
ಕುಲ್ಲೂ[ಸೆ.11]: ನೂತನ ಮೋಟಾರು ವಾಹನ ಕಾಯ್ದೆ ಸೆಪ್ಟೆಂಬರ್ 1ರಿಂದ ಜಾರಿಗೆ ಬಂದಿದೆ. ದುಬಾರಿ ದಂಡ ವಾಹನ ಸವಾರರ ನಿದ್ದೆಗೆಡಿಸಿದೆ. ಹೀಗಿರುವಾಗ ಹಿಮಾಚಲದ ಕುಲ್ಲೂ ಜಿಲ್ಲೆಯಲ್ಲಿ ಟ್ರಾಫಿಕ್ ನಿಯಮ ಉಲ್ಲಂಘಿಸಿದ ಓರ್ವ ವಾಹನ ಸವಾರರಿಗೆ ವಿಧಿಸಿದ ದಂಡದಿಂದ ಸದ್ಯ ಒಲೀಸರಿಗೇ ಸಂಕಷ್ಟ ಎದುರಾಗಿದೆ. ಷ್ಟಕ್ಕೂ ಅಲ್ಲಿ ಆಗಿದ್ದೇನು? ಇಲ್ಲಿದೆ ವಿವರ
ಹೌದು ಕುಲ್ಲೂ ಜಿಲ್ಲೆಯ ಟ್ರಾಫಿಕ್ ಪೊಲೀಸ್, ನಿಯಮ ಉಲ್ಲಂಘಿಸಿದ IPH[ಜಲಮಂಡಳಿ] ಅಧಿಕಾರಿಗೆ ದಂಡ ವಿಧಿಸಿದ್ದಾರೆ. ಇದರಿಂದ ಅಸಮಾಧಾನಗೊಂಡ ಅಧಿಕಾರಿ, ಟ್ರಾಫಿಕ್ ಪೊಲೀಸ್ ಸೇವೆ ಸಲ್ಲಿಸುತ್ತಿರುವ ಠಾಣೆಯ ನೀರಿನ ಕನೆಕ್ಷನ್ ಕಟ್ ಮಾಡಿದ್ದಾರೆ.
ಲುಂಗಿ ಧರಿಸಿದರೆ ಲಾರಿ ಚಾಲಕರಿಗೆ 2000 ರು. ದಂಡ!
ಏನಿದು ಪ್ರಕರಣ?
'ಪಂಜಾಬ್ ಕೇಸರಿ' ವರದಿಯನ್ವಯ ಹಿಮಾಚಲದ ಪತಲೀಕೂಹಲ್ ಠಾಣೆಯ ಟ್ರಾಫಿಕ್ ಪೊಲೀಸರು ಕೆಲ ದಿನಗಳ ಹಿಂದೆ IPH ವಿಭಾಗದ ಅಧಿಕಾರಿಯೊಬ್ಬರಿಗೆ ದಂಡ ವಿಧಿಸಿದ್ದರು. ಇದಾದ ಒಂದೆರಡು ದಿನಗಳಲ್ಲೇ ಠಾಣೆಗೆ ನೀರು ಪೂರೈಕೆ ನಿಂತಿತ್ತು. ಇದರ ಬೆನ್ನಲ್ಲೇ ಪೊಲೀಸರು ಹೆಲ್ಮೆಟ್ ಧರಿಸಿಲ್ಲ ಎಂದು ಅಧಿಕಾರಿಗೆ ದಂಡ ವಿಧಿಸಿದ್ದಕ್ಕಾಗಿ, ನೀರಿನ ಪೂರೈಕೆ ಸ್ಥಗಿತಗೊಳಿಸಿದ್ದಾರೆ ಎಂಬ ಮಾತುಗಳು ಸದ್ದು ಮಾಡಲಾರಂಭಿಸಿವೆ.
Fact Check| ನಿಯಮ ಪಾಲಿಸದಿದ್ರೆ ಟ್ರಾಫಿಕ್ ಪೊಲೀಸರಿಂದ ದಂಡದ ಜೊತೆ ಏಟು!
ಒಂದು ವಾರದಿಂದ ನೀರಿನ ಪೂರೈಕೆ ಇಲ್ಲ
ಠಾಣೆಗೆ ಒಂದು ವಾರದಿಂದ ನೀರು ಪೂರೈಕೆ ನಿಂತಿದ್ದು, ಜಲ ಮಂಡಳಿಯೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಕುರಿತಾಗಿ ಪ್ರತಿಕ್ರಿಯಿಸಿದ ಪೊಲೀಸ್ ಅಧಿಕಾರಿಯೊಬ್ಬರು 'ಠಾಣೆಗೆ ಒಂದು ವಾರದಿಂದ ನೀರು ಪೂರೈಕೆಯಾಗುತ್ತಿಲ್ಲ. ಪೊಲೀಸರು ನೀರಿಲ್ಲದೇ ಪರದಾಡುತ್ತಿದ್ದಾರೆ. ಅತ್ತ ನೀರಿಲ್ಲ ಎಂದು ಜೈಲಿನಲ್ಲಿರುವ ಕೈದಿಗಳಿಗೂ ಶೌಚಾಲಯಕ್ಕಾಗಿ ಹೊರಗೆ ಕರೆದೊಯ್ಯಬೇಕಾಗುತ್ತದೆ' ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.