ಟಾಟಾ ನ್ಯಾನೊಗೆ 'ಟಾಟಾ'

Published : Apr 16, 2017, 04:41 AM ISTUpdated : Apr 11, 2018, 12:58 PM IST
ಟಾಟಾ ನ್ಯಾನೊಗೆ 'ಟಾಟಾ'

ಸಾರಾಂಶ

ಮಾರ್ಚ್ 2009ರಲ್ಲಿ ಮಾರುಕಟ್ಟೆ ಪ್ರವೇಶಿಸಿದ ನ್ಯಾನೋ ಕಾರಿನ ಮಾರಾಟ ಈಗ ಪಾತಾಳಕ್ಕೆ ಕುಸಿದಿದೆ. ಮಾಚ್‌ರ್‍ 2017ರಲ್ಲಿ ಇಡೀ ದೇಶದಲ್ಲಿ ಕೇವಲ 174 ಕಾರುಗಳು ಮಾರಾಟವಾಗಿವೆ. ಇದೇ ರೀತಿ 2016ರ ಏಪ್ರಿಲ್‌ನಿಂದ 2017ರ ಮಾಚ್‌ರ್‍ವರೆಗೆ ಕೇವಲ 7591 ನ್ಯಾನೋ ಕಾರುಗಳು ಮಾರಾಟವಾಗಿವೆ. 2015-16ರಲ್ಲಿ 21,012 ಕಾರು ಮಾರಾಟವಾ​ಗಿದ್ದವು. ಹೀಗಾಗಿ ಈಗ ಮಾರಾಟದ ಕುಸಿತದ ಪ್ರಮಾಣ ಶೇ.63ರಷ್ಟಿದೆ. 1 ಲಕ್ಷ ರು. ಕಾರು ಎಂದೇ ಖ್ಯಾತಿ ಪಡೆದಿರುವ ನ್ಯಾನೋ ಉದ್ಘಾಟನೆಗೊಂಡಾಗ 2 ಲಕ್ಷ ಬುಕ್ಕಿಂಗ್‌ಗಳಾಗಿದ್ದವು. ಅಂತಾರಾಷ್ಟ್ರೀಯ ಮಟ್ಟ​ದಲ್ಲೂ ಸುದ್ದಿ ಮಾಡಿತ್ತು.

ನವದೆಹಲಿ(ಏ.16): ವಿಶ್ವದ ಅತಿ ಅಗ್ಗದ ಕಾರು ಎಂಬ ಪ್ರಚಾರದೊಂದಿಗೆ ರಸ್ತೆಗಿಳಿದಿದ್ದ ಟಾಟಾ ನ್ಯಾನೋ ಕಾರಿನ ಅಂತಿಮ ಪಯಣ ಆರಂಭ​ವಾಗಿದೆಯೇ? ಹೌದು. ಅಂಕಿ-ಅಂಶಗಳನ್ನು ಗಮನಿಸಿದಾಗ ಇದು ವಿದಿತವಾಗುತ್ತದೆ.

ಮಾರ್ಚ್ 2009ರಲ್ಲಿ ಮಾರುಕಟ್ಟೆ ಪ್ರವೇಶಿಸಿದ ನ್ಯಾನೋ ಕಾರಿನ ಮಾರಾಟ ಈಗ ಪಾತಾಳಕ್ಕೆ ಕುಸಿದಿದೆ. ಮಾಚ್‌ರ್‍ 2017ರಲ್ಲಿ ಇಡೀ ದೇಶದಲ್ಲಿ ಕೇವಲ 174 ಕಾರುಗಳು ಮಾರಾಟವಾಗಿವೆ. ಇದೇ ರೀತಿ 2016ರ ಏಪ್ರಿಲ್‌ನಿಂದ 2017ರ ಮಾಚ್‌ರ್‍ವರೆಗೆ ಕೇವಲ 7591 ನ್ಯಾನೋ ಕಾರುಗಳು ಮಾರಾಟವಾಗಿವೆ. 2015-16ರಲ್ಲಿ 21,012 ಕಾರು ಮಾರಾಟವಾ​ಗಿದ್ದವು. ಹೀಗಾಗಿ ಈಗ ಮಾರಾಟದ ಕುಸಿತದ ಪ್ರಮಾಣ ಶೇ.63ರಷ್ಟಿದೆ. 1 ಲಕ್ಷ ರು. ಕಾರು ಎಂದೇ ಖ್ಯಾತಿ ಪಡೆದಿರುವ ನ್ಯಾನೋ ಉದ್ಘಾಟನೆಗೊಂಡಾಗ 2 ಲಕ್ಷ ಬುಕ್ಕಿಂಗ್‌ಗಳಾಗಿದ್ದವು. ಅಂತಾರಾಷ್ಟ್ರೀಯ ಮಟ್ಟ​ದಲ್ಲೂ ಸುದ್ದಿ ಮಾಡಿತ್ತು.

ಆದರೆ ಕಾರಿನ ತಾಂತ್ರಿಕತೆಯಲ್ಲಿ ದೋಷಗಳು, ಕೆಲವೊಮ್ಮೆ ಕಾರಿನಲ್ಲಿ ಏಕಾಏಕಿ ಆದ ಬೆಂಕಿ ದುರಂತಗಳ ಕಾರಣ, ನ್ಯಾನೋ ಬಗ್ಗೆ ಜನರಲ್ಲಿ ಅಪನಂಬಿಕೆ ಮೂಡತೊಡಗಿ ಜನಪ್ರಿಯತೆ ಇಳಿಯಿತು. ಹೀಗಾಗಿ ನ್ಯಾನೋ ಉತ್ಪಾದನೆಗೆಂದೇ ನಿರ್ಮಿಸಲಾಗಿದ್ದ ಗುಜರಾತ್‌ನ ಸಾನಂದ್‌ ನ್ಯಾನೋ ಕಾರು ನಿರ್ಮಾಣ ಘಟಕ ಈಗ ಟಾಟಾದ ಟಿಯಾಗೋ ಹ್ಯಾಚ್‌ಬ್ಯಾಕ್‌ ಮತ್ತು ಟೈಗರ್‌ ಸೆಡಾನ್‌ ಕಾರುಗಳ ಉತ್ಪಾದನೆಯಲ್ಲಿ ಬ್ಯುಸಿಯಾಗಿದೆ.

ಮಾಸಿಕ 20 ಸಾವಿರ ನ್ಯಾನೋ ಕಾರು ಉತ್ಪಾದನೆ ಸಾಮರ್ಥ್ಯ ಹೊಂದಿದ್ದ ಸಾನಂದ್‌ ಘಟಕದಲ್ಲಿ ನ್ಯಾನೋ ಉತ್ಪಾದನೆ ಈಗ ಶೇ.20ಕ್ಕಿಳಿದಿದೆ. ಟಾಟಾ ನ್ಯಾನೋ ಯೋಜನೆಯಿಂದ ಕಂಪನಿಗೆ 6,400 ಕೋಟಿ ರು. ನಷ್ಟವಾಗಿದೆ ಎಂದು ಟಾಟಾ ಕಂಪನಿ ಪದಚ್ಯುತ ಮುಖ್ಯಸ್ಥ ಸೈರಸ್‌ ಮಿಸ್ತ್ರಿ ಹೇಳಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಂಟೋನ್ಮೆಂಟ್‌ ರೈಲು ನಿಲ್ದಾಣದ 371 ಮರ ಕಡಿಯಲು ಹೈಕೋರ್ಟ್‌ ತಡೆ, ತನ್ನ ಅನುಮತಿ ಇಲ್ಲದೆ ಏನೂ ಮಾಡುವಂತಿಲ್ಲವೆಂದು ಆರ್ಡರ್
ಸ್ಕೂಲ್ ಬಸ್‌ಗೆ ಡಿಕ್ಕಿ ಹೊಡೆದ ಗೂಡ್ಸ್ ವಾಹನ; 20 ವಿದ್ಯಾರ್ಥಿಗಳಿದ್ದ ಶಾಲಾ ವಾಹನ ಪಲ್ಟಿ!