ಚಿತ್ರದುರ್ಗ ಜಿಲ್ಲಾಸ್ಪತ್ರೆ ವೈದ್ಯರ ವಿರುದ್ಧ ನಿರ್ಲಕ್ಷ್ಯ ಆರೋಪ: ನಿರ್ಲಕ್ಷ್ಯಕ್ಕೆ ನವಜಾತ ಶಿಶು ಸಾವು

By Internet DeskFirst Published Sep 9, 2016, 10:18 PM IST
Highlights

ಚಿತ್ರದುರ್ಗ(ಸೆ.10): ವೈದ್ಯೋ  ನಾರಾಯಣ ಹರಿ ಅಂತಾರೆ. ಆದರೆ ಇತ್ತೀಚೆಗೆ ಕೆಲ ವೈದ್ಯರು ರೋಗಿಗಳ ಪಾಲಿಗೆ ಯಮ ಸ್ವರೂಪಿಗಳಾಗ್ತಿದ್ದಾರೆ. ಈ ಮಾತಿಗೆ ಪುಷ್ಠಿ ನೀಡುವಂತೆ ಚಿತ್ರದುರ್ಗದ ಜಿಲ್ಲಾಸ್ಪತ್ರೆಯಲ್ಲಿ ನಡೆದ ಘಟನೆ ಸಾಕ್ಷಿಯಾಗಿದೆ. ಚಿತ್ರದುರ್ಗದ ಜಿಲ್ಲಾಸ್ಪತ್ರೆ  ಪ್ರಸೂತಿ ತಜ್ಞ ಡಾ. ಶಿವಕುಮಾರ್ ನಿರ್ಲಕ್ಷ್ಯದಿಂದ ಹಾಲುಣಿಸಬೇಕಾದ ಈ ತಾಯಿಯೊಬ್ಬಳು ಮಗು ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದಾಳೆ.

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಕಾಮಸಮುದ್ರ ಗ್ರಾಮದ ಸುಪ್ರಿಯಾ ನಾಲ್ಕು ದಿನಗಳ ಹಿಂದೆ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ರು. ಸೀಜರಿಯನ್ ಮೂಲಕ ಹೆರಿಗೆ ಮಾಡಿಸಲಾಗಿದೆ. ಆದರೆ ಹೆರಿಗೆ ಬಳಿಕ ಮಗುವಿಗೆ ಸೂಕ್ತ ಚಿಕಿತ್ಸೆ ನೀಡದೇ  ಡಾ. ಶಿವಕುಮಾರ್ ನಿರ್ಲಕ್ಷ್ಯ ವಹಿಸಿದ್ದಾರಂತೆ. ಹೀಗಾಗಿ ನವಜಾತ ಶಿಶು ಸಾವನ್ನಪ್ಪಿದೆ ಅಂತಾ ಸುಪ್ರಿತಾ ಆರೋಪಿಸಿದ್ದಾರೆ.

Latest Videos

ಇನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ, ಹಾಗೂ ಚಿಕಿತ್ಸೆ  ಉಚಿತವಾಗಿದ್ದರೂ ಪ್ರಸೂತಿ ವೈದ್ಯ ಶಿವಕುಮಾರ್​ 5000 ಹಣವನ್ನು ಪಡೆದಿದ್ದಾರೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಜತೆಗೆ ವೈದ್ಯರ ನಿರ್ಲಕ್ಷ್ಯದ ಬಗ್ಗೆ ಜಿಲ್ಲಾ ಸರ್ಜನ್​ಗೆ ಸಂಬಂಧಿಕರು ದೂರು ನೀಡಿದ್ದಾರೆ.

ಈ ಕುರಿತಾಗಿ ಜಿಲ್ಲಾ ಸರ್ಜನ್'ಗೆ ದೂರು ನೀಡಿದರೂ ಇದೂವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಬಡವರ ಪಾಲಿಗೆ ದೇವರಾಗಬೇಕಿದ್ದ ವೈದ್ಯರು ಲಂಚಕ್ಕಾಗಿ ಹೆಣ್ಣು ಶಿಶುವೊಂದನ್ನು ಬಲಿ ಪಡೆದಿರುವುದು ದುರಂತವೇ ಸರಿ.

click me!