ತಮ್ಮ ಸ್ಥಾನ ಜೆಡಿಎಸ್‌ಗೆ ಬಿಟ್ಟು ಕೊಡುತ್ತಾರಾ ಪರಮೇಶ್ವರ್ ..?

First Published Jun 11, 2018, 12:15 PM IST
Highlights

ಬೆಂಗಳೂರು ಉಸ್ತುವಾರಿ ಮೇಲೆ ಉಪ ಮುಖ್ಯಮಂತ್ರಿ ಪರಮೇಶ್ವರ್ ಕಣ್ಣಿಟ್ಟಿದ್ದು, ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ಸದ್ಯ ತಮ್ಮ ಬಳಿಯಲ್ಲೇ ಇರಿಸಿಕೊಂಡಿದ್ದಾರೆ.  

ಬೆಂಗಳೂರು : ಬೆಂಗಳೂರು ಉಸ್ತುವಾರಿ ಮೇಲೆ ಉಪಮುಖ್ಯಮಂತ್ರಿ ಪರಮೇಶ್ವರ್ ಕಣ್ಣಿಟ್ಟಿದ್ದು, ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ಸದ್ಯ ತಮ್ಮ ಬಳಿಯಲ್ಲೇ ಇರಿಸಿಕೊಂಡಿದ್ದಾರೆ.  

ಈ ನಿಟ್ಟಿನಲ್ಲಿ ತುಮಕೂರು ಉಸ್ತುವಾರಿಯನ್ನು ಜೆಡಿಎಸ್ ಗೆ ಬಿಟ್ಟು ಕೊಡಲು ಮುಂದಾದರಾ ಎನ್ನುವ ಪ್ರಶ್ನೆ ಮೂಡಿದೆ. ಅಲ್ಲದೇ ಜೆಡಿಎಸ್ ಕೂಡ ತುಮಕೂರು ಉಸ್ತುವಾರಿಯು ತಮಗೆ ಬೇಕು ಎಂದು  ಈ ಹಿಂದೆ ಪಟ್ಟು ಹಿಡಿದಿದ್ದು, ಇದನ್ನು ಅರಿತ ಪರಮೇಶ್ವರ್ ತಮ್ಮ ಸ್ಥಾನವನ್ನು ಜೆಡಿಎಸ್ ಗೆ ಬಿಡಲು ಸಜ್ಜಾಗಿದ್ದಾರಾ ಎನ್ನುವ ಪ್ರಶ್ನೆ ಮೂಡಿದೆ. 

ಸದ್ಯ ಕರ್ನಾಟಕದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದು,  ಕೂಡ ಖಾತೆ ಹಂಚಿಕೆಯ ಸಂಬಂಧ ಭುಗಿಲೆದ್ದ ಅಸಮಾಧಾನ ಮಾತ್ರ  ಇನ್ನೂ ಕೂಡ ಶಮನವಾಗಿಲ್ಲ. ಕಾಂಗ್ರೆಸ್ ನಲ್ಲಿ  ಸಚಿವ ಸ್ಥಾನಕ್ಕಾಗಿ ಜಿದ್ದಾ ಜಿದ್ದಿ ನಡೆಯುತ್ತಿದೆ.  ಸದ್ಯ ಒಂದು ಹಂತದಲ್ಲಿ ಸಚಿವ ಸಂಪುಟ ರಚನೆ ಮಾಡಿದ್ದು, 25 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. 

ಇದೀಗ ಜೆಡಿಎಸ್ ಪಟ್ಟು ಹಿಡಿದ ಸ್ಥಾನವನ್ನು ಬಿಟ್ಟುಕೊಟ್ಟು ಬೆಂಗಳೂರು ಉಸ್ತುವಾರಿ ಮೇಲೆ ಉಪ ಮುಖ್ಯಮಂತ್ರಿ ಪರಮೇಶ್ವರ್ ದೃಷ್ಟಿ ಹರಿಸಿದ್ದಾರೆ ಎನ್ನಲಾಗಿದೆ.

click me!