ಎನ್‌ಆರ್‌ಸಿ: ಇಂದಿರಾ ಹೇಳಿದ್ದೇನು? ಕಾಂಗ್ರೆಸ್ ಮಾಡ್ತಿರೋದೇನು?

By Web Desk  |  First Published Aug 2, 2018, 12:58 PM IST

ಅಕ್ರಮ ವಲಸಿಗರ ಕುರಿತು ಇಂದಿರಾ ನಿಲುವು ಏನಿತ್ತು?! ಬಿಬಿಸಿಗೆ ನೀಡಿದ್ದ ಸಂದರ್ಶನದಲ್ಲಿ ಇಂದಿರಾ ಹೇಳಿದ್ದೇನು?!  1971 ರಲ್ಲಿ ಬಿಬಿಸಿಗೆ ನೀಡಿದ್ದ ವಿಶೆಷ ಸಂದರ್ಶನ! ಅಕ್ರಮ ವಲಸಿಗರನ್ನು ಸಹಿಸಲು ಸಾಧ್ಯವಿಲ್ಲ !ರಾಹುಲ್ ಗಾಂಧಿ ನಿಲುವು ಈಗ್ಯಾಕೆ ಭಿನ್ನ? 


ಅಸ್ಸೋಂ ನಾಗರಿಕರ ರಾಷ್ಟ್ರೀಯ ನೋಂದಣಿಗೆ ಕೇಂದ್ರ ಸರ್ಕಾರ ದೃಢ ಹೆಜ್ಜೆ ಇಡುತ್ತಿದೆ. ಅದರಂತೆ ಎನ್‌ಆರ್‌ಸಿಯಲ್ಲಿ ಹೆಸರು ಸೇರಿಸಲಾಗದವರನ್ನು ಅಕ್ರಮ ವಲಸಿಗರೆಂದು ಪರಿಗಣಿಸಿದೆ. ಆದರೆ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ವಿಪಕ್ಷಗಳು ಈ ಗಂಭೀರ ವಿಷಯವನ್ನೂ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲು ತವಕಿಸುತ್ತಿವೆ.

ಎನ್‌ಆರ್‌ಸಿ ವಿರುದ್ಧ ಸೊಲ್ಲೆತ್ತಿದವರಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ಒಬ್ಬರು. ಕೇಂದ್ರ ಸರ್ಕಾರದ  ನಿರ್ಧಾರದಿಂದ ವಲಸಿಗರಷ್ಟೇ ಅಲ್ಲದೇ ಅಸ್ಸಾಮಿ ಜನರೂ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂಬುದು ಅವರ ವಾದ. ಆದರೆ ಬಾಂಗ್ಲಾ ಅಕ್ರಮ ವಲಸಿಗರ ಕುರಿತು ರಾಹುಲ್ ಅವರ ಅಜ್ಜಿ, ಮಾಜಿ ಪ್ರಧಾನಮಂತ್ರಿ ದಿ. ಇಂದಿರಾ ಗಾಂಧಿ ಬಿಬಿಸಿ ಸಂದರ್ಶನದಲ್ಲಿ ಏನು ಹೇಳಿದ್ದರು ಎಂಬುದನ್ನು ಅವರು ನೋಡಬೇಕಾದ ಅವಶ್ಯಕತೆ ಇದೆ.

Tap to resize

Latest Videos

1971 ರಲ್ಲಿ ಬಿಬಿಸಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಇಂದಿರಾ ಗಾಂಧಿ, ಅಕ್ರಮ ವಲಸಿಗರ ಕುರಿತು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದರು. ಬಾಂಗ್ಲಾ ಅಕ್ರಮ ವಲಸಿಗರು ದೇಶಕ್ಕೆ ಹೊರೆಯಾಗಿದ್ದು, ಅವರನ್ನು ಹೊರದಬ್ಬುವ ಕೆಲಸ ತುರ್ತಾಗಿ ಆಗಬೇಕಿದೆ ಎಂದು ಇಂದಿರಾ ಅಭಿಪ್ರಾಯಪಟ್ಟಿದ್ದರು.

ಅಕ್ರಮ ವಲಸಿಗರ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ್ದ ಇಂದಿರಾ, ಬಾಂಗ್ಲಾ ಅಕ್ರಮ ನುಸುಳುಕೋರರನ್ನು ಹೊರದಬ್ಬುವ ಕೆಲಸ ಆಗಬೇಕಿದ್ದು, ಈ ನಿಟ್ಟಿನಲ್ಲಿ ಭಾರತ ಸರ್ಕಾರ ಮೀನಮೇಷ ಎಣಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು.

ಆದರೆ ಅದೇ ಇಂದಿರಾ ಗಾಂಧಿ ಅವರ ಮೊಮ್ಮಗ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಕೇಂದ್ರ ಸರ್ಕಾರದ ದೃಢ ನಿರ್ಧಾರವನ್ನು ಖಂಡಿಸುತ್ತಿರುವುದು ಇಂದಿನ ರಾಜಕೀಯ ವಿಪರ್ಯಾಸ ಎಂದು ಹೇಳಬಹುದು.

ಈ ಸುದ್ದಿಯ ಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ-Indira Gandhi proposed what NRC seeks to do: Deport Bangladeshi infiltrators

click me!