ಶೀಘ್ರವೇ ಮತ್ತೆ ಬಿಎಸ್ ವೈಗೆ ಮುಖ್ಯಮಂತ್ರಿ ಪಟ್ಟ..?

Published : Aug 10, 2018, 09:00 AM IST
ಶೀಘ್ರವೇ ಮತ್ತೆ ಬಿಎಸ್ ವೈಗೆ ಮುಖ್ಯಮಂತ್ರಿ ಪಟ್ಟ..?

ಸಾರಾಂಶ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರು ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ. ಅವರಿಗೆ ಮುಖ್ಯಮಂತ್ರಿ ಪಟ್ಟದ ಯೋಗವಿದೆ ಎಂದು ಸತ್ಯಾತ್ಮತೀರ್ಥ ಸ್ವಾಮೀಜಿ ಭವಿಷ್ಯ ಹೇಳಿದ್ದಾರೆ. 

ಕಲಬುರಗಿ: ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಿಎಂ ಯಡಿಯೂರಪ್ಪನವರು ನಗರದಲ್ಲಿ ಚಾತುರ್ಮಾಸ್ಯ ಆಚರಿಸುತ್ತಿರುವ ಉತ್ತರಾದಿ ಮಠಾಧೀಶರಾದ ಸತ್ಯಾತ್ಮತೀರ್ಥ ಸ್ವಾಮೀಜಿಯನ್ನು ಗುರುವಾರ ಭೇಟಿಯಾಗಿ ಆಶಿರ್ವಾದ ಪಡೆದರು.

ಈ ಸಂದರ್ಭದಲ್ಲಿ ಗುರುಗಳು ಯಡಿಯೂರಪ್ಪನವರೊಂದಿಗೆ ಉಭಯಕುಶಲೋಪರಿ ವಿಚಾರಿಸುತ್ತಲೇ ಹತ್ತಿರ ಕರೆದು ‘ನೀವು ಯಾವುದಕ್ಕೂ ಅಂಜಬೇಡಿ. ಹಿಂದೆ ಸರಿಯಬೇಡಿರಿ, ಮುನ್ನುಗ್ಗಿರಿ, ನಿಮಗೆ ಉತ್ತಮ ಯೋಗವಿದೆ’ ಎಂದ ಪ್ರಸಂಗವೂ ನಡೆಯಿತು. 

ಈ ಹಂತದಲ್ಲಿ ಸ್ವಾಮೀಜಿ, ‘ಯಡಿಯೂರಪ್ಪನವರಿಗೆ ಮಂತ್ರಿಗಿರಿ ಯೋಗವಿದೆ’ ಎಂದಾಗ ಸೇರಿದ್ದ ಜನಸ್ತೋಮ ‘ಮುಖ್ಯಮಂತ್ರಿಗಿರಿ’ ಎಂದು ಹೇಳಿದರು. ಆಗ ಸ್ವಾಮೀಜಿ ‘ಮಂತ್ರಿ ಎಂದರೆ ಅದೆಲ್ಲವೂ ಒಂದೇ ಅರ್ಥ...’ ಎಂದು ನಕ್ಕರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!