ಚಲುವರಾಯಸ್ವಾಮಿ ಅವರನ್ನು ಟಾರ್ಗೆಟ್ ಮಾಡ್ತಾ ಜೆಡಿಎಸ್?

Published : Jul 04, 2018, 12:28 PM IST
ಚಲುವರಾಯಸ್ವಾಮಿ ಅವರನ್ನು ಟಾರ್ಗೆಟ್ ಮಾಡ್ತಾ ಜೆಡಿಎಸ್?

ಸಾರಾಂಶ

ಮಂಡ್ಯದಲ್ಲಿ ಶುರುವಾಯ್ತು ದ್ವೇಷದ ರಾಜಕಾರಣ? ಜೆಡಿಎಸ್ ಪಕ್ಷದ ಟಾರ್ಗೆಟ್ ಚಲುವರಾಯಸ್ವಾಮಿ? ಜೆಡಿಎಸ್ ನಿಂದ ಬಂಡೆದ್ದು ಕಾಂಗ್ರೆಸ್ ಸೇರಿದ್ದ ನಾಯಕ ಚಲುವರಾಯಸ್ವಾಮಿ ಒಡೆತನದ ಕ್ರಷರ್ ಮೇಲೆ ಅಧಿಕಾರಿಗಳ‌ ದಾಳಿ ದಾಳಿಯಲ್ಲಿ ಟಿಪ್ಪರ್ ವಶ, ಕ್ರಷರ್ ಗೆ ಬೀಗ ಮುದ್ರೆ

ಮಂಡ್ಯ(ಜು.4): ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್ ನಿಂದ ಬಂಡೆದ್ದು ಕಾಂಗ್ರೆಸ್ ಪಕ್ಷ ಸೇರಿದ್ದ ಚಲುವರಾಯಸ್ವಾಮಿ ಇದೀಗ ಜೆಡಿಎಸ್ ಪಕ್ಷದ ಟಾರ್ಗೆಟ್ ಆಗಿದ್ದಾರೆ. ಚಲುವರಾಯಸ್ವಾಮಿ ಒಡೆತನದ ಹೊನ್ನಾದೇವಿ ಸ್ಟೋನ್ ಕ್ರಷರ್ ಮೇಲೆ ಅಧಿಕಾರಿಳು ದಾಳಿ ನಡೆಸಿರುವುದು ಇದಕ್ಕೆ ಪುಷ್ಠಿ ನೀಡಿದೆ.

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಇಜ್ಜಲಘಟ್ಟದಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಕುರಿತು ಮಾಹಿತಿ ಪಡೆದ ಅಧಿಕಾರಿಗಳು, ದಾಳಿ ನಡೆಸಿ ಟಿಪ್ಪರ್ ವಶಪಡಿಸಿಕೊಂಡು ಕ್ರಷರ್ ಗೆ ಬೀಗಮುದ್ರೆ ಹಾಕಿದ್ದಾರೆ. ಇದು ಮಾಜಿ ಸಚಿವ ಚಲುವರಾಯಸ್ವಾಮಿ ಅವರ ಒಡೆತನದ ಕ್ರಷರ್ ಎಂದು ಹೇಳಲಾಗಿದ್ದು,  ಜೆಡಿಎಸ್ ಚಲುವರಾಯಸ್ವಾಮಿ ಮೇಲೆ ದ್ವೇಷ ಸಾಧಿಸುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇನ್ನು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಬೇಬಿ ಬೆಟ್ಟದಲ್ಲಿರುವ ಎಸ್.ಟಿ.ಜೆ. ಸ್ಟೋನ್ ಕ್ರಷರ್, ಸಣ್ಣ ನೀರಾವರಿ ಸಚಿವ ಪುಟ್ಟರಾಜು ಒಡೆತನದಲ್ಲಿದೆ. ಆದರೆ ಅಧಿಕಾರಿಗಳು ಕೇವಲ ಚಲುವರಾಯಸ್ವಾಮಿ ಒಡೆತನದ ಕ್ರಷರ್ ಮೇಲೆ ದಾಳಿ ಮಾಡಿರುವುದು ಇಂತಹ ಮಾತುಗಳಿಗೆ ಮತ್ತಷ್ಟು ಇಂಬು ನೀಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ತೀರ್ಥಹಳ್ಳಿಯ ವಿದ್ಯಾರ್ಥಿನಿಗೆ ಹೃದಯಾಘಾತ, ಶೃಂಗೇರಿ ಕಾಲೇಜು ಹಾಸ್ಟೆಲ್‌ನಲ್ಲಿ ಕುಸಿದು ಬಿದ್ದು ಸಾವು
ಪಿಯುಸಿ ಸರ್ಟಿಫಿಕೇಟ್ ಇದ್ದರೆ ಮಾತ್ರ ವಾಹನಕ್ಕೆ ಪೆಟ್ರೋಲ್ -ಡೀಸೆಲ್, ಡಿ.18ರಿಂದ ಹೊಸ ನಿಯಮ