ಸಿಕ್ತು ಐದು ಸಾವಿರ ವರ್ಷಗಳ ಹಿಂದಿನ ನಗರ: ಇತಿಹಾಸ ಬಗೆದವರಿಗೆ ಸಡಗರ!

Published : Oct 07, 2019, 07:35 PM IST
ಸಿಕ್ತು ಐದು ಸಾವಿರ ವರ್ಷಗಳ ಹಿಂದಿನ ನಗರ: ಇತಿಹಾಸ ಬಗೆದವರಿಗೆ ಸಡಗರ!

ಸಾರಾಂಶ

ಐದು ಸಾವಿರ ವರ್ಷಗಳ ಹಿಂದಿನ ಸುಸಜ್ಜಿತ ನಗರ ಪತ್ತೆ| ಕಂಚಿನ ಯುಗಕ್ಕೆ ಸೇರಿದ ವಿಶಾಲ ನಗರ ಪತ್ತೆ ಹಚ್ಚಿದ ಪುರಾತತ್ವ ಶಾಸ್ತ್ರಜ್ಞರು| ಇಸ್ರೇಲ್‌ನ ಎನ್ ಎಸುರು ಪ್ರದೇಶದಲ್ಲಿ ಉತ್ಖನನ ವೇಳೆ ದೊರೆತ ವಿಶಾಲ ನಗರ| ವಿಶಾಲ ದೇವಸ್ಥಾನಗಳು, ವಿಶಾಲ ಸ್ಮಶಾನದ ಅನ್ವೇಷಣೆ| ಒಟ್ಟು 0.65 ಕಿ.ಮೀ ವ್ಯಾಪ್ತಿಯಲ್ಲಿ ನಗರ ನಿರ್ಮಾಣ|

ಹಡೆರಾ(ಅ.07): ಇತಿಹಾಸವೇ ಹಾಗೆ. ತನ್ನೊಡಲಲ್ಲಿ ಅದೆಷ್ಟೋ ರೋಚಕ ಸಂಗತಿಗಳನ್ನು ಬಚ್ಚಿಟ್ಟುಕೊಂಡಿರುತ್ತದೆ. ಬುದ್ಧಿವಂತ ಮಾನವ ಅದನ್ನು ಬಗೆದು ತಿಳಿಯುತ್ತಾನೆ. ಬಗೆದಷ್ಟು ಚಿತ್ರ ವಿಚಿತ್ರ ಸತ್ಯಗಳು ಭೂಮಿಯ ಒಡಲಾಳದಿಂದ ಹೊರ ಬರುತ್ತಲೇ ಇರುತ್ತವೆ.

ಅದರಂತೆ ಇಸ್ರೇಲ್‌ನ ಎನ್ ಎಸುರು ಪ್ರದೇಶದಲ್ಲಿ ಸುಮಾರು ಐದು ಸಾವರಿ ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಸುಸಜ್ಜಿತ ನಗರವೊಂದನ್ನು ಪುರಾತತ್ವ ಶಾಸ್ತ್ರಜ್ಞರು ಪತ್ತೆ ಹಚ್ಚಿದ್ದಾರೆ.

ಮೆಡಿಟರೇನಿಯನ್ ಪ್ರದೇಶದಲ್ಲಿ ಐದು ಸಾವಿರ ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಸುಸಜ್ಜಿತ ನಗರ ಉತ್ಖನನದ ಸಮಯದಲ್ಲಿ ದೊರೆತಿದ್ದು, ಇಡೀ ನಗರವನ್ನು ಚೌಕಾಕಾರದಲ್ಲಿ ನಿರ್ಮಾಣ ಮಾಡಲಾಗಿದೆ.

ಸಿಂಧೂ ನಾಗರಿಕತೆಯ ನಗರಗಳಂತೇ ಇಡೀ ನಗರವನ್ನು ಚೌಕಾಕಾರದಲ್ಲಿ ವಿಂಗಡಿಸಿ ಉತ್ತಮ ಬೀದಿಗಳ ನಿರ್ಮಾಣ ಮಾಡಲಾಗಿದೆ ಎಂದು ಪುರಾತತ್ವ ಶಾಸ್ತ್ರಜ್ಞರು ತಿಳಿಸಿದ್ದಾರೆ.

ಒಟ್ಟು 0.65 ಕಿ.ಮೀ ವ್ಯಾಪ್ತಿಯಲ್ಲಿ ನಗರ ನಿರ್ಮಾಣ ಮಾಡಲಾಗಿದ್ದು, ನಗರದ ಹೊರಗಡೆ ವಿಸ್ತಾರವಾದ ಸ್ಮಶಾನ ಕೂಡ ನಿರ್ಮಾಣ ಮಾಡಿದ್ದರು ಕುರುಹು ದೊರೆತಿದೆ ಎನ್ನಲಾಗಿದೆ.

ಕಂಚಿನ ಯುಗಕ್ಕೆ ಸೇರಿದ ಈ ನಗರವನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ಮಿಸಲಾಗಿದ್ದು, ಧಾರ್ಮಿಕ ಕಾರ್ಯಗಳಿಗಾಗಿ ಕಟ್ಟಿದ ದೇವಾಲಯಗಳನ್ನು ಕಾಣಬಹುದಾಗಿದೆ. ದೇವಾಲಯಗಳ ಸುತ್ತಮುತ್ತ ಮನುಷ್ಯ ಮತ್ತು ವಿವಿಧ ಪ್ರಾಣಿಗಳ ಮೂರ್ತಿಗಳು ದೊರೆತಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಡಿಯೋ: ಅಂತರರಾಷ್ಟ್ರೀಯ ವೇದಿಕೆಯಲ್ಲಿ ಪಾಕಿಸ್ತಾನಕ್ಕೆ ಅವಮಾನ: ಶಹಬಾಜ್ ಷರೀಫ್‌ರನ್ನು ನಿರ್ಲಕ್ಷಿಸಿದ ಪುಟಿನ್!
ಯುಎಇ ಕಠಿಣ ಕಾನೂನು: ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ, ವೇಶ್ಯಾವಾಟಿಕೆಗೆ ಶಿಕ್ಷೆ ಪ್ರಮಾಣ ಭಾರೀ ಹೆಚ್ಚಳ!