
ಲಕ್ನೋ(ಏ. 11): ಭಾರತದ ನೌಕಾಪಡೆ ಅಧಿಕಾರಿ ಕುಲಭೂಷಣ್ ಜಾಧವ್'ರನ್ನ ರಾ ಏಜೆಂಟ್ ಆರೋಪದಡಿ ಬಂಧಿಸಿ ಮರಣದಂಡನೆ ಶಿಕ್ಷೆ ವಿಧಿಸಿರುವ ಪಾಕ್ ನಿರ್ಧಾರಕ್ಕೆ ಭಾರೀ ಖಂಡನೆ ವ್ಯಕ್ತವಾಗಿದೆ. ಉತ್ತರಪ್ರದೇಶದ ಲಕ್ನೋದಲ್ಲಿ ಭಾರತೀಯ ಮುಸ್ಲಿಮರು ಪಾಕಿಸ್ತಾನದ ನಿರ್ಧಾರವನ್ನ ಖಂಡಿಸಿ ಬೀದಿಗಿಳಿದು ಹೋರಾಟ ನಡೆಸಿದ್ದಾರೆ. ಪಾಕಿಸ್ತಾನದ ಧ್ವಜ ಹಿಡಿದು ಧಿಕ್ಕಾರ ಕೂಗಿದ ಭಾರತೀಯ ಮುಸ್ಲಿಮರು ಆ ದೇಶದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ, ಕುಲಭೂಷಣ್ ಜಾದವ್'ರ ಪರವಾಗಿ ತಾನು ಯಾವುದೇ ಹಂತಕ್ಕೆ ಬೇಕಾದರೂ ಹೋಗಲು ಸಿದ್ಧ ಎಂದು ಭಾರತ ಸರಕಾರ ಹೇಳಿದೆ. ಕುಲಭೂಷಣ್'ರನ್ನು ನೇಣಿಗೆ ಹಾಕಿದ್ದೇ ಆದಲ್ಲಿ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲಾಗುವುದು ಎಂದೂ ಭಾರತ ಎಚ್ಚರಿಕೆ ನೀಡಿದೆ. ಆದರೆ, ಕಾನೂನು ಪ್ರಕಾರವಾಗಿಯೇ ಕುಲಭೂಷಣ್'ರ ವಿಚಾರಣೆ ನಡೆಸಿ ತೀರ್ಪು ನೀಡಲಾಗಿದೆ. ಭಾರತದಿಂದ ಏನೇ ದಾಳಿ ನಡೆದರೂ ಎದುರಿಸಲು ತಾನು ಸಿದ್ಧವಿರುವುದಾಗಿ ಪಾಕಿಸ್ತಾನ ಸರಕಾರ ಹೇಳಿದೆ.
ಕುಲಭೂಷಣ್ ಜಾಧವ್ ಪಾಕಿಸ್ತಾನದಲ್ಲಿ ಅನೇಕ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದರೆಂಬುದು ಪಾಕ್ ಆರೋಪ. ಅಲ್ಲದೇ, ತಾನು ಇನ್ನು ಭಾರತೀಯ ನೌಕಾ ಪಡೆಯ ಸೇನೆಯಲ್ಲಿರುವುದಾಗಿ ಕುಲಭೂಷಣ್ ಹೇಳಿದ್ದಾರೆನ್ನಲಾದ ವಿಡಿಯೋವನ್ನು ಪಾಕ್ ಸಾಕ್ಷ್ಯವಾಗಿ ಬಳಸಿಕೊಂಡಿದೆ. ಕಳೆದ ವರ್ಷದಂದು ಕರಾಚಿಯಲ್ಲಿ ಕುಲಭೂಷಣ್'ರನ್ನು ಬಂಧಿಸಿದ್ದು, ಮಿಲಿಟರಿ ಕೋರ್ಟ್'ನಲ್ಲಿ ಕಾನೂನುಬದ್ಧವಾಗಿ ವಿಚಾರಣೆ ನಡೆಸಿರುವುದಾಗಿ ಪಾಕಿಸ್ತಾನ ಹೇಳಿಕೊಂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.