ಐಸಿಸ್ ಮುಖ್ಯಸ್ಥ ಬಾಗ್ದಾದಿಯನ್ನು ಸುತ್ತುವರೆದ ಇರಾಕ್ ಸೇನೆ

By Suvarna Web DeskFirst Published Nov 2, 2016, 9:14 AM IST
Highlights

ಖಚಿತ ಮಾಹಿತಿ ಮೇರೆಗೆ ಅಲ್ ಬಾಗ್ದಾದಿಯ ಅಡಗು ತಾಣದ ಮೇಲೆ ದಾಳಿ ಇರಾಕ್ ಸೇನೆ, ಉಗ್ರನ ಅಡಗುತಾಣವನ್ನು ಸುತ್ತುವರೆದಿದೆ ಎಂದು ದಿ ಇಂಡಿಪೆಂಡೆಂಟ್ ವರದಿ ಮಾಡಿದೆ.

ಲಂಡನ್(ನ.02): ಜಾಗತಿಕ ಶಾಂತಿಗೆ ತಲೆನೋವಾಗಿರುವ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಮುಖ್ಯಸ್ಥ ಅಬು ಬಕ್ರ್ ಅಲ್ ಬಾಗ್ದಾದಿಯನ್ನು ಮೊಸಲ್ ಪಟ್ಟಣದಲ್ಲಿ ಇರಾಕ್ ಸೇನೆ ಸುತ್ತುವರಿದಿದೆ ಎಂದು ವರದಿಯಾಗಿದೆ.

2014ರಲ್ಲಿ ತನ್ನನ್ನು ತಾನು ಖಲೀಫ್ ಎಂದು ಘೋಷಿಸಿಕೊಳ್ಳುವ ಮೂಲಕ ಜಗತ್ತಿಗೆ ಅಚ್ಚರಿ ಮೂಡಿಸಿದ್ದ ಬಾಗ್ದಾದಿ, ಇರಾಕ್ ನಗರದ ಮೊಸುಲ್ ಪಟ್ಟಣದಲ್ಲಿ ಅವಿತು ಕೊಂಡಿದ್ದ ಎನ್ನಲಾಗಿದೆ. ಖಚಿತ ಮಾಹಿತಿ ಮೇರೆಗೆ ಅಲ್ ಬಾಗ್ದಾದಿಯ ಅಡಗು ತಾಣದ ಮೇಲೆ ದಾಳಿ ಇರಾಕ್ ಸೇನೆ, ಉಗ್ರನ ಅಡಗುತಾಣವನ್ನು ಸುತ್ತುವರೆದಿದೆ ಎಂದು ದಿ ಇಂಡಿಪೆಂಡೆಂಟ್ ವರದಿ ಮಾಡಿದೆ.

ಒಂದುವೇಳೆ ಬಾಗ್ದಾದಿಯನ್ನು ಸೆರೆಹಿಡಿದರೆ ಐಸಿಸ್ ಭಯೋತ್ಪಾದಕ ಸಂಘಟನೆಯ ಬಲ ಕುಗ್ಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.  

click me!