
ಬೆಂಗಳೂರು(ಜ.24): ಆದಾಯ ತೆರಿಗೆ ದಾಳಿ ವೇಳೆ ಆದಾಯ ಮೂಲದ ದಾಖಲೆಯಿಲ್ಲದ ಕೋಟ್ಯಂತರ ರೂ. ಮೌಲ್ಯದ ಆಸ್ತಿ ಪತ್ತೆಯಾದ ಹಿನ್ನೆಲೆಯಲ್ಲಿ ಸಣ್ಣ ಕೈಗಾರಿಕಾ ಸಚಿವ ರಮೇಶ್ ಜಾರಕಿಹೊಳಿ ಅವರ ಸಚಿವ ಸ್ಥಾನ ಉಳಿಯುತ್ತಾ ಎಂಬ ಪ್ರಶ್ನೆ ಉದ್ಭವಿಸಿದೆ.
ರಾಜ್ಯ ಕಾಂಗ್ರೆಸ್ ನಾಯಕತ್ವ ಈ ದಾಳಿಯನ್ನು ರಾಜಕೀಯಪ್ರೇರಿತ ಎಂದು ಸದ್ಯಕ್ಕೆ ಬಣ್ಣಿಸಿದ್ದರೂ, ರಮೇಶ್ ಜಾರಕಿಹೊಳಿ ಅವರ ಬಳಿ 162 ಕೋಟಿ ರೂ. ಮೌಲ್ಯದ ಆದಾಯ ಮೂಲದ ವಿವರಣೆಯಿಲ್ಲದ ಆಸ್ತಿ ಪತ್ತೆಯಾಗಿದೆ ಎಂದು ಆದಾಯ ತೆರಿಗೆ ಇಲಾಖೆಯೇ ಅಧಿಕೃತವಾಗಿ ಪ್ರಕಟಣೆ ನೀಡಿರುವುದರಿಂದ ಅವರು ಸಚಿವ ಸ್ಥಾನದಲ್ಲಿ ಮುಂದುವರೆಯುವುದು ಕಷ್ಟವಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಕೇವಲ ಏಳು ತಿಂಗಳ ಹಿಂದೆ ಸಿದ್ದರಾಮಯ್ಯ ಅವರ ಸಚಿವ ಸಂಪುಟವನ್ನು ಸೇರಿದ್ದ ರಮೇಶ್ ಜಾರಕಿಹೊಳಿ ಅವರಿಗೆ ಮಂತ್ರಿಗಿರಿ ಲಭಿಸಿದ್ದು ಅವರ ಸಹೋದರ ಸತೀಶ್ ಜಾರಕಿಹೊಳಿ ಅವರನ್ನು ಸಂಪುಟದಿಂದ ಕೈಬಿಟ್ಟಿದ್ದರಿಂದ.
ಕುಟುಂಬಕ್ಕೆ ಸಚಿವ ಖಾತೆ?
ತಮಗೆ ಮಹತ್ವದ ಖಾತೆ ದೊರೆಯಲಿಲ್ಲ ಎಂಬ ಕಾರಣಕ್ಕೆ ಅಸಮಾಧಾನಗೊಂಡಿದ್ದ ಹಾಗೂ ತಾವು ನಿರ್ವಹಿಸುತ್ತಿದ್ದ ಅಬಕಾರಿ ಖಾತೆಯಿಂದ ಬದಲಾವಣೆ ಬಯಸಿದ್ದ ಸತೀಶ್ ಜಾರಕಿಹೊಳಿ ಅವರನ್ನು ಸಂಪುಟ ಪುನಾರಚನೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೈಬಿಟ್ಟು ರಮೇಶ್ ಜಾರಕಿಹೊಳಿ ಅವರಿಗೆ ಅವಕಾಶ ನೀಡಿದ್ದರು.
ಈಗ ರಮೇಶ್ ಜಾರಕಿಹೊಳಿ ಅವರು ಆದಾಯ ತೆರಿಗೆ ದಾಳಿಯಲ್ಲಿ ಆದಾಯ ಮೂಲ ತೋರಿಸಲಾಗದಷ್ಟುಆಸ್ತಿಯ ಸಂಗ್ರಹಣೆ ಮಾಡಿರುವುದು ಪತ್ತೆಯಾಗಿದೆ. ಹೀಗಾಗಿ ಅವರನ್ನು ಸಂಪುಟದಿಂದ ಕೈ ಬಿಡುವಂತೆ ಪಕ್ಷದ ಆಂತರಿಕ ವಲಯದಿಂದಲೇ ಒತ್ತಡ ನಿರ್ಮಾಣವಾಗಲಿದೆ. ಈ ಹಂತದಲ್ಲಿ ರಮೇಶ್ ಜಾರಕಿಹೊಳಿ ಅವರ ರಾಜಿನಾಮೆ ಪಡೆಯಲು ರಾಜ್ಯ ನಾಯಕತ್ವ ಮುಂದಾಗುವ ಸಾಧ್ಯತೆಯಿದೆ. ರಮೇಶ್ ಜಾರಕಿಹೊಳಿ ನಿರ್ಗಮನ ಅನಿವಾರ್ಯವಾಗುವ ಪರಿಸ್ಥಿತಿ ನಿರ್ಮಾಣವಾದರೆ ಆಗ ರಾಜ್ಯ ನಾಯಕತ್ವದ ಮುಂದೆ ಎರಡು ದಾರಿಯಿದೆ.
(ಕನ್ನಡಪ್ರಭ ವಾ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.