ಕಟ್ಟಿಂಗ್‌, ಶೇವಿಂಗ್‌ ಮಾಡಿಸಿ, ಫೋಟೋ ಕಳುಹಿಸಿ! : ಅಲೋಕ್ ಕುಮಾರ್ ವಾರ್ನಿಂಗ್

Published : Apr 13, 2019, 08:37 AM IST
ಕಟ್ಟಿಂಗ್‌, ಶೇವಿಂಗ್‌ ಮಾಡಿಸಿ, ಫೋಟೋ ಕಳುಹಿಸಿ! : ಅಲೋಕ್ ಕುಮಾರ್ ವಾರ್ನಿಂಗ್

ಸಾರಾಂಶ

ಹೆಚ್ಚುವರಿ ಪೊಲೀಸ್‌ ಆಯುಕ್ತ ಲೋಕ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ. ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ರೌಡಿಗಳ ಪರೇಡ್ ನಡೆಸಿ ಖಡಕ್ ವಾರ್ನಿಂಗ್ ನೀಡಿದ್ದಾರೆ. 

ಬೆಂಗಳೂರು :  ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಶುಕ್ರವಾರ 300ಕ್ಕೂ ಹೆಚ್ಚು ರೌಡಿಗಳ ಪರೇಡ್‌ ನಡೆಸಿ ಎಚ್ಚರಿಕೆ ನೀಡಿದರು.

ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕೇಂದ್ರ ಕಚೇರಿಯಲ್ಲಿ ಹೆಚ್ಚುವರಿ ಪೊಲೀಸ್‌ ಆಯುಕ್ತ ರೌಡಿಗಳಿಗೆ ಚುಣಾವಣೆಯಲ್ಲಿ ಏನಾದರೂ ಬಾಲಬಿಚ್ಚಿದರೆ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ರೌಡಿ ಪರೇಡ್‌ನಲ್ಲಿ ಸೈಲೆಂಟ್‌ ಸುನೀಲ, ಶಿವಾಜಿನಗರದ ತನ್ವೀರ್‌, ಮಾರೇನಹಳ್ಳಿ ಜಗ್ಗ, ಕುಣಿಗಲ್‌ ಗಿರಿ ಸೇರಿ 300ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.

ಒಬ್ಬೊಬ್ಬರಿಗೆ ಅಲೋಕ್‌ ಬುದ್ಧಿ ಹೇಳುವಾಗ ರೌಡಿ ಸೈಲೆಂಟ್‌ ಸುನೀಲ್‌ನ ಬಳಿ ಬಂದಾಗ ಗರಂ ಆದರು. ‘ಏ ಏನೋ ಗುರಾಯಿಸುತ್ತೀಯಾ. ಎಷ್ಟುಸೊಕ್ಕು ನಿಂಗೆ. ಕಣ್ಣು ಗುಡ್ಡೆ ಕಿತ್ತು ಹಾಕುತ್ತೀನಿ. ಮೊದಲು ಸರಿಯಾಗಿ ನಿಂತ್ಕೊ ಎನ್ನುತ್ತಲೇ ಸೈಲೆಂಟ್‌ ಸುನೀಲ್‌ನನ್ನು ಹೊಡೆಯುವ ಹಾಗೇ ಹೋಗಿ ಸಿಟ್ಟಿನಿಂದ ಕಿವಿ ಹಿಂಡಿದರು. ಈತನ ಎಲ್ಲ ವ್ಯವಹಾರಗಳನ್ನು ಪರಿಶೀಲಿಸಿ, ಯಾರಾರ‍ಯರಿಗೆ ಬೆದರಿಸಿ ಹಣ ವಸೂಲಿ ಮಾಡಿದ್ದಾನೆ ಎಂದು ತಿಳಿದುಕೊಂಡು ಕೇಸ್‌ ದಾಖಲಿಸಿ ಒಳಗೆ ಕಳುಹಿಸಿ. ಬುದ್ಧಿ ಬರಲಿ ಎಂದು ಎಸಿಪಿ ವೇಣುಗೋಪಾಲ್‌ ಅವರಿಗೆ ಸೂಚಿಸಿದರು.

ರೌಡಿಗಳಿಗೆ ಎಚ್ಚರಿಕೆ ನೀಡುವ ವೇಳೆ ಹಲವು ಮಂದಿ ಕೂದಲು, ಗಡ್ಡ ಬಿಟ್ಟಿದ್ದರು. ಇದರಿಂದ ಕೋಪಗೊಂಡ ಅಲೋಕ್‌. ‘ಕಾಡು ಪ್ರಾಣಿಗಳ ಹಾಗೇ ಇದ್ದೀರಾ. ಮೊದಲು ಕಟ್ಟಿಂಗ್‌, ಶೇವಿಂಗ್‌ ಮಾಡಿಸಿ. ಫೋಟೋ ಕಳುಹಿಸಿ. ನಿಮ್ಮೆಲ್ಲರ ಮೊಬೈಲ್‌ ಸಂಖ್ಯೆಯನ್ನು ಕೊಟ್ಟು ಹೋಗಿ’ ಎಂದು ಸೂಚಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸ್ಲಿಮ್ ಆಗೋಕೆ ಹೋಗಿ ಆರೋಗ್ಯವೇ ಹೋಯ್ತು: 11691 ರೂ ಪಾವತಿಸಿ ತೂಕ ಇಳಿಕೆ ಇಂಜೆಕ್ಷನ್ ಪಡೆದಾಕೆಗೆ ಆಘಾತ
ಕೊಡಗಿನ ಇತಿಹಾಸದಲ್ಲೇ ಮೊದಲ ಬಾರಿಗೆ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿದ ಕೋರ್ಟ್! ಏನಿದು ಪ್ರಕರಣ?