ಅಬ್ಬಾ! ಇಶಾ ಅಂಬಾನಿ - ಆನಂದ್ ಗೆ 450 ಕೋಟಿಯ ಗಿಫ್ಟ್

Published : Nov 15, 2018, 01:35 PM ISTUpdated : Nov 15, 2018, 02:03 PM IST
ಅಬ್ಬಾ! ಇಶಾ ಅಂಬಾನಿ - ಆನಂದ್ ಗೆ 450 ಕೋಟಿಯ ಗಿಫ್ಟ್

ಸಾರಾಂಶ

ವಿಶ್ವದ ಅತ್ಯಂತ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ ಹಾಗೂ ಆನಂದ್ ಪಿರಮಾಳ್ ದಂಪತಿಗೆ ಈ ಭರ್ಜರಿ ಗಿಫ್ಟ್ ಒಂದು ವಿವಾಹದ ಬಳಿಕ ಸಿಗುತ್ತಿದೆ. ಒಟ್ಟು 450 ಕೋಟಿ ಬೆಲೆ ಬಾಳುವ ಗಿಫ್ಟ್ ಆನಂದ್ ಪೋಷಕರಿಂದ ದೊರೆಯುತ್ತಿದೆ. 

ಮುಂಬೈ :  ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಪುತ್ರಿ ಇಶಾ ಅಂಬಾನಿ, ಅಜಯ್ ಹಾಗೂ ಸ್ವಾತಿ ಪಿರಮಾಳ್ ಅವರ ಪುತ್ರ ಆನಂದ್ ಪಿರಮಾಳ್ ಅವರ ಕೈ ಹಿಡಿಯುತ್ತಿದ್ದಾರೆ. 

ಇದೇ ಡಿಸೆಂಬರ್ 12ರಂದು ವಿವಾಹ ಸಮಾರಂಭ ನಡೆಯುತ್ತಿದೆ. ಪಿರಮಾಳ್ ಹಾಗೂ ಅಂಬಾನಿ ಕುಟುಂಬ ಕಳೆದ ಸೆಪ್ಟೆಂಬರ್ ನಲ್ಲಿ ಇಟಲಿಯಲ್ಲಿ ಈ ಜೋಡಿಯ ನಿಶ್ಚಿತಾರ್ಥವನ್ನು ನಡೆಸಿತ್ತು. 

ಡಿಸೆಂಬರ್ ತಿಂಗಳಲ್ಲಿ ರಾಯಲ್ ವೆಡ್ಡಿಂಗ್ ನಡೆಯಲಿದ್ದು ಈಗಾಗಲೇ ಅಂಬಾನಿ ಹಾಗೂ ಪಿರಮಾಳ್ ಕುಟುಂಬ ಭರ್ಜರಿ ಸಿದ್ಧತೆಯಲ್ಲಿ ತೊಡಗಿದೆ.

ವಿವಾಹದ ಬಳಿಕ ಆನಂದ್ ಹಾಗೂ ಇಶಾ ಮುಂಬೈನ ವರ್ಲಿ ಪ್ರದೇಶದಲ್ಲಿ ಸಮುದ್ರಕ್ಕೆ ಮುಖ ಮಾಡಿರುವ ಸುಂದರವಾದ ಬಂಗಲೆಯಲ್ಲಿ ವಾಸ ಮಾಡಲಿದ್ದಾರೆ. 

450 ಕೋಟಿ ಬೆಲೆ ಬಾಳುವ ಈ ಬಂಗಲೆಯನ್ನು 6 ವರ್ಷಗಳ ಹಿಂದೆ ಪಿರಮಾಳ್ ಕುಟುಂಬ ಖರೀದಿ ಮಾಡಿತ್ತು. ಇದೀಗ ನೂತನ ಜೋಡಿ ಮದುವೆ ಬಳಿಕ ಮನೆ ಪ್ರವೇಶಿಸಲಿದ್ದಾರೆ. 

ಈ ಬಂಗೆಲೆಗೆ ಗುಲಿಟಾ ಬಿಲ್ಡಿಂಗ್ ಎಂದು ಹೆಸರಿದ್ದು ಆನಂದ್ ಪೋಷಕರಾದ ಸ್ವಾತಿ ಹಾಗೂ ಅಜಯ್ ದಂಪತಿ ವಧು ವರರಿಗೆ ಈ ಬಂಗಲೆಯನ್ನು ಉಡುಗೊರೆಯಾಗಿ ನೀಡುತ್ತಿದ್ದಾರೆ.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಪಶ್ಚಿಮ ಬಂಗಾಳದಲ್ಲಿ ಬಾಬ್ರಿ ಮಸೀದಿಗೆ ಅಡಿಗಲ್ಲು ಹಾಕಿದ ಟಿಎಂಸಿ ಶಾಸಕ
ಇಡಿಯಿಂದ ಮತ್ತೆ ಅನಿಲ್ ಅಂಬಾನಿ 1120 ಕೋಟಿ ಹೆಚ್ಚುವರಿ ಆಸ್ತಿ ಮುಟ್ಟುಗೋಲು