ಪುಣೆಯಲ್ಲಿ ಗೂಬೆಗಳ ಹಬ್ಬ ಆಚರಣೆ!

By Web DeskFirst Published Dec 9, 2018, 12:28 PM IST
Highlights

ಪುಣೆಯ ಮೂಢನಂಬಿಕೆ ವಿರೋಧಿ ಸಂಘಟನೆಯೊಂದು 2 ದಿನ ‘ಭಾರತೀಯ  ಗೂಬೆ ಹಬ್ಬ’ ಹಮ್ಮಿಕೊಂಡಿದೆ.

ಪುಣೆ[ಡಿ.09]: ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಭ್ರಷ್ಟಾಚಾರ, ಭಯೋತ್ಪಾದನೆ, ವರದಕ್ಷಿಣೆ ಸೇರಿದಂತೆ ಇತರ ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಟ ಹಮ್ಮಿಕೊಳ್ಳೋದು ಹೊಸ ವಿಷಯವೇನಲ್ಲ ಬಿಡಿ. ಆದ್ರೆ, ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ಗೂಬೆಗಳ ಹಬ್ಬ ಆಚರಿಸಲಾಗಿದೆ. ವಿಚಿತ್ರ ಅನ್ನಿಸಿದ್ರೂ, ಇದೇ ಸತ್ಯ. 

ನವೆಂಬರ್ ಕೊನೆಯ ವಾರದಲ್ಲಿ ಪುಣೆಯಲ್ಲಿ ಮೂಢನಂಬಿಕೆ ವಿರೋಧಿ ಸಂಘಟನೆಯೊಂದು 2 ದಿನ ‘ಭಾರತೀಯ  ಗೂಬೆ ಹಬ್ಬ’ ಹಮ್ಮಿಕೊಂಡಿತ್ತು. ಶಾಲಾ ವಿದ್ಯಾರ್ಥಿಗಳೇ ಮಾಡಿದ ಗೂಬೆಗಳ ಪೇಂಟಿಂಗ್, ಪೇಪರ್ ವರ್ಕ್, ಮರದ ಕೆತ್ತನೆಗಳನ್ನು ಪ್ರದರ್ಶಿಸಲಾಯಿತು. ಇದು ಮಕ್ಕಳಲ್ಲಿ ಮೂಢನಂಬಿಕೆ  ವಿರೋಧಿ ಚಿಂತನೆ ಬೆಳೆಸಲು ನೆರವಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

click me!