
ಚೆನ್ನೈ: ಭಾರತದ ಮೊಟ್ಟ ಮೊದಲ ರೋಡ್-ರೈಲರ್ ರೈಲು ಶೀಘ್ರದಲ್ಲೇ ಆರಂಭವಾಗುವ ನಿರೀಕ್ಷೆಯಿದೆ. ದಕ್ಷಿಣ ರೈಲ್ವೆ ಸಿದ್ಧಪಡಿಸುತ್ತಿರುವ ಈ ರೋಡ್ -ರೈಲರ್ ಟ್ರೇನ್‌ಗೆ ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವಾಲಯ ಅನುಮೋದನೆ ನೀಡಿದೆ.
ಇದರಿಂದಾಗಿ ಸರಕು ಸಾಗಣೆ ಕ್ಷೇತ್ರದಲ್ಲಿ ಭಾರತ ಇನ್ನೊಂದು ಮೈಲಿಗಲ್ಲು ಸ್ಥಾಪಿಸುವ ನಿರೀಕ್ಷೆಯಿದೆ. ‘ರೋಡ್ ರೈಲರ್ ಯೂನಿಟ್’ ರಸ್ತೆಯ ಮೇಲೆ ಲಾರಿ ರೀತಿ ಹಾಗೂ ಹಳಿಯ ಮೇಲೆ ರೈಲಿನ ರೀತಿ ಇರಲಿದೆ.
ರೈಲಿನ ಮೂಲಕ ಸರಕು ಸಾಗಣೆಯಾದ ಬಳಿಕ, ಸರಕನ್ನು ಅನ್‌ಲೋಡ್ ಮಾಡಿ ಪುನಃ ಲಾರಿ ಮೂಲಕ ಸರಕು ಸಾಗಿಸುವ ಅಗತ್ಯ ಇದರಿಂದ ಬೀಳದು. ನಿಲ್ದಾಣಕ್ಕೆ ‘ರೋಡ್ ರೈಲರ್ ಯೂನಿಟ್’ ತಲುಪುತ್ತಿದ್ದಂತೆಯೇ ಲಾರಿಯಾಗಿ ಮಾರ್ಪಾಡಾಗಿ ರಸ್ತೆಗೆ ಇಳಿಯುತ್ತದೆ.
ಸರಕನ್ನು ಸಂಬಂಧಪಟ್ಟವರಿಗೆ ನೇರವಾಗಿ ತಲುಪಿಸುತ್ತದೆ. ಪ್ರತಿ ರೋಡ್ ರೈಲರ್ ಯೂನಿಟ್‌ಗೆ 8 ಲಾರಿ ಚಕ್ರಗಳು ಇರುತ್ತವೆ. ಪ್ರತಿ ಬೋಗಿ 4 ರೈಲು ಚಕ್ರಗಳನ್ನು ಹೊಂದಿರುತ್ತದೆ. ಇದರಲ್ಲಿನ ಪ್ರತಿ ವ್ಯಾಗನ್ 30 ಟನ್‌ರಿಂದ 50 ಟನ್ ಭಾರದ ವಸ್ತುಗಳನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.