ಇನ್ಫೋಸಿಸ್ ಎಂಡಿ-ಸಿಇಒ ಸ್ಥಾನಕ್ಕೆ ವಿಶಾಲ್ ಸಿಕ್ಕಾ ರಾಜೀನಾಮೆ

Published : Aug 18, 2017, 02:26 PM ISTUpdated : Apr 11, 2018, 12:59 PM IST
ಇನ್ಫೋಸಿಸ್ ಎಂಡಿ-ಸಿಇಒ ಸ್ಥಾನಕ್ಕೆ ವಿಶಾಲ್ ಸಿಕ್ಕಾ ರಾಜೀನಾಮೆ

ಸಾರಾಂಶ

* ಇನ್ಫೋಸಿಸ್‌ ಸಂಸ್ಥೆಯ ಎಂಡಿ ಮತ್ತು ಸಿಇಒ ಸ್ಥಾನಕ್ಕೆ ವಿಶಾಲ್‌ ಸಿಕ್ಕಾ ರಾಜೀನಾಮೆ * ಸಿಕ್ಕಾ ಅವರನ್ನು ಸಂಸ್ಥೆಯ ಎಕ್ಸಿಕ್ಯೂಟಿವ್ ವೈಸ್ ಚೇರ್ಮನ್ ಆಗಿ ನೇಮಕ ಮಾಡಲಾಗಿದೆ * ಸಿಕ್ಕಾ ಅವರಿಂದ ತೆರವಾದ ಎಂಡಿ, ಸಿಇಒ ಹುದ್ದೆಗೆ ಯು ಬಿ ಪ್ರವೀಣ್‌ರಾವ್‌ ನೇಮಕ * ಶೀಘ್ರದಲ್ಲೇ ಹೊಸ ಎಂಡಿ, ಸಿಇಒವನ್ನು ಆಡಳಿತ ಮಂಡಳಿ ಆಯ್ಕೆ ಮಾಡಲಿದೆ * ಈ ಸ್ಥಾನವನ್ನು ತೊರೆಯಲು ಇದು ಸೂಕ್ತ ಸಮಯ ಎಂದ ವಿಶಾಲ್​ ಸಿಕ್ಕಾ *  2014ರ ಜೂನ್ 12 ರಂದು ಸಿಕ್ಕಾ ಸಿಇಒ, ಎಂಡಿ ಆಗಿ ಅಧಿಕಾರ ವಹಿಸಿಕೊಂಡಿದ್ರು

ಬೆಂಗಳೂರು(ಆ. 18): ಇನ್‌'ಫೋಸಿಸ್‌'‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹುದ್ದೆಗೆ ವಿಶಾಲ್‌ ಸಿಕ್ಕಾ ರಾಜೀನಾಮೆ ನೀಡಿದ್ದಾರೆ.  ಯು.ಬಿ.ಪ್ರವೀಣ್‌ ರಾವ್‌ ಅವರನ್ನು ಹಂಗಾಮಿ ಸಿಇಓ ಆಗಿ ನೇಮಕ ಮಾಡಲಾಗಿದೆ ಎಂದು ಕಂಪನಿ ಕಾರ್ಯದರ್ಶಿ ಎ.ಜಿ.ಎಸ್‌. ಮಣಿಕಂಠ ತಿಳಿಸಿದ್ದಾರೆ.  ಅಗಸ್ಟ್‌ 18 ರಂದು ಸಿಕ್ಕಾ ಅವರ ರಾಜೀನಾಮೆಯನ್ನು ಕಂಪೆನಿಯ ಬೋರ್ಡ್‌ ಮೀಟಿಂಗ್‌ನಲ್ಲಿ ಅಂಗೀಕರಿಸಲಾಗಿದೆ. ಸಿಕ್ಕಾ ಇನ್ನುಮುಂದೆ ಕಂಪೆನಿಯ ಉಪಾಧ್ಯಕ್ಷರಾಗಿ ಮುಂದುವರಿಯುತ್ತಾರೆ ಎಂದು ಮಣಿಕಂಠ ತಿಳಿಸಿದ್ದಾರೆ. 

ಇನ್ನು, ವಿಶಾಲ್​ ರಾಜೀನಾಮೆ ಬೆನ್ನಲ್ಲೇ ಇನ್ಫೋಸಿಸ್​ ಮುಖ್ಯಸ್ಥ ನಾರಾಯಣಮೂರ್ತಿ ವಾಗ್ದಾಳಿ ನಡೆಸಿದ್ದಾರೆ. ವಿಶಾಲ್​ ಸಿಕ್ಕಾ ಅವರು ಸಿಇಒ ಆಗುವ ಅರ್ಹತೆ ಅಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಿಪಿಎಲ್ ಕಾರ್ಡ್ ಆದಾಯ ಮಿತಿ 1.80 ಲಕ್ಷಕ್ಕೆ ಏರಿಕೆ? ಸಚಿವ ಮುನಿಯಪ್ಪ ಕೊಟ್ಟ ಬಿಗ್ ಅಪ್ಡೇಟ್ ಏನು?
ರೈಲ್ವೆ ಪರೀಕ್ಷೆಯಲ್ಲಿ ಕನ್ನಡ ಕಡೆಗಣನೆಗೆ ಕರವೇ ಕೆಂಡ; ನಾರಾಯಣ ಗೌಡರ ಹೋರಾಟಕ್ಕೆ ಮಣಿದು ಹೊಸ ಅಧಿಸೂಚನೆ ಹೊರಡಿಸಿದ ಇಲಾಖೆ!