
ನಾಗ್ಪುರ(ಏ.10): ಕಂಪ್ಯೂಟರ್ ಮೂಲಕ ಹೆರಿಗೆ ಮಾಡಿಸಿದ ಸಿನಿಮಾ 3 ಈಡಿಯಟ್ಸ್ ಅನ್ನು ನಾವೆಲ್ಲರೂ ನೋಡಿದ್ದೇವೆ. ಈಗ ನಿಜವಾಗಿಯೂ ಅದೇ ರೀತಿಯ ಸ್ವಲ್ಪ ಭಿನ್ನವಾಗ ಘಟನೆ ನಾಗ್ಪುರದಲ್ಲಿ ನಡೆದಿದೆ.
ತಂತ್ರಜ್ಞಾನ ಮತ್ತು ಸಂವಹನ ಮಾಧ್ಯಮವನ್ನು ಹೇಗೆ ಸದುಪಯೋಗಪಡಿಸಿಕೊಳ್ಳಬಹುದು ಎಂಬುದನ್ನು ಘಟನೆಯಿಂದ ಅರ್ಥೈಸಿಕೊಳ್ಳಬಹುದಾಗಿದೆ. ರೈಲಿನಲ್ಲಿ ಹೆರಿಗೆ ನೋವಿಗೆ ಸಿಲುಕಿದ್ದ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಲು 24 ವರ್ಷದ ವೈದ್ಯಕೀಯ ತರಬೇತಿ ಪಡೆಯುತ್ತಿದ್ದ ವಿದ್ಯಾರ್ಥಿಯೊಬ್ಬ ವಾಟ್ಸಪ್ ಸಹಾಯ ಪಡೆದು ನೆರವಾಗಿದ್ದಾರೆ.
ಅಹ್ಮದಾಬಾದ್-ಪುರಿ ಎಕ್ಸ್‌ಪ್ರೆಸ್ ರೈಲಿನಲ್ಲಿ ವಿಪಿನ್ ಖಡ್ಸೆ ಎಂಬ ವೈದ್ಯ ವಿದ್ಯಾರ್ಥಿ ಪ್ರಯಾಣಿಸುತ್ತಿದ್ದ ವೇಳೆ ಗರ್ಭಿಣಿಯೊಬ್ಬರು ಮಗುವಿಗೆ ಜನ್ಮ ನೀಡಲು ಸಂಕಷ್ಟ ಪಡುತ್ತಿದ್ದರು. ಈ ವೇಳೆ, ಪರಿಶೀಲನೆ ನಡೆಸಿದ ಖಡ್ಸೆ, ಮಗುವಿನ ರಟ್ಟೆ ಮಾತ್ರ ಗರ್ಭದಿಂದ ಹೊರ ಬಂದಿದ್ದು, ಹೆರಿಗೆ ಕಷ್ಟ ಸಾಧ್ಯ ಎಂದು ಹೇಳಿದರು. ಅಲ್ಲದೆ, ಆ ೆಟೊವನ್ನು ಕ್ಲಿಕ್ಕಿಸಿದ ಅವರು, ವೈದ್ಯರ ವಾಟ್ಸಪ್ ಗ್ರೂಪಿಗೆ ಹಾಕಿ, ಸಹಾಯ ಮಾಡುವಂತೆ ಕೋರಿದರು. ಈ ಸಂದರ್ಭದಲ್ಲಿ ಹಿರಿಯ ವೈದ್ಯರಾದ ಶಿಖಾ ಮಲಿಕ್ ಎಂಬುವರು ಹೆರಿಗೆ ಹೇಗೆ ಮಾಡಿಸಬಹುದು ಎಂಬುದನ್ನು ವಾಟ್ಸಪ್ ಮೂಲಕವೇ ಖಡ್ಸೆಗೆ ಮಾಹಿತಿ ನೀಡಿದರು.
ಅದನ್ನು ಪಾಲಿಸಿದ ಇನ್ನೂ ವೈದ್ಯಕೀಯ(ಎಂಬಿಬಿಎಸ್) ಪದವಿ ಪೂರೈಸದ ಖಡ್ಸೆ ಹೆರಿಗೆಯನ್ನು ಮಾಡಿಸಿ, ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.