
ಚೆನ್ನೈ(ಜ.24): ಜಲ್ಲಿಕಟ್ಟುವಿಗೆ ಶಾಶ್ವತ ಪರಿಹಾರ ಬೇಕೆಂದು ಆಗ್ರಹಿಸಿ ನಿನ್ನೆ ಚೆನೈನ ಮರೀನಾ ಬೀಚ್'ನಲ್ಲಿ ನಡೆದ ಪ್ರತಿಭಟನೆ ಅಕ್ಷರ ಸಹ ಹಿಂಸಾ ರೂಪ ಪಡೆದಿದೆ. ಪ್ರತಿಭಟನೆಗೆ ತಮಿಳುನಾಡು ಧಗ ಧಗ ಹೊತ್ತಿ ಉರಿದಿದೆ. ಮತ್ತೊಂದ್ಕಡೆ ಹಿಂಸಾಚಾರಕ್ಕೆ ಪೊಲೀಸರೇ ದಾರಿ ಮಾಡಿಕೊಟ್ಟರಾ ಎನ್ನುವ ಅನುಮಾನ ಕಾಡುತ್ತಿದೆ.
ತಮಿಳುನಾಡಿನಲ್ಲಿ ಜಲ್ಲಿಕಟ್ಟು ಹೋರಾಟ ಉಗ್ರ ಸ್ವರೂಪ ಪಡೆದುಕೊಂಡಿದೆ. ಹಲವೆಡೆ ಬೆಂಕಿ ಹಚ್ಚಿ ಉದ್ವಿಗ್ನ ಸ್ಥಿತಿ ತಲುಪಿದೆ. ಈ ಮಧ್ಯೆ ಹೋರಾಟದಲ್ಲಿ ಕೆಲವಡೆ ಪೊಲೀಸರೇ ಬೆಂಕಿ ಹಚ್ಚಿದ್ರಾ ಅನ್ನೋ ಪ್ರಶ್ನೆ ಎದುರಾಗಿದೆ. ಚೆನ್ನೈನ ಹಲವೆಡೆ ನಿಂತಿದ್ದ ಆಟೋಗಳಿಗೆ ಪೊಲೀಸರು ಬೆಂಕಿ ಹಚ್ಚಿದ್ದಾರೆ ಎನ್ನಲಾಗುತ್ತಿದೆ.
ಈ ಸಂಬಂಧ ದೃಶ್ಯಗಳು ಲಭ್ಯವಾಗಿದ್ದು ಸ್ಥಳೀಯ ಖಾಸಗಿ ಚಾನೆಲ್ನಲ್ಲಿ ಈ ದೃಶ್ಯಗಳ ಪ್ರಸಾರಕ್ಕೆ ತಡೆ ನೀಡಲಾಗಿದೆ ಎನ್ನಲಾಗಿದೆ. ಎಐಐಡಿಎಂಕೆ ಕಾರ್ಯಕರ್ತರಿಂದ ಬೆದರಿಕೆ ಹಿನ್ನೆಲೆಯಲ್ಲಿ ಪ್ರಸಾರಕ್ಕೆ ತಡೆ ಹಿಡಿಯಲಾಗಿದ್ದು, ಪ್ರತಿಭಟನೆ ತೀವ್ರತೆ ಹೆಚ್ಚಿಸಲು ರಾಜಕೀಯ ಪಕ್ಷಗಳು ಮಾಡಿದ ಹುನ್ನಾರವಾ ಇದು ಎನ್ನುವ ಪ್ರಶ್ನೆ ಮೂಡಿದೆ.
ಇನ್ನು ನಿನ್ನೆ ಪ್ರತಿಭಟನೆಯ ನೆಪದಲ್ಲಿ ಹಿಂಸೆಗೆ ಮುಂದಾಗಿದ್ದ ಪ್ರತಿಭಟನಾಕಾರರು ಮರೀನಾ ಬೀಚ್ ಸಮೀಪ ಐಸ್ ಹೌಸ್ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ್ರು. ವಾಹನಗಳಿಗೆ ಬೆಂಕಿ ಹಚ್ಚಿ ವಿಕೃತ ಮೆರೆದ್ರು. ಚೆನ್ನೈ ಮಾತ್ರವಲ್ಲದೆ ಮಧುರೈ, ಕೊಯಮತ್ತೂರು ಸೇರಿದಂತೆ ಹಲವೆಡೆ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು. ಘಟನೆಯಲ್ಲಿ ಪ್ರತಿಭಟನಾಕಾರರು ಹಾಗೂ ಪೊಲೀಸ್ ಸಿಬ್ಬಂದಿ ಗಾಯಗೊಂಡರು.
ಪ್ರತಿಭಟನೆಗೆ ಮಣಿದಿರುವ ತಮಿಳುನಾಡು ಸರ್ಕಾರ, ವಿಧಾನಸಭೆಯಲ್ಲಿ ಜಲ್ಲಿಕಟ್ಟು ವಿಧೇಯಕವನ್ನು ಒಮ್ಮತದಿಂದ ಅಂಗೀಕರಿಸಿದೆ. ಸಿಎಂ ಪನ್ನೀರ್ ಸೆಲ್ವಂ ಮಂಡಿಸಿದ ವಿಧೇಯಕಕ್ಕೆ ಒಮ್ಮತದ ಅಂಗೀಕಾರ ದೊರೆತಿದ್ದು, ಜಲ್ಲಿಕಟ್ಟು ಕ್ರೀಡೆ ನಡೆಸುವುದಕ್ಕೆ ಉಂಟಾಗಿದ್ದ ಕಾನೂನಾತ್ಮಕ ತೊಡಕಿಗೆ ಪರಿಹಾರ ದೊರೆತಿದೆ. ಜಲ್ಲಿಕಟ್ಟು ಮಸೂದೆಯನ್ನು ಅಂಗೀಕರಿಸಿರುವುದನ್ನು ಎಐಎಡಿಎಂಕೆ ಪಕ್ಷ ಟ್ವೀಟ್ ಮೂಲಕ ಸ್ಪಷ್ಟಪಡಿಸಿದೆ. ಒಟ್ಟಾರೆಯಾಗಿ ಶಾಂತಿ ಪ್ರೀಯರು ನಾವು ಎಂದು ಪ್ರತಿಭಟನೆಗೆ ಇಳಿದ ತಮಿಳರು ಹಿಂಸೆಗೆ ಮುಂದಾಗಿರೋದು ತಮಿಳುನಾಡಿನ ಮುಖಭಂಗಕ್ಕೆ ಕಾರಣವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.