
ಚೆನ್ನೈ(ಜು.3] ತಮಿಳುನಾಡಿನ ತಿರುಚಿರಾಪಳ್ಳಿಯ ಭೀಮಾ ನಗರ ನಿವಾಸಿ ಭಾರತಿ ಎಂಬುವರು ಅನ್ನ ದಾಸೋಹವನ್ನು ನಡೆಸಿಕೊಂಡು ಬಂದಿದ್ದಾರೆ. 100 ಮಂದಿ ನಿರ್ಗತಿಕರಿಗೆ ಪ್ರತಿದಿನ ಹೊಟ್ಟೆತುಂಬ ಊಟ ಹಾಕುತ್ತಾರೆ.
ಪ್ರತಿ ದಿನ ಮಧ್ಯಾಹ್ನ ಅವರ ಮನೆಯ ಹೊರಗೆ ಹಿರಿಯ ನಾಗರಿಕರು, ಅಂಗವಿಕಲರು ಊಟಕ್ಕೆ ಸಾಲು ಹಚ್ಚಿ ನಿಂತಿರುತ್ತಾರೆ. ದಿನಸಿ ಅಂಗಡಿ ನಡೆಸುವ ಭಾರತಿ ಮಧ್ಯಾಹ್ನ 12 ಗಂಟೆಗೆ ಮನೆಗೆ ಬಂದು ಅಡುಗೆ ಕೆಲಸ ಆರಂಭ ಮಾಡುತ್ತಾರೆ. ಗುಣಮಟ್ಟದ ಅಕ್ಕಿಯಿಂದ ತಯಾರಿಸಿದ ಅನ್ನ, ಒಂದು ಪೂರಿ, ರಸಂ, ಸಾಂಬಾರು ಸಹಿತವಾದ ಊಟವನ್ನು ಯಾವ ಪ್ರತಿಫಲಾಪೇಕ್ಷೆ ಇಲ್ಲದೆ ನೀಡುತ್ತಾರೆ.
ಬಡವರು ಮತ್ತು ನಿರ್ಗತಿಕರೊಗೆ ಮೊದಲಿನಿಂದಲೂ ಏನಾದರೂ ಸಹಾಯ ಮಾಡಬೇಕು ಎಂದು ಮನಸ್ಸು ಹೇಳುತ್ತಲೇ ಇತ್ತು. 2004ರಲ್ಲಿ ಇದಕ್ಕೆ ಕಾಲ ಕೂಡಿ ಬಂತು. ಅಲ್ಲಿನಿಂದ ಇಲ್ಲಿಯವರೆಗೆ ಅನ್ನ ದಾಸೋಹ ನಡೆಸಿಕೊಂಡು ಬಂದಿದ್ದೇನೆ ಎಂದು ಭಾರತಿ ಹೇಳುತ್ತಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.