ವಿರೋಧದ ನಡುವೆಯೂ ನಟ ಪ್ರಕಾಶ್ ರೈಗೆ ಶಿವರಾಮ ಕಾರಂತ ಪ್ರಶಸ್ತಿ ಪ್ರದಾನ

Published : Oct 10, 2017, 06:27 PM ISTUpdated : Apr 11, 2018, 12:36 PM IST
ವಿರೋಧದ ನಡುವೆಯೂ ನಟ ಪ್ರಕಾಶ್ ರೈಗೆ ಶಿವರಾಮ ಕಾರಂತ ಪ್ರಶಸ್ತಿ ಪ್ರದಾನ

ಸಾರಾಂಶ

ಸಾಕಷ್ಟು ವಿರೋಧದ ನಡುವೆಯೂ ನಟ ಪ್ರಕಾಶ್​ ರೈಗೆ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.

ಬೆಂಗಳೂರು (ಅ.10): ಸಾಕಷ್ಟು ವಿರೋಧದ ನಡುವೆಯೂ ನಟ ಪ್ರಕಾಶ್​ ರೈಗೆ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.

"ನನ್ನಿಂದ ನಿಮಗೆ ನೋವಾಗಿದ್ದರೆ ಕ್ಷಮಿಸಿ. ಬಹಳಷ್ಟು ಪ್ರಶಸ್ತಿಗಳಿಗೆ ನನಗೆ ಕರೆ ಬಂದಿವೆ. ಆದರೆ ಶಿವರಾಮ ಕಾರಂತ ಪ್ರಶಸ್ತಿ ನೀಡುವ ಆನಂದವೇ ಬೇರೆ. ಅಜ್ಜನ ಮನೆಗೆ ಬಂದ ಮೊಮ್ಮಗನಷ್ಟು ಸಂತೋಷವಾಗಿದೆ. ಕಾರಂತರ ಬಗ್ಗೆ ಮಾತಾಡೋದೆ ಒಂದು ರೋಮಾಂಚನ. ಪ್ರಶಸ್ತಿ ಬಗ್ಗೆ ಮೊದಲು ಅಮ್ಮನಿಗೆ‌ ಹೇಳಿ ಸಂತೋಷ ಪಟ್ಟೆ. ಕಾರಂತರು ಬರೆದ ಹಾಗೆ ಬದುಕಿದವರು, ಬದುಕಿದ್ದನ್ನೇ ಬರೆದರು ಎಂದು ಕೋಟತಟ್ಟುವಿನಲ್ಲಿ ನಟ ಪ್ರಕಾಶ್​ ರೈ ಹೇಳಿದ್ದಾರೆ.

ಪ್ರಶಸ್ತಿ ಸಿಕ್ಕಿದ್ದು ಬಹಳ ಸಂತೋಷದ ವಿಷಯ. ಯಾರು ಗೆದ್ದರು, ಸೋತರು ಎಂಬುವುದು ಮುಖ್ಯವಲ್ಲ.  ಪ್ರಶಸ್ತಿ ಪ್ರದಾನ ಆಗಬೇಕಿತ್ತು, ನಾನು ಪ್ರಶಸ್ತಿಗೆ ಅರ್ಹನಾಗಿದ್ದೆ.  ಇದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ಸೋತ ಕ್ಷಣ ಎಂದು ಪ್ರಕಾಶ್ ರೈ ಪ್ರಶಸ್ತಿ ಸ್ವೀಕರಿಸಿ ಹೇಳಿದ್ದಾರೆ.

ಕರ್ನಾಟಕದಲ್ಲಿ ನನ್ನ ಹಾಗೆ ಮಾತಾಡೋರು ಒಂಟಿಯಲ್ಲ. ಅವರಿಗೂ ಸ್ವಾತಂತ್ರ್ಯ ಇದೆ. ವೈಯಕ್ತಿಕ ವಿಚಾರ ಹೇಳಿ ಹಣಿಯುವ ಕೃತ್ಯ ಇನ್ನು ಕನ್ನಡ ನಾಡಲ್ಲಿ ನಡೆಯೋದಿಲ್ಲ. ಕಾರಂತರಂತೆ ನಿರ್ಧಾರ ಮಾಡಿದ್ರೆ ಹಿಂತೆಗೆಯೋ ಪ್ರಶ್ನೆಯೇ ಇಲ್ಲ.  ನನ್ನ ಜೀವನ ನೋಡಿದವರಿಗೆ ನಾನೇನು ಅಂತ ಗೊತ್ತು  ಎಂದು  ಪ್ರಕಾಶ್​ ರೈ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅನ್ನಭಾಗ್ಯ ಅಕ್ಕಿ ಫಾರಿನ್‌ಗೆ ಪ್ರಕರಣ: ಎಸ್ಐಟಿ ತನಿಖೆಗೆ ಸಿ.ಟಿ.ರವಿ ಆಗ್ರಹ
ಟೀ ಶರ್ಟ್ ಬಿಟ್ಟು ಖಾದಿ ಧರಿಸಿ ಬಂದು ರಾಜಕೀಯ ಸಂದೇಶ ರವಾನಿಸಿದ ರಾಹುಲ್ ಗಾಂಧಿ