ಹನಿಟ್ರ್ಯಾಪ್ ಮೂಲಕ ಸೇನಾ ಗೌಪ್ಯತೆ ಬಯಲು ! : ಭಾರತೀಯ ಸೇನೆಗೆ ಹೊಸ ತಲೆ ನೋವು

Published : Oct 13, 2016, 04:57 PM ISTUpdated : Apr 11, 2018, 01:13 PM IST
ಹನಿಟ್ರ್ಯಾಪ್ ಮೂಲಕ ಸೇನಾ ಗೌಪ್ಯತೆ ಬಯಲು ! :  ಭಾರತೀಯ ಸೇನೆಗೆ ಹೊಸ ತಲೆ ನೋವು

ಸಾರಾಂಶ

ಮೊದಲಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸೇನಾ ಅಧಿಕಾರಿಗಳಿಗೆ ಮುದ್ದಾದ ಮುಖದ ಹುಡುಗಿಯರ ಮೂಲಕ ಸ್ನೇಹಪೂರ್ವಕ ಮನವಿಗಳನ್ನ ಕಳಿಸುತ್ತಾರೆ.

ನವದೆಹಲಿ(ಅ.13): ಪದೇ ಪದೇ ಮಿತಿ ಮೀರುತ್ತಿರುವ ಪಾಕಿಸ್ತಾನದ ಉಗ್ರರ ಪುಂಡಾಟಕ್ಕೆ ಕೊನೆಯೇ ಇಲ್ಲದಂತಾಗಿದೆ. ಭಾರತೀಯ ಸೇನೆಯ ಮೇಲೆ ಪ್ರತಿಕಾರ ತೀರಿಸಿಕೋಳ್ಳಲು ಉಗ್ರರು ಹವಣಿಸುತ್ತಿದ್ದಾರೆ. ಈ ಸಂಬಂಧ ಉಗ್ರರು 1000 ಕ್ಕೂ ಹೆಚ್ಚು ಸೇನಾಧಿಕಾರಿಗಳನ್ನ ತನ್ನ ಖೆಡ್ಡಾಕ್ಕೆ ಬಿಳಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ. ಅದು ಹೇಗೆ? ಅಂತೀರಾ ಮುಂದಿನ ಸ್ಟೋರಿ ಓದಿ

ಮೊದಲಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸೇನಾ ಅಧಿಕಾರಿಗಳಿಗೆ ಮುದ್ದಾದ ಮುಖದ ಹುಡುಗಿಯರ ಮೂಲಕ  (ಆದರೆ ಇದನೆಲ್ಲ ಕಾರ್ಯ ನಿರ್ವಹಿಸುವವರು ಹೈಟೆಕ್ ಪುರುಷರೆ)ಸ್ನೇಹಪೂರ್ವಕ ಮನವಿಗಳನ್ನ ಕಳಿಸುತ್ತಾರೆ. ಆ ಮೂಲಕ ಆರಂಭವಾಗುವ ಇವರ ದುಷ್ಕೃತ್ಯ ಮುಂದೆ ಅವರ ಬಳಿ ಆಸಕ್ತರಂತೆ ದೇಶ ಭಕ್ತರಂತೆ ವರ್ತಿಸಿ ಸೇನಾ ಕಾರ್ಯಚರಣೆಯ ಬಗೆಗೆ ತಿಳಿದುಕೊಳ್ಳುತ್ತಾರೆ.(ಇದಕ್ಕೆ ಅಂತಲೇ ನಕಲಿ ಖಾತೆಗಳನ್ನು ಸಹ ತೆರೆಯುತ್ತಾರೆ) ಕರಾಚಿಯಲ್ಲಿ ಕೂತು ಸಾಜಿದ್ ರಾಣಾ, ಅಬಿದ್ ರಾಣಾ ನೇತೃತ್ವದ 300 ಸದಸ್ಯರಿಂದ ಟ್ರ್ಯಾಪ್ ನಡೀತಿತ್ತು. ಇದಕ್ಕೆ ಪಾಕ್ ಸರ್ಕಾರ ಅಂದರೆ ಐಎಸ್​ಐ ಅಧಿಕಾರಿಗಳ ಬೆಂಬಲವೂ ಇತ್ತು ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ಪಾಕ್ ಸಂರಚಿತ ಇಂಡಿಯನ್ ಡಿಫೆನ್ಸ್ ಌಪ್ ಡೌನ್​ಲೋಡ್ ಆಗುತ್ತಿದ್ದಂತೆ ಅಧಿಕಾರಿಯ ಮೊಬೈಲ್ ಮಾಹಿತಿ ತಮಗೆ ಅರಿವು ಆಗದಂತೆ ಪಾಕಿಸ್ತಾನಕ್ಕೆ ತಲುಪುತಿತ್ತು.

ಹನಿಟ್ರ್ಯಾಪ್ ಮೂಲಕ ಅಧಿಕಾರಿಗಳನ್ನೇ ಖೆಡ್ಡಾಕೆ ಬೀಳಿಸಿದ ಉಗ್ರರು

ಇಂತಹದೊಂದು ಮಾಹಿತಿಯನ್ನು ಖಾತ್ರಿಗೊಳಿಸಿದ್ದು ಭಾರತೀಯ ಭದ್ರತಾ ಸಂಸ್ಥೆ. 2015ರ  ಡಿಸಂಬರ್ ತಿಂಗಳಿನಲ್ಲಿ ಸೇನಾ ರಹಸ್ಯ ಬಯಲು ಮಾಡಿದ ಕಾರಣದಿಂದ  ಭಾರತೀಯ ವಾಯು ಸೇನೆಯ ಅಧಿಕಾರಿ ರಂಜಿತ್ ಬಂಧನವಾಗಿತ್ತು. ಅವರು ಸಹ ಇಂತಹ ಬಲೆಗೆ ಬಿದಿದ್ದರು ಎಂಬುದು ತನಿಖೆಯ ನಂತರವಷ್ಟೆ ಬೆಳಕಿಗೆ ಬಂದಿದ್ದು.  ರಂಜಿತ್ ಕೊಟ್ಟ ಮಾಹಿತಿಯನ್ನು ಆದರಿಸಿ ಇದನ್ನ ಭೇದಿಸಿರುವ ದೆಹಲಿಯ ಸೈಬರ್ ಕ್ರೈಂ ಪೋಲಿಸರು ಹನಿ ಟ್ರ್ಯಾಪ್ ಅನ್ನು ದೃಢಪಡಿಸಿದ್ದಾರೆ.

ಸೇನೆಯಿಂದ ಕಟ್ಟಪ್ಪಣೆ

ಈ ರೀತಿಯ ಘಟನೆಗಳು ಜರುಗುತ್ತಿರುವುದರಿಂದ ಸೇನೆಯು ತನ್ನ ಅಧಿಕಾರಿಗಳಿಗೆ ಕಟ್ಟಪ್ಪಣೆ ಮಾಡಿದ್ದು, ಫೇಸ್'ಬುಕ್, ವ್ಯಾಟ್ಸಪ್ ಮುಂತಾದ ಸಾಮಾಜಿಕ ಮಾಧ್ಯಮಗಳಲ್ಲಿ ಅನಾಮಧೇಯ ಹೆಸರಿನಲ್ಲಿ ಬರುವ ಮನವಿಗಳಿಗೆ ತಮ್ಮ ವೈಯಕ್ತಿಕ ಮಾಹಿತಿಗಳನ್ನು ಹಂಚಿಕೊಳ್ಳಬಾರದೆಂದು ಕಟ್ಟಪ್ಪಣೆ ಮಾಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಬಡ್ಡಿ ಟೂರ್ನಿ ವೇಳೆಯಲ್ಲೇ ಪ್ಲೇಯರ್‌ ರಾಣಾ ಬಲ್ಚೌರಿಯಾ ಕೊ*ಲೆ!
ಅತ್ಯಂತ ಕಡಿಮೆ ಬೆಲೆಯ ಹ್ಯಾಪಿ ನ್ಯೂ ಇಯರ್‌ ಪ್ಲ್ಯಾನ್‌ ರಿಲೀಸ್‌ ಮಾಡಿದ ಜಿಯೋ!