
ನವದೆಹಲಿ(ಮೇ.30): ಛಿ..ಏನ್ರೀ ಇದು, ಟಿಕೆಟ್ ಬುಕ್ ಮಾಡಲು ನಿಮ್ಮ ವೆಬ್‌ಸೈಟ್ ಓಪನ್ ಮಾಡಿದರೆ ಕೇವಲ ಅಶ್ಲೀಲ ಫೋಟೋಗಳೇ ಕಾಣಸಿಗುತ್ತವೆ...ಅಂತಾ ವ್ಯಕ್ತಿಯೋರ್ವ ರೈಲ್ವೇ ಇಲಾಖೆಗೆ ಬೆಂಡೆತ್ತಲು ಹೋಗಿ ತಾನೇ ಪೇಚಿಗೆ ಸಿಲುಕಿದ್ದಾನೆ.
ರೈಲ್ವೇ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಟಿಕೆಟ್ ಬುಕ್ ಮಾಡಲು ಮುಂದಾದ ವ್ಯಕ್ತಿಗೆ ವೆಬ್‌ಸೈಟ್ ತುಂಬಾ ಕೇವಲ ಅಶ್ಲೀಲ ಫೋಟೋಗಳ ದರ್ಶನವಾಗಿದೆ. ಇದರಿಂದ ಕೆರಳಿದ ವ್ಯಕ್ತಿ, ಈ ಕುರಿತು ಇಲಾಖೆಗೆ ನೇರವಾಗಿ ಟ್ವಿಟ್ ಮಾಡಿ ಅಸಮಾಧಾನ ಹೊರಹಾಕಿದ್ದಾನೆ.
ಇದಕ್ಕೆ ಅಷ್ಟೇ ಶಾಂತವಾಗಿ ಉತ್ತರಿಸಿರುವ ಇಲಾಖೆ, ನಮ್ಮ ವೆಬ್‌ಸೈಟ್ ಗೂಗಲ್ ಸರ್ವೀಸ್ ಟೂಲ್ ಬಳಸುತ್ತಿದ್ದು, ವ್ಯಕ್ತಿ ಆನ್‌ಲೈನ್‌ನಲ್ಲಿ ಹೆಚ್ಚು ಹುಡುಕುವ ಲಿಂಕ್‌ನ ಜಾಹೀರಾತು ಕಾಣುತ್ತದೆ ಎಂದು ಸ್ಪಷ್ಟಪಡಿಸಿದೆ.
ಅಂದರೆ ದೂರು ನೀಡಿದ ವ್ಯಕ್ತಿ ಆನ್‌ಲೈನ್‌ನಲ್ಲಿ ಅಶ್ಲೀಲ ಜಾಲತಾಣಗಳಿಗೆ ಹೆಚ್ಚು ಭೇಟಿ ನೀಡಿದ್ದು, ಆತನ ಹುಡುಜಕಾಟದ ಆಧಾರದ ಮೇಲೆ ರೈಲ್ವೇ ಇಲಾಖೆ ವೆಬ್‌ಸೈಟ್‌ನಲ್ಲಿ ಅಶ್ಲೀಲ ಜಾಹೀರಾತುಗಳು ಪ್ರಕಟವಾಗಿವೆ.
ಇಲಾಖೆ ನೀಡಿದ ಉತ್ತರದಿಂದ ಪೇಚಿಗೆ ಸಿಲುಕಿದ ವ್ಯಕ್ತಿ, ಇದೀಗ ತನ್ನ ಟ್ವಿಟ್ ಡಿಲೀಟ್ ಮಾಡಿ ಮುಖ ಮುಚ್ಚಿಕೊಂಡಿದ್ದು ಮಾತ್ರ ಹಾಸ್ಯಾಸ್ಪದ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.