ನಂಬಿಕೆ ವಿಷ್ಯದಲ್ಲಿ ಸೇನೆ ಫಸ್ಟ್, ರಾಜಕಾರಣಿಗಳು ಲಾಸ್ಟ್: ಇಲ್ಲಿದೆ ಭಾರತೀಯರ ಇಷ್ಟ-ಅನಿಷ್ಟಗಳ ಲಿಸ್ಟ್!

By Web DeskFirst Published Sep 19, 2019, 3:13 PM IST
Highlights

ಭಾರತೀಯರ ನಂಬಿಕೆ ವಿಷ್ಯದಲ್ಲಿ ಯೋಧರು ಪ್ರಥಮ, ರಾಜಕಾರಣಿಗಳು ಅಂತಿಮ| ಲೀಡರ್‌ಗಳಾದ್ರೂ ನಂಬಿಕೆಗೆ ಅನರ್ಹರು ಅಂದ್ರು ಭಾರತೀಯರು| ಎರಡು, ಮೂರನೇ ಸ್ಥಾನದಲ್ಲಿ ಯಾರಿದ್ದಾರೆ?

ನವದೆಹಲಿ[ಸೆ.19]: ನಗರ ಪ್ರದೇಶದ ಶೇ. 70ಕ್ಕೂ ಅಧಿಕ ಮಂದಿ ಭಾರತೀಯ ಸೇನೆಯ ಸಶಸ್ತ್ರ ಮೀಸಲು ಪಡೆಯ ಮೇಲೆ ಅತಿ ಹೆಚ್ಚು ವಿಶ್ವಾಸ ಪ್ರಕಟಿಸಿದ್ದು, ರಾಜಕಾರಣಿಗಳನ್ನು ಅನುಮಾನದ ದೃಷ್ಟಿಯಲ್ಲಿ ನೋಡಿದ್ದಾರೆ. ಇಂತಹುದ್ದೊಂದು ವಿಚಾರ ಸಮೀಕ್ಷೆಯೊಂದರಲ್ಲಿ ಬಯಲಾಗಿದೆ. ಮಾರ್ಕೆಟ್ ರಿಸರ್ಚ್ ಫರ್ಮ್ ಇಪ್ಸೋಸ್ ನಡೆಸಿದ ಸಮೀಕ್ಷೆಯೊಂದ ಅನ್ವಯ, ವಿಜ್ಞಾನಿಗಳು ಹಾಗೂ ಶಿಕ್ಷಕರು ಭಾರತದ ಅತ್ಯಂತ ವಿಶ್ವಾಸಾರ್ಹರಲ್ಲಿ ಎರಡನೇ ಹಾಗು ಮೂರನೇ ಸ್ಥಾನದಲ್ಲಿದ್ದಾರೆ. 

'ಗ್ಲೋಬಲ್ ಟ್ರಸ್ಟ್ ಇನ್ ಪ್ರೊಫೆಶನ್ಸ್' ಶೀರ್ಷಿಕೆಯಡಿ ನಡೆಸಲಾದ ಈ ಸಮೀಕ್ಷೆಯಲ್ಲಿ ಶೇ. 59ರಷ್ಟು ಭಾರತದ ನಗರ ವಾಸಿಗಳು ರಾಜಕೀಯ ಹಾಗೂ ರಾಜಕಾರಣಿಗಳನ್ನು ವಿಶ್ವಾಸಕ್ಕೆ ಯೋಗ್ಯವಲ್ಲದವರು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದಾದ ಬಳಿಕ ಶೇ. 52ರಷ್ಟು ಮಂದಿ ಸರ್ಕಾರಿ ಅಧಿಕಾರಿಗಳು ಹಾಗೂ ಶೇ. 41 ರಷ್ಟು ಮಂದಿ ಜಾಹೀರಾತುದಾರರನ್ನು ವಿಶ್ವಾಸಕ್ಕೆ ಯೋಗ್ಯರಲ್ಲದವರು ಎಂದು ತಿಳಿಸಿದ್ದಾರೆ.

ಈ ಕುರಿತಾಗಿ ಪ್ರತಿಕ್ರಿಯಿಸಿದ ಇಸ್ಪೋಸ್ ಇಂಡಿಯಾದ ಅಧಿಕಾರಿಯೊಬ್ಬರು 'ಅಧಿಕ ಮಂದಿ ತ್ಯಾಗ, ಬಲಿದಾನ, ಬದ್ಧತೆ ಹಾಗೂ ಶಿಸ್ತಿನಿಂದ ಕೂಡಿದ ಸಶಸ್ತ್ರ ಮೀಸಲು ಪಡೆಯನ್ನು ನಂಬಿಕೆಗೆ ಅರ್ಹವಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ' ಎಂದು ತಿಳಿಸಿದ್ದಾರೆ.

ಅಲ್ಲದೇ 'ದೇಶ ನಿರ್ಮಿಸಲು ತಮ್ಮದೇ ಕೊಡುಗೆ ನೀಡುವ ವಿಜ್ಞಾನಿಗಳು ಹಾಗೂ ಶಿಕ್ಷಕ ವೃತ್ತಿಯ ಮೇಲೂ ಜನರು ನಂಬಿಕೆ ಹೊಂದಿದ್ದಾರೆ' ಎಂದಿದ್ದಾರೆ. 

ಜಾಗತಿಕ ಮಟ್ಟದಲ್ಲಿ ವಿಜ್ಞಾನಿಗಳು[ಶೇ. 60], ವೈದ್ಯರು[ಶೇ. 56] ಹಾಗೂ ಶಿಕ್ಷಕರು[ಶೇ. 52] ಮೂಲಕ ಅಗ್ರ ಸ್ಥಾನದಲ್ಲಿದ್ದಾರೆ. ಇಲ್ಲೂ ಜನರು ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳು ಹಾಗೂ ಜಾಹೀರಾತುದಾರರನ್ನು ನಂಬಿಕೆಗೆ ಯೋಗ್ಯರಲ್ಲದವರೆಂದು ಬಣ್ಣಿಸಿದ್ದಾರೆ. 

click me!