
ನವದೆಹಲಿ: ಕೇಂಬ್ರಿಜ್ ಅನಾಲಿಟಿಕಾ ಕಂಪನಿ ಜೊತೆ ನಂಟು ಹೊಂದಿರುವುದಾಗಿ ಕಾಂಗ್ರೆಸ್ ವಿರುದ್ಧ ಆರೋಪ ಮಾಡಿರುವ ಬಿಜೆಪಿ, ಕರ್ನಾಟಕ ಚುನಾವಣೆ ಗೆಲ್ಲಲ್ಲೂ ಕಾಂಗ್ರೆಸ್ ಇದೇ ಕಂಪನಿಯ ನೆರವು ಪಡೆದಿದೆಯಾ ಎಂದು ಪ್ರಶ್ನಿಸಿದೆ. ಈ ಕುರಿತು ಕಾಂಗ್ರೆಸ್‌ಗೆ ಪ್ರಶ್ನೆ ಎಸೆದಿರುವ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ಇತ್ತೀಚಿನ ಗುಜರಾತ್ ಮತ್ತು ಈಶಾನ್ಯ ರಾಜ್ಯಗಳ ಚುನಾವಣೆ ಮತ್ತು ಮುಂಬರುವ ಕರ್ನಾಟಕ ಚುನಾವಣೆಗೆ ಸಂಬಂಧಿಸಿದಂತೆ ಬ್ರಿಟನ್ ಮೂಲದ ಕಂಪನಿಯಿಂದ ಎಷ್ಟುದತ್ತಾಂತ ಪಡೆದುಕೊಂಡಿದೆ ಎಂಬುದನ್ನು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದ್ದಾರೆ.
ಚುನಾವಣಾ ರ್ಕಟಾಕ ಚಂತ್ರದಾಕ. ಬ್ರಿಟನ್‌ನ ಕೇಂಬ್ರಿಜ್ ಅನಾಲಿಟಿಕಾ ಹಾಗೂ ಫೇಸ್‌ಬುಕ್ ಕಂಪನಿ ಈ ಹಗರಣದ ಕೇಂದ್ರ ಬಿಂದು. 5 ಕೋಟಿ ಫೇಸ್‌ಬುಕಾ್ ಬಳಕೆದಾರರ ವಿವರ ಅಕ್ರಮವಾಗಿ ಪಡೆದ 2016ರ ಅಮೆರಿಕ ಚುನಾವಣೆ ವೇಳೆ ಟ್ರಂಪ್ ಪರ ಪ್ರಭಾವ ಬೀರಲಾಗಿತ್ತೆನ್ನಲಾಗಿದೆ.
ಟ್ರಂಪ್ ರೀತಿ ರಾಹುಲ್ ಆನ್‌ಲೈನ್ ಸೇವೆಗೂ ಇದೇ ಕಂಪನಿಯಿಂದ ನೆರವು ಪಡೆಯಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ದಿಢೀರ್ ಜನಪ್ರಿಯವಾಗಲು ಇದೇ ಕಂಪನಿಯ ಸಹಕಾರ ಪಡೆದಿದೆ ಎಂಬ ಆರೋಪಗಳು ಕೇಳಿ ಬಂದಿದೆ.
ಬಿಜೆಪಿ, ಕಾಂಗ್ರೆಸ್, ಜೆಡಿಯುಗೂ ಸೇವೆ!
ಕೇಂಬ್ರಿಜ್ ಅನಾಲಿಟಿಕಾ ಕಂಪನಿ, ಭಾರತದಲ್ಲಿ ಓವ್ಲೆನೋ ಬ್ಯುಸಿನೆಸ್ ಇಂಟೆಲಿಜೆನ್ಸ್ ಎಂಬ ಅಂಗಸಂಸ್ಥೆ ಹೊಂದಿದೆ. ಈ ಸಂಸ್ಥೆ ತನ್ನ ವೆಬ್‌ಸೈಟ್‌ನಲ್ಲಿ ತಾನು ಬಿಜೆಪಿ, ಕಾಂಗ್ರೆಸ್, ಜೆಡಿಯು, ಏರ್‌ಟೆಲ್ ಮತ್ತು ಐಸಿಐಸಿಐ ಬ್ಯಾಂಕ್‌ಗೆ ಸೇವೆ ನೀಡುತ್ತಿರುವುದಾಗಿ ಹೇಳಿಕೊಂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.