ಪ್ರಧಾನಿ ಮೋದಿಗೆ ಆಹ್ವಾನಿಸುವಂತೆ ನೂತನ ಅಧ್ಯಕ್ಷ ಟ್ರಂಪ್'ಗೆ ಸಲಹೆ

By srinidhi SFirst Published Nov 11, 2016, 5:05 AM IST
Highlights

ಅಭಿನಂದನೆ ಸಲ್ಲಿಸಿ ಡೊನಾಲ್ಡ್ ಟ್ರಂಪ್ ಗೆ ಯುಎಸ್ ಇಂಡಿಯಾ ಬ್ಯುಸಿನೆಸ್ ಕೌನ್ಸಿಲ್  ಪತ್ರ ಬರೆದಿದ್ದು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಮೆರಿಕಾಗೆ ಭೇಟಿ ನೀಡುವಂತೆ ಆಹ್ವಾನಿಸಬೇಕು ಎಂದು ಒತ್ತಾಯಿಸಿದೆ.

ವಾಷಿಂಗ್ ಟನ್(ನ.11): ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಆಯ್ಕೆಯಾಗಿದ್ದು, ಅಧಿಕಾರ ವಹಿಸಿಕೊಂಡ ಒಂದು ವರ್ಷದ ಒಳಗಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಮೆರಿಕಾಗೆ ಆಹ್ವಾನಿಸಬೇಕು ಎಂದು ಅಲ್ಲಿನ ವ್ಯಾಪಾರ ಸಲಹಾ ಸಮಿತಿ ಹೇಳಿದೆ.

ಅಭಿನಂದನೆ ಸಲ್ಲಿಸಿ ಡೊನಾಲ್ಡ್ ಟ್ರಂಪ್ ಗೆ ಯುಎಸ್ ಇಂಡಿಯಾ ಬ್ಯುಸಿನೆಸ್ ಕೌನ್ಸಿಲ್  ಪತ್ರ ಬರೆದಿದ್ದು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಮೆರಿಕಾಗೆ ಭೇಟಿ ನೀಡುವಂತೆ ಆಹ್ವಾನಿಸಬೇಕು ಎಂದು ಒತ್ತಾಯಿಸಿದೆ.

ಅಧಿಕಾರ ವಹಿಸಿಕೊಂಡ ಒಂದು ವರ್ಷದಲ್ಲಿ, ಭಾರತದ ಪ್ರಧಾನಿ ಮೋದಿ ಅವರನ್ನು ಅಮೆರಿಕಾಗೆ ಆಹ್ವಾನಿಸಿ, ಇದು ದ್ವಿಪಕ್ಷೀಯ ಸಂಬಂಧ ವೃದ್ಧಿಗೆ ಪ್ರಮುಖವಾದ ಸೂಚನೆಯಾಗಿರಲಿದೆ ಎಂದು ಯುಎಸ್ಐಬಿಸಿ ಅಧ್ಯಕ್ಷ ಮುಖೇಶ್ ಆಘಿ ಟ್ರಂಪ್ ಗೆ ಸಲಹೆ ನೀಡಿದ್ದಾರೆ. 

tags
click me!