
ನ್ಯೂಯಾರ್ಕ್: ಫ್ಲೊರಿಡಾದ ಡೋಂಗ್ಲಾಸ್ ಹೈಸ್ಕೂಲ್ ಮೇಲೆ ಬುಧವಾರ ನಡೆದ ದಾಳಿ ವೇಳೆ ಭಾರತೀಯ-ಅಮೆರಿಕನ್ ಗಣಿತ ಶಿಕ್ಷಕಿ ಶಾಂತಿ ವಿಶ್ವನಾಥನ್ ಮುಂಜಾಗರೂಕತೆ ವಹಿಸಿ ಅನೇಕ ಮಕ್ಕಳ ಪ್ರಾಣ ಉಳಿಸಿದ್ದಾರೆಂಬ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.
ಶಾಂತಿ ವಿಶ್ವನಾಥನ್ ದಾಳಿ ವೇಳೆ ತರಗತಿಯ ಬಾಗಿಲು ಕಿಟಕಿಗಳನ್ನು ಪರದೆಯಿಂದ ಮುಚ್ಚಿ, ಬಂಧೂಕುದಾರಿ ವ್ಯಕ್ತಿಯ ಕಣ್ಣಿಗೆ ಕಾಣದಂತೆ ಅವಿತುಕೊಳ್ಳಲು ಮಕ್ಕಳಿಗೆ ಸೂಚಿಸಿದರು. ಅಲ್ಲದೆ ಬಂಧೂಕುಧಾರಿಯು ಪೊಲೀಸ್ ವೇಷದಲ್ಲಿ ಬಾಗಿಲು ತೆಗೆಯುವಂತೆ ಕೇಳಿಕೊಂಡರೂ ನಂಬದೆ ಬಾಗಿಲು ತೆಗೆಯಲಿಲ್ಲ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ತಮ್ಮ ಜೀವವನ್ನೂ ಲೆಕ್ಕಿಸದೆ ಮಕ್ಕಳನ್ನು ರಕ್ಷಿಸಿದ ಶಾಂತಿ ವಿಶ್ವನಾಥನ್ ಅವರನ್ನು ದೇಶಾದ್ಯಂತ ಪ್ರಶಂಸಿಲಾಗುತ್ತಿದೆ. ಈ ದಾಳಿಯಲ್ಲಿ 15 ವಿದ್ಯಾರ್ಥಿಗಳು ಹಾಗೂ ಇಬ್ಬರು ಸಿಬ್ಬಂದಿಗಳು ಸೇರಿ 17ಜನ ಮೃತಪಟ್ಟಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.