ಸೇವೆಗೆ ಸಾಟಿ ಎಲ್ಲಿ?: ಕಾರ್ಯಾಚರಣೆ ನಿಲ್ಲಿಸಿದ ಐಎನ್ಎಸ್ ರಂಜಿತ್!

By Web DeskFirst Published May 3, 2019, 9:54 PM IST
Highlights

ಕಾರ್ಯಾಚರಣೆ ನಿಲ್ಲಿಸಿದ ಐಎನ್ಎಸ್ ರಂಜಿತ್| 36 ವರ್ಷಗಳ ಸುದೀರ್ಘ ಸೇವೆ ಬಳಿಕ ನಿವೃತ್ತಿ| ಭಾರತೀಯ ನೌಕಾಪಡೆಯ ಮುಂಚೂಣಿ ಕ್ಷಿಪಣಿ ವಿಧ್ವಂಸಕ| 1970ರಲ್ಲಿ ಉಕ್ರೇನ್ ನಲ್ಲಿ ನಿರ್ಮಿಸಲಾಗಿದ್ದ ಯುದ್ಧ ನೌಕೆ| 1983 ರಲ್ಲಿ ಇದನ್ನು ಭಾರತೀಯ ನೌಕಾಪಡೆಗೆ ಸೇರ್ಪಡೆ|

ನವದೆಹಲಿ(ಮೇ.03): ಭಾರತೀಯ ನೌಕಾಪಡೆಯ ಮುಂಚೂಣಿ ಕ್ಷಿಪಣಿ ವಿಧ್ವಂಸಕ, ಐಎನ್ಎಸ್ ರಂಜಿತ್ ಇಂದು ಅಧಿಕೃತವಾಗಿ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ.

36 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿರುವ ಐಎನ್ಎಸ್ ರಂಜಿತ್, ಭಾರತೀಯ ನೌಕಾ ಇತಿಹಾಸದಲ್ಲಿ ಅತ್ಯುತ್ತಮವಾದ ಸಮರ ನೌಕೆ ಎಂಬನ ಹೆಗ್ಗಳಿಕೆಗೆ ಪಾತ್ರವಾಗಿದೆ.

ಅಂಡಮಾನ್ ಮತ್ತು ನಿಕೋಬಾರ್ ನ ಲೆಫ್ಟಿನೆಂಟ್ ಗವರ್ನರ್ ಆಗಿದ್ದ ಮಾಜಿ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ದೇವೇಂದ್ರ ಕುಮಾರ್ ಜೋಶಿ ವಿಶಾಖಪಟ್ಟಣಂನ ನೌಕಾ ಡಾಕ್ ಯಾರ್ಡ್ ನಲ್ಲಿ ಇದನ್ನು ಕಡೆಯ ಬಾರಿಗೆ ಚಲಾಯಿಸಲಿದ್ದಾರೆ.

The front-line missile destroyer of the Indian Navy, INS Ranjit to be decommissioned on 6th May. The ship was commissioned on 15th September 1983. pic.twitter.com/LcaV5fOOOC

— ANI (@ANI)

1970ರಲ್ಲಿ ಉಕ್ರೇನ್ ನ ನಿಕೋಲೇವ್ ಮ್ಯೂನಾರ್ಡ್ಸ್ ಶಿಪ್ ಯಾರ್ಡ್ ನಲ್ಲಿ ಇದನ್ನು ನಿರ್ಮಿಸಲಾಗಿತ್ತು.  ಲವ್ಕಿ ಎಂಬುದು ಇದರ ಮೂಲ ಹೆಸರಾಗಿತ್ತು. 

ಸೆಪ್ಟೆಂಬರ್ 1983 ರಲ್ಲಿ ಇದನ್ನು ಭಾರತೀಯ ನೌಕಾಪಡೆಗೆ ಸೇರಿಸಿಕೊಳ್ಳಲಾಗಿತ್ತು.

click me!