ಸುದ್ದಿ ಜಾಲತಾಣದ ವಿರುದ್ಧ ಮಾನನಷ್ಟ ಮೊಕದ್ದಮೆ: ಅಮಿತ್ ಶಾ ಪುತ್ರನನ್ನು ಪ್ರತಿನಿಧಿಸಲಿದ್ದಾರೆ ಹೆಚ್ಚುವರಿ ಸಾಲಿಸಿಟರ್ ಜನರಲ್

By Suvarna Web DeskFirst Published Oct 10, 2017, 6:17 PM IST
Highlights

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಪುತ್ರ ಜಯ್ ಶಾ ಮಾಲಿಕತ್ವದ ಕಂಪನಿಯು ಒಂದೇ ವರ್ಷದಲ್ಲಿ 16 ಸಾವಿರ ಪಟ್ಟು ವ್ಯವಹಾರ ವೃದ್ಧಿಸಿಕೊಂಡಿರುವ ವರದಿಗೆ ಸಂಬಂಧಿಸಿ ‘ದಿ ವೈರ್’ ಸುದ್ದಿಜಾಲತಾಣದ ವಿರುದ್ಧ ಜಯ್ ಶಾ ಮಾನನಷ್ಟ ಮೊಕದ್ದಮೆ ಹೂಡಿದ್ದು, ಅವರ ಪರವಾಗಿ ಭಾರತ ಸರ್ಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದಿಸಿಲಿದ್ದಾರೆ ಎಂದು ವರದಿಯಾಗಿದೆ.

ಅಹಮದಾಬಾದ್: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಪುತ್ರ ಜಯ್ ಶಾ ಮಾಲಿಕತ್ವದ ಕಂಪನಿಯು ಒಂದೇ ವರ್ಷದಲ್ಲಿ 16 ಸಾವಿರ ಪಟ್ಟು ವ್ಯವಹಾರ ವೃದ್ಧಿಸಿಕೊಂಡಿರುವ ವರದಿಗೆ ಸಂಬಂಧಿಸಿ ‘ದಿ ವೈರ್’ ಸುದ್ದಿಜಾಲತಾಣದ ವಿರುದ್ಧ ಜಯ್ ಶಾ ಮಾನನಷ್ಟ ಮೊಕದ್ದಮೆ ಹೂಡಿದ್ದು, ಅವರ ಪರವಾಗಿ ಭಾರತ ಸರ್ಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದಿಸಿಲಿದ್ದಾರೆ ಎಂದು ವರದಿಯಾಗಿದೆ.

ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿರುವ ತುಷಾರ್ ಮೆಹ್ತಾ ಖಾಸಗಿ ವ್ಯಕ್ತಿ/ಸಂಸ್ಥೆಗಳ ಪರವಾಗಿ ವಕಾಲತ್ತು ವಹಿಸಬೇಕಾದರೆ ಕೇಂದ್ರ ಕಾನೂನು ಮಂತ್ರಿ ಅನುಮತಿ ಪಡೆಯಬೇಕಾಗುತ್ತದೆ. ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ತುಷಾರ್ ಮೆಹ್ತಾಗೆ ಅಮಿತ್ ಶಾ ಪುತ್ರ ಜಯ್ ಶಾ ಪರ ವಾದಿಸಲು ಅನುಮತಿ ನೀಡಿದ್ದಾರೆ ಎಂದು ರೆಡಿಫ್.ಕಾಂ ವರದಿ ಮಾಡಿದೆ

‘ದಿ ವೈರ್’ ಪತ್ರಕರ್ತೆ ರೋಹಿಣಿ ಸಿಂಗ್, ಸಂಪಾದಕರಾದ  ಸಿದ್ಧಾರ್ಥ ವರದರಾಜನ್ ಸೇರಿ ಒಟ್ಟು ಏಳು ಮಂದಿಯ ವಿರುದ್ಧ ಜಯ್ ಶಾ ಅಹಮದಾಬಾದ್’ ಕೋರ್ಟಿನಲ್ಲಿ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಿದ್ದಾರೆ.  ದೇಶಾದ್ಯಂತ ಚರ್ಚೆ ಹುಟ್ಟುಹಾಕಿದ್ದ ‘ಖಾಸಗಿತನದ ಹಕ್ಕು’ ಪ್ರಕರಣದಲ್ಲಿ ಆಧಾರ್ ಪರವಾಗಿ ಸುಪ್ರೀಂ ಕೋರ್ಟ್ನಲ್ಲಿ ವಾದಿಸಿದ್ದ ತುಷಾರ್ ಮೆಹ್ತಾ, ಖಾಸಗಿತನ ಮೂಲಭೂತ ಹಕ್ಕೆಂಬ ವಾದವನ್ನು ವಿರೋಧಿಸಿದ್ದರು.

ಏನಿದು ಪ್ರಕರಣ?
ಜಯ್ ಶಾ ಅವರ ಮಾಲಕತ್ವದ ಟೆಂಪಲ್ ಎಂಟರ್'ಪ್ರೈಸ್ ಸಂಸ್ಥೆ ಆರಂಭಗೊಂಡಿದ್ದು 2004ರಲ್ಲಿ. ಜಯ್ ಶಾ ಮತ್ತು ಜಿತೇಂದ್ರ ಶಾ ಅವರು ಈ ಸಂಸ್ಥೆಯ ನಿರ್ದೇಶಕರು. ಕೃಷಿ ಉತ್ಪನ್ನ ಸೇರಿದಂತೆ ಹೋಲ್'ಸೇಲ್ ಆಮದು ಮತ್ತು ರಫ್ತು ನಡೆಸುವುದು ಸಂಸ್ಥೆಯ ವ್ಯವಹಾರ. 2013-14ರವರೆಗೂ ಟೆಂಪಲ್ ಎಂಟರ್'ಪ್ರೈಸ್ ಸಂಸ್ಥೆಗೆ ಯಾವುದೇ ಸ್ಥಿರಾಸ್ತಿ ಇರಲಿಲ್ಲ. 2013 ಮತ್ತು 2014ರ ಹಣಕಾಸು ವರ್ಷಗಳಲ್ಲಿ ಸಂಸ್ಥೆಯು 6,230 ಮತ್ತು 1,724 ರೂಪಾಯಿ ನಷ್ಟ ಕೂಡ ಅನುಭವಿಸಿತ್ತು. 2014-15ರ ವರ್ಷದಲ್ಲಿ ಅದರ ಆದಾಯವು 50 ಸಾವಿರ ರೂಪಾಯಿ ಇತ್ತು. ಆದರೆ, 2015-16ರ ವರ್ಷದಲ್ಲಿ ಆದಾಯ ಪ್ರಮಾಣ ಏಕಾಏಕಿ 80.5 ಕೋಟಿ ರೂಪಾಯಿಗೆ ಏರಿಕೆಯಾಯಿತು. ಹೆಚ್ಚು ಕಡಿಮೆ 16 ಸಾವಿರ ಪಟ್ಟು ದಿಢೀರ್ ಏರಿಕೆಯಾಗಿದ್ದು ಅನುಮಾನಕ್ಕೆ ಕಾರಣವಾಗಿದೆ.

ಕುತೂಹಲದ ವಿಚಾರವೆಂದರೆ, ಟೆಂಪಲ್ ಎಂಟರ್'ಪ್ರೈಸ್ ಸಂಸ್ಥೆಯ ವ್ಯವಹಾರವು 80 ಕೋಟಿಗೆ ನೆಗೆದಿದ್ದರೂ 2016ರಲ್ಲಿ ಕಂಪನಿಯನ್ನು ಮುಚ್ಚಲಾಯಿತು. ವ್ಯವಹಾರದಲ್ಲಿ ನಷ್ಟವಾದ್ದರಿಂದ ಸಂಸ್ಥೆಯನ್ನು ಮುಚ್ಚಲಾಯಿತಂತೆ.

click me!