ವೇಷಣೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಇಸ್ರೋ ಸೋಲಾರ್-ಎಲೆಕ್ಟ್ರಿಕ್ ಹೈಬ್ರಿಡ್ ಕಾರನ್ನು ಅಭಿವೃದ್ಧಿಪಡಿಸಿದೆ. ಭಾರತದಲ್ಲಿ ಎಲೆಕ್ಟ್ರಿಕ್-ಪೆಟ್ರೋಲ್ ಹೈಬ್ರಿಡ್ ಕಾರುಗಳಿವೆಯಾದರೂ ಸೋಲಾರ್-ಎಲೆಕ್ಟ್ರಿಕ್ ವಾಹನಗಳು ಮಾರುಕಟ್ಟೆಯಲ್ಲಿಲ್ಲ.
ಈ ಕಾರಿನ ವೈಶಿಷ್ಟ್ಯವೇನು?
ಇಸ್ರೋದ ಈ ಕಾರಿಗೆ ಲಿಥಿಯಮ್ ಅಯಾನ್ ಬ್ಯಾಟರಿಯ ಅಳವಡಿಸಲಾಗಿದೆ. ಸೂಪರ್-ಕೆಪಾಸಿಟರ್'ಗಳ ಮೂಲಕ ಸೂರ್ಯನ ಕಿರಣಗಳಿಂದ ಈ ಲಿಥಿಯಮ್ ಅಯೋನ್ ಬ್ಯಾಟರಿಗಳನ್ನು ರೀಚಾರ್ಜ್ ಮಾಡಬಹುದಾಗಿದೆ. ಈ ಕಾರಿನಲ್ಲಿ ಇನ್ನೂ ಹಲವು ವಿಶಿಷ್ಟ ತಂತ್ರಜ್ಞಾನಗಳನ್ನು ಅಳವಡಿಸಲಾಗಿದೆ. ಇಸ್ರೋ ಹೇಳಿಕೊಂಡಿರುವ ಪ್ರಕಾರ, ಈ ಕಾರು ಒಂದಿಷ್ಟೂ ಮಾಲಿನ್ಯ ಹೊರಹಾಕುವುದಿಲ್ಲವಂತೆ.
2030ರಷ್ಟರಲ್ಲಿ ದೇಶದಲ್ಲಿ ಪೆಟ್ರೋಲ್, ಡೀಸೆಲ್ ವಾಹನಗಳನ್ನು ನಿಷೇಧಿಸುವ ಕೇಂದ್ರದ ಯೋಜನೆಗೆ ಪೂರಕವಾಗಿ ಇಸ್ರೋದ ಸೋಲಾರ್-ಎಲೆಕ್ಟ್ರಿಕ್ ಕಾರಿನ ಪ್ರಯೋಗ ನಡೆದಿರುವುದು ಕುತೂಹಲ ಮೂಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.