
ಬೀಜಿಂಗ್(ಮಾ.02): ಈಗಾಗಲೇ ಮಧ್ಯಪ್ರಾಚ್ಯ ದೇಶಗಳು, ಪಾಶ್ಚಾತ್ಯ ದೇಶಗಳಲ್ಲಿ ರಕ್ತದ ಹೊಳೆ ಹರಿಸಿರುವ ಇಸ್ಲಾಮಿಕ್ ಸ್ಟೇಟ್ (ಐಸಿಸ್) ಸಂಘಟನೆ ಉಗ್ರರು ಈಗ ಚೀನಾಗೂ ಕಾಲಿರಿಸಿದ್ದಾರೆ.
ಚೀನಾದ ಕ್ಸಿಂಜಿಯಾಂಗ್ ಪ್ರಾಂತ್ಯದಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ‘ಉಯಿಗುರ್’ ಎಂಬ ಇಸ್ಲಾಮಿಕ್ ಉಗ್ರ ಸಂಘಟನೆಯು ಐಸಿಸ್ ಜೊತೆಗೂಡಿದೆ ಎನ್ನಲಾಗಿದ್ದು, ‘ನಾವು ರಕ್ತವನ್ನು ನದಿಯಂತೆ ಹರಿಸಲಿದ್ದೇವೆ’ ಎಂದು ಚೀನಾದಲ್ಲಿ ಅಂತರ್ಜಾಲದ ಮೂಲಕ ವಿಡಿಯೋ ಹರಿಬಿಟ್ಟಿದೆ. ಮೂಲಗಳ ಪ್ರಕಾರ ಐಸಿಸ್‌ಗೆ ಉಯಿಗುರ್ ಉಗ್ರರು ನಿಷ್ಠೆ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಎಚ್ಚರಗೊಂಡಿರುವ ಚೀನಾ ಸೇನೆಯು, ಈಗಾಗಲೇ ವಾಯವ್ಯ ಚೀನಾದಲ್ಲಿ ಸಭೆ ನಡೆಸಿ ಉಗ್ರವಾದದ ವಿರುದ್ಧ ಪಣ ತೊಡುವ ಶಪಥಗೈದಿದೆ. ಉಯಿಗುರ್ ಉಗ್ರರ ವಿರುದ್ಧ ಚೀನಾ ಬಹುಕಾಲದಿಂದ ಸೆಣಸುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.