
ನವದೆಹಲಿ(ಮಾ.17): ವರದಿಯೊಂದು ಭಾರತೀಯರ ಬಗ್ಗೆ ಶಾಕಿಂಗ್ ನ್ಯೂಸ್ ನೀಡಿದೆ. ಅದೇನಂತೀರಾ ನಿದ್ರೆಗೆ ಸಂಬಂಧಿಸಿದ ವಿಷಯವನ್ನು ಸಂಶೋಧನಾ ಸಂಸ್ಥೆಯೊಂದು ವರದಿಯ ಮೂಲಕ ತಿಳಿಸಿದೆ.
ವಿಶ್ವದಲ್ಲಿಯೇ ಅತೀ ಹೆಚ್ಚು ಕಡಿಮೆ ನಿದ್ದೆ ಮಾಡುವವರಲ್ಲಿ ಭಾರತೀಯರು ಎರಡನೆ ಸ್ಥಾನದಲ್ಲಿದ್ದಾರೆ. ದಿನಕ್ಕೆ ಭಾರತೀಯರ ನಿತ್ಯದ ಕನಿಷ್ಠ ನಿದ್ರೆಯ ಸರಾಸರಿ ಅವಧಿ 6.55 ಗಂಟೆ.ವಿಶ್ವದಲ್ಲಿ ಅತೀ ಹೆಚ್ಚು ನಿದ್ರಿಸುವವರ ದೇಶ ನ್ಯೂಜಿಲೆಂಡ್ ಅವರು ನಿದ್ರಿಸುವ ಅವಧಿ 7.25 ಗಂಟೆ, ಅದರ ನಂತರದ ಸ್ಥಾನದಲ್ಲಿ ಇಂಗ್ಲೆಂಡ್ 7.16, ಆಸ್ಟ್ರೇಲಿಯಾ 7.16 ಗಂಟೆ ಅವಧಿ ನಿದ್ರಿಸುತ್ತಾರೆ.
ಜಪಾನ್ ದೇಶದವರು ಕಡಿಮೆ ನಿದ್ದೆ ಮಾಡುವವರಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಜಪಾನಿಗಳು ನಿತ್ಯ ನಿದ್ರಿಸುವ ಸರಾಸರಿ ಅವಧಿ 7.16 ಗಂಟೆ. ವೈದ್ಯರು ಕಾರ್ಯನಿರ್ವಹಿಸುವ ಫಿಟ್'ಬಿಟ್ ಎಂಬ ಸ್ವಯಂಸೇವಾ ಸಂಸ್ಥೆ ವಿಶ್ವದ 18 ದೇಶಗಳ ಆಯ್ದ ಜನರನ್ನು ಸಮೀಕ್ಷೆ ನಡೆಸಿ ಈ ಮಾಹಿತಿ ನೀಡಿದೆ. ಅಮೆರಿಕಾ ಹಾಗೂ ಯುರೋಪಿಯನ್ ದೇಶದವರಿಗಿಂತ ಏಷ್ಯನ್ ದೇಶದವರು ಕಡಿಮೆ ನಿದ್ದೆ ಮಾಡುತ್ತಾರೆ. ನಿತ್ಯ ಪಥ್ಯ,ವ್ಯಾಯಾಮದಿಂದ ಆರೋಗ್ಯವು ಉತ್ತಮವಾಗಿ ಉತ್ತಮ ನಿದ್ರೆ ಮಾಡಬಹುದು ಜೊತೆಗೆ ಧೀರ್ಘಕಾಲ ಬಾಧಿಸುವ ಕಾಯಿಲೆಗಳನ್ನು ತಡೆಗಟ್ಟಬಹುದು ಎಂದು ಸಮೀಕ್ಷೆಯ ವರದಿ ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.