ಇದೇನಾ ‘ಅಚ್ಛೇ ದಿನ್’ ? ಪ್ರಧಾನಿ ಮೋದಿಗೆ ಕಪಿಲ್ ಶರ್ಮಾ ಪ್ರಶ್ನೆ

Published : Sep 09, 2016, 04:55 PM ISTUpdated : Apr 11, 2018, 01:11 PM IST
ಇದೇನಾ ‘ಅಚ್ಛೇ ದಿನ್’ ? ಪ್ರಧಾನಿ ಮೋದಿಗೆ ಕಪಿಲ್ ಶರ್ಮಾ ಪ್ರಶ್ನೆ

ಸಾರಾಂಶ

ಮುಂಬೈ (ಸೆ.09): ಸದಾ ಜಾಲಿ ಮೂಡ್​ನಲ್ಲಿರುವ ಟಿವಿ ನಿರೂಪಕ ಕಪಿಲ್ ಶರ್ಮಾ ಇವತ್ತು ಗರಂ ಆಗಿದ್ದರು.  ಆ ಕೋಪವನ್ನು ಪ್ರಧಾನಿ ನರೇಂದ್ರ ಮೋದಿಯವರ ಮೇಲೂ ತೋರಿಸಿದ್ದಾರೆ. ಮೋದಿ ಸಾಧನೆಯ ಬಗ್ಗೆ ತಮ್ಮ ಕಾಮಿಡಿ ಶೋಗಳಲ್ಲಿ ಆಗಾಗ ಹಾಡಿ ಹೊಗಳುತ್ತಿದ್ದ ಕಪಿಲ್​ ಇಂದು ನೀವು ಮಾತು ಕೊಟ್ಟಿದ್ದ ‘ಅಚ್ಛೇ ದಿನ್’ ಇದೇನಾ ಅಂತಾ ಪ್ರಶ್ನಿಸಿದ್ದಾರೆ.

ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್​ ಅಧಿಕಾರಿಯೊಬ್ಬ ಕಪಿಲ್ ತಮ್ಮ ಕಚೇರಿ ಆರಂಭಿಸಲು ಬಿಎಂಸಿಗೆ 5 ಲಕ್ಷ ರೂಪಾಯಿ ಲಂಚ ಕೊಡಬೇಕಾಯಿತಂತೆ. ಈ ಬಗ್ಗೆ ಸರಣಿ ಟ್ವಿಟ್​ಗಳ ಮೂಲಕ ಕಪಿಲ್ ಆಕ್ರೋಶ ಹೊರಹಾಕಿದ್ದಾರೆ. ಇದಕ್ಕೆ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಟ್ವೀಟ್ ಮಾಡಿದ್ದಾರೆ. ಲಂಚ ಕೇಳಿದ್ದು ಯಾರು ಎಂಬುದನ್ನು ತಿಳಿಸಿ. ನಾನು ವಿಚಾರಣೆಗೆ ಆದೇಶಿಸಿ ಶಿಸ್ತು ಕ್ರಮ ಕೈಗೊಳ್ಳುತ್ತೇನೆ ಎಂದಿದ್ದಾರೆ.

ಕಪಿಲ್ ಕಟ್ಟಡ ಅಕ್ರಮ !

ಕಾಮಿಡಿ ಸ್ಟಾರ್ ಕಪಿಲ್ ಶರ್ಮಾ ಟ್ವೀಟ್​ ಆಕ್ರೋಶಕ್ಕೆ, ಮೊದಲು ಬಿಎಮ್ ಸಿ ಪ್ರತಿಕ್ರಿಯಿಸಲು ನಿರಾಕರಿಸಿತ್ತು. ಕೊನೆಗೆ ಪ್ರತಿಕ್ರಿಯೆ ನೀಡಿರುವ ಬಿಎಂಸಿ ಕಪಿಲ್ ಕಟ್ಟಡ ಅಕ್ರಮವಾಗಿದ್ದಾಗಿಯೂ ಈ ಬಗ್ಗೆ ಕಪಿಲ್ ಗೆ ಈಗಾಗಲೇ ನೋಟೀಸ್ ನೀಡಿದ್ದಾಗಿಯೂ ಹೇಳಿದೆ. ಕಪಿಲ್ ನೆರೆಯವರೂ ಕೂಡಾ ಬಿಎಮ್ ಸಿ ಹೇಳಿಕೆಯನ್ನು ಸಮರ್ಥಿಸಿದ್ದು ಕಪಿಲ್ ಕಛೇರಿ ಕಟ್ಟಡ ನಿರ್ಮಾಣಕ್ಕೆ ಒಪ್ಪಿಗೆ ಪತ್ರವೇ ಇಲ್ಲವೆಂದು ಹೇಳಿದ್ದಾರೆ. ಕಟ್ಟಣ ನಿರ್ಮಾಣ ಕಾಮಗಾರಿ ನಿಲ್ಲಿಸುವಂತೆ ಬಿಎಮ್ ಸಿ ಕಪಿಲ್ ಗೆ ನೀಡಿದ ನೋಟಿಸ್ ಸಹ ಬಹಿರಂಗಗೊಂಡಿದೆ. ಲಂಚ ಆರೋಪವೇನೋ ಮಾಡಿರುವ ಕಪಿಲ್​ಗೆ ಬಿಎಂಸಿ ಸರಿಯಾಗೇ ತಿರುಗೇಟು ನೀಡಿದೆ. ಸದ್ಯ ತಪ್ಪು ಯಾರದ್ದು ಎಂದು ತನಿಖೆ ನಡೆಯಬೇಕಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಳ್ಳಾರಿಯಲ್ಲಿ ಎಫ್‌ಡಿಎ ಸ್ಪರ್ಧಾತ್ಮಕ ಪರೀಕ್ಷೆ: ಕಾಲು ಗೆಜ್ಜೆ ತೆಗೆದು ಪರೀಕ್ಷೆ ಬರೆದ ವಿದ್ಯಾರ್ಥಿನಿಯರು
ಜವರಾಯನಂತೆ ಬಂತು ಜಲ್ಲಿಕಲ್ಲು ತುಂಬಿದ್ದ ಲಾರಿ: ಮನೆ ಮುಂದೆ ಚಳಿ ಕಾಯಿಸುತ್ತಿದ್ದ 90 ವರ್ಷದ ವೃದ್ಧ ಬಲಿ