ಚಂಡಮಾರುತ ಎಫೆಕ್ಟ್ , ರದ್ದಾದ ರೈಲುಗಳ ಪಟ್ಟಿ

By Web DeskFirst Published May 3, 2019, 8:15 PM IST
Highlights

ಚಂಡಮಾರುತದ ಪರಿಣಾಮ ಕರ್ನಾಟಕದಿಂದ ಒಡಿಶಾ ಮತ್ತು ಪಶ್ಚಿಮ ಬಂಗಾಳದ ಕಡೆ ತೆರಳುವ ಹಲವು ರೈಲು ಸಂಚಾರಗಳನ್ನು ರದ್ದು ಮಾಡಲಾಗಿದೆ.

ಬೆಂಗಳೂರು[ಮೇ.02]  ಫನಿ ವಂಡನಾರ ಹೊಡೆತಕ್ಕೆ ಹಲವು ರೈಲು ಸಂಚಾರಗಳನ್ನು ರದ್ದು ಮಾಡಲಾಗಿದೆ. ಒಡಿಶಾದಲ್ಲಿ ಫನಿ ಚಂಡಮಾರುತ ಅಪ್ಪಳಿಸಿರುವುದರಿಂದ  ಕರ್ನಾಟಕದಿಂದ ಒಡಿಶಾ, ಪಶ್ಚಿಮ ಬಂಗಾಳಕ್ಕೆ ಹೋಗಬೇಕಾಗ ಎಂಟು ರೈಲುಗಳ ಸಂಚಾರ ರದ್ದು ಮಾಡಲಾಗಿದೆ.

ಮೈಸೂರು, ಬೆಂಗಳೂರು, ಹುಬ್ಬಳ್ಳಿ, ಯಶವಂತಪುರ, ಬೆಂಗಳೂರು ಕಂಟೋನ್ಮೆಂಟ್ ನಿಂದ ಹೊರಬೇಕಿದ್ದ ರೈಲುಗಳ ಸಂಚಾರ ಸ್ಥಗಿತ ಮಾಡಲಾಗಿದೆ. ಒಟ್ಟು ಎಂಟು ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ನಾಲ್ಕು ದಿನಗಳ ಕಾಲ ಒಡಿಶಾ, ಪಶ್ಚಿಮ ಬಂಗಾಳದ ಕಡೆ ರೈಲು ಸಂಚಾರ ಇರುವುದಿಲ್ಲ.

ಗಮನಿಸಿ: ಶಿವಮೊಗ್ಗ-ಬೆಂಗಳೂರು ಇಂಟರ್‌ಸಿಟಿ ರೈಲ್ವೆ ಸಮಯ ಮತ್ತೆ ಬದಲಾಗಿದೆ

ರದ್ದಾರ ರೈಲುಗಳ ವಿವರ

ದಿನಾಂಕ 03/05/2019
1. ಹೌರಾ-ಯಶವಂತಪುರ ಎಕ್ಸ್‌ಪ್ರೆಸ್
2. ‎ಸತ್ಯಸಾಯಿ ಪ್ರಶಾಂತಿ ನಿಲಯಮ್-ಹೌರಾ ಎಕ್ಸ್‌ಪ್ರೆಸ್
3. ‎ಯಶವಂತಪುರ-ಹೌರಾ ಎಕ್ಸ್‌ಪ್ರೆಸ್, ಬೆಂಗಳೂರು
4. ‎ಬೆಂಗಳೂರು ಕಂಟೋನ್ಮೆಂಟ್-ಅಗರ್ತಲ ಎಕ್ಸ್‌ಪ್ರೆಸ್

ದಿನಾಂಕ 04/05/2019
1. ಯಶವಂತಪುರ-ಪುರಿ ಎಕ್ಸ್‌ಪ್ರೆಸ್
2. ‎ಬೆಂಗಳೂರು-ಭುವನೇಶ್ವರ್ ಎಕ್ಸ್‌ಪ್ರೆಸ್

ದಿನಾಂಕ 06/05/2019
1. ಮೈಸೂರು-ಹೌರಾ ಎಕ್ಸ್‌ಪ್ರೆಸ್, 
2. ‎ಮುಜಾಫರ್ಪುರ್-ಯಶವಂತಪುರ ಎಕ್ಸ್‌ಪ್ರೆಸ್‌

click me!