
ಬೆಂಗಳೂರು (ಫೆ.26): ರಾಜಧಾನಿ ಮತದಾರರನ್ನು ಸೆಳೆಯಲು ಕಾಂಗ್ರೆಸ್ ಸರ್ಕಾರ ಹೊಸ ತಂತ್ರ ರೂಪಿಸಿದೆ.
ಮಾರ್ಚ್ 1 ರಿಂದ ಇಂದಿರಾ ಕ್ಯಾಂಟಿನ್ ಮೆನು ಬದಲಾವಣೆಯಾಗಲಿದೆ. ಹೈಟೆಕ್ ಊಟ, ಉಪಹಾರ ನೀಡಲು ಸರ್ಕಾರ ಮುಂದಾಗಿದೆ. ಅನ್ನ ಸಾಂಬಾರ್ ಮೊಸರನ್ನಗೆ ಸೀಮಿತವಾಗಿದ್ದ ಕ್ಯಾಂಟೀನ್’ನಲ್ಲಿ ಪಾಯಸ, ವೈರೈಟಿ ಇಡ್ಲಿ, ಸೇರಿದಂತೆ ಉತ್ತರ ಭಾರತದ ತಿನಿಸು ನೀಡಲಿದ್ದಾರೆ.
ದರ್ಶಿನಿಯಂತಹ ಹೋಟೆಲ್’ನಲ್ಲಿ ಸಿಗುವ ತಿಂಡಿಗಳು ಇಂದಿರಾ ಕ್ಯಾಂಟಿನ್’ನಲ್ಲಿ ಲಭ್ಯವಾಗಲಿದೆ. ಕಡಿಮೆ ದರದಲ್ಲಿ ಹೆಚ್ಚು ವೆರೈಟಿ ತಿಂಡಿ ನೀಡಿ ಗ್ರಾಹಕರ ಸೆಳೆಯಲು ಸರ್ಕಾರ ಚುನಾವಣಾ ತಂತ್ರ ಮಾಡಿದೆ.
ವೆರೖಟಿ ತಿಂಡಿ ಜಾಸ್ತಿ ನೀಡುವುದರಿಂದ ಖರ್ಚು ಹೆಚ್ಚಳವಾಗಲಿದ್ದು ಆ ವೆಚ್ಚವನ್ನು ತೆರಿಗೆದಾರರ ಮೇಲೆ ಹಾಕಲು ಪಾಲಿಕೆ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಸಾಲದ ಸುಳಿಯಲ್ಲಿರುವ ಪಾಲಿಕೆಯಿಂದ ಕ್ಯಾಂಟಿನ್’ಗಾಗಿ ಮತ್ತಷ್ಟು ಸಾಲ ಮಾಡುವ ಸಾಧ್ಯತೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.