ಮುಸ್ಲೀಂ ಮಹಿಳೆಯರು ಫುಟ್ಬಾಲ್ ವೀಕ್ಷಿಸದಂತೆ ಫತ್ವಾ ಜಾರಿ

By Suvarna Web DeskFirst Published Jan 31, 2018, 9:05 AM IST
Highlights

 ಮುಸ್ಲಿಂ ಮಹಿಳೆಯರು ಪುರುಷರ ಫುಟ್ಬಾಲ್ ಆಟ ನೋಡುವುದು ಧರ್ಮ ವಿರೋಧಿ ಎಂದು ಹೇಳಿರುವ ಉತ್ತರಪ್ರದೇಶದ ದಾರುಲ್ ಉಲೂಂ ಸಂಘಟನೆ, ಇದರ ವಿರುದ್ಧ ಫತ್ವಾ  ಹೊರಡಿಸಿದೆ.

ಲಕ್ನೋ (ಜ.31):  ಮುಸ್ಲಿಂ ಮಹಿಳೆಯರು ಪುರುಷರ ಫುಟ್ಬಾಲ್ ಆಟ ನೋಡುವುದು ಧರ್ಮ ವಿರೋಧಿ ಎಂದು ಹೇಳಿರುವ ಉತ್ತರಪ್ರದೇಶದ ದಾರುಲ್ ಉಲೂಂ ಸಂಘಟನೆ, ಇದರ ವಿರುದ್ಧ ಫತ್ವಾ  ಹೊರಡಿಸಿದೆ.

ಮುಂಗಾಲಿನವರೆಗೆ ಮಾತ್ರ ಬಟ್ಟೆ ಧರಿಸಿದ ಆಟಗಾರರನ್ನು ನೋಡುವುದು ಮುಸ್ಲಿಂ ಧಾರ್ಮಿಕ ನಿಯಮ ಉಲ್ಲಂಘಿಸಿದಂತೆ ಎಂದು ಹೇಳಿದೆ. ಸಂಘಟನೆಯ ಹಿರಿಯ ನಾಯಕ ಮುಫ್ತಿ ಅಕ್ತರ್ ಕಶ್ಮಿ, ಈ ರೀತಿ ನೋಡಲು ನಿಮಗೆ ನಾಚಿಕೆ ಆಗುವುದಿಲ್ಲವೇ?, ನಿಮಗೆ ದೇವರ ಬಗ್ಗೆ ಭಯ

ವಿಲ್ಲವೇ ಎಂದಿದ್ದಾರೆ. ಇತ್ತೀಚೆಗೆ ಮಹಿಳೆಯರು ಬ್ಯೂಟಿ ಸೆಲೂನ್‌ಗೆ ಹೋಗದಂತೆ ಮತ್ತು ಬಿಗಿ ಬಟ್ಟೆ ಧರಿಸದಂತೆ ಫತ್ವಾ ಹೊರಡಿಸಲಾಗಿತ್ತು.

 

click me!