ಪದ್ಮ ಪ್ರಶಸ್ತಿಗೆ ಹೆಸರು ಶಿಫಾರಸ್ಸು ಮಾಡಲು ಸಾರ್ವಜನಿಕರಿಗೆ ಅವಕಾಶ

By Internet DeskFirst Published Sep 9, 2016, 4:36 PM IST
Highlights

ನವದೆಹಲಿ (ಸೆ.09): ಪ್ರತಿಷ್ಠಿತ ಪದ್ಮ ಸಾಲಿನ ಪ್ರಶಸ್ತಿಗೆ ಸಾಧಕರ ಹೆಸರನ್ನು ಶಿಫಾರಸ್ಸುಗೊಳಿಸಲು ಸರ್ಕಾರ ಸಾರ್ವಜನಿಕರಿಗೆ ಅವಕಾಶ ನೀಡಿದೆ. ಶಿಫಾರಸ್ಸು ಪ್ರಕ್ರಿಯೆ, ಪ್ರಶಸ್ತಿ ಆಯ್ಕೆ ಪ್ರಕ್ರಿಯೆಯನ್ನು ಪಾರದರ್ಶಕಗೊಳಿಸಲು ಸರ್ಕಾರ ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡಿದೆ.

ನಾಮಾಂಕಿತ ಪ್ರಕ್ರಿಯೆಯನ್ನು ಆನ್ ಲೈನ್ ನಲ್ಲಿ ಮಾಡಬಹುದು, ನಾಮಾಂಕಿತದಾರರು ತಮ್ಮ ಆಧಾರ್ ಕಾರ್ಡ್ ವಿವರವನ್ನು ಸಲ್ಲಿಸಬೇಕು.

ಪದ್ಮ ಪ್ರಶಸ್ತಿಗೆ ಸಾಧಕರನ್ನು ಶಿಫಾರಸ್ಸು ಮಾಡಲು ಇದೇ ಮೊದಲ ಬಾರಿಗೆ  ಸರ್ಕಾರ ಸಾರ್ವಜನಿಕರಿಗೆ ಅವಕಾಶ ಮಾಡಿಕೊಟ್ಟಿದೆ. ಪ್ರಶಸ್ತಿ ಆಯ್ಕೆಯನ್ನು ಪಾರದರ್ಶಕಗೊಳಿಸಲು ಮತ್ತು ನಿಜವಾದ ಸಾಧಕರಿಗೆ ಪ್ರಶಸ್ತಿ ಸಲ್ಲುವಂತೆ ಮಾಡಲು ಈ ರೀತಿ ಮಾಡಲಾಗಿದೆ ಎಂದು ಗೃಹ ಸಚಿವಾಲಯದ ವಕ್ತಾರ ತಿಳಿಸಿದ್ದಾರೆ.

ಸರ್ಕಾರ ಈಗಾಗಲೇ 1700 ಶಿಫಾರಸ್ಸು ಹೆಸರುಗಳನ್ನು ಸ್ವೀಕರಿಸಿದೆ. ಹೆಸರನ್ನು ಸಲ್ಲಿಸಲು ಇದೇ ತಿಂಗಳ 15 ಕೊನೆಯ ದಿನಾಂಕವಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.

click me!