ಚೀನಾ, ಅಮೆರಿಕಾ ಹಿಂದಿಕ್ಕಲಿದೆ ಭಾರತ

First Published May 5, 2018, 10:35 AM IST
Highlights

ಅತ್ಯಂತ ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಆರ್ಥಿಕತೆಗಳ ಪೈಕಿ, ಮುಂದಿನ ಒಂದು ದಶಕದ ಅವಧಿಯಲ್ಲಿ ಭಾರತ ನಂ.1 ಸ್ಥಾನಕ್ಕೆ ಏರಲಿದೆ ಎಂದು ವರದಿಯೊಂದು ಮಾಹಿತಿ ಹೊರಗೆಡವಿದೆ. 

ನ್ಯೂಯಾರ್ಕ್: ಅತ್ಯಂತ ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಆರ್ಥಿಕತೆಗಳ ಪೈಕಿ, ಮುಂದಿನ ಒಂದು ದಶಕದ ಅವಧಿಯಲ್ಲಿ ಭಾರತ ನಂ.1 ಸ್ಥಾನಕ್ಕೆ ಏರಲಿದೆ ಎಂದು ವರದಿಯೊಂದು ಮಾಹಿತಿ ಹೊರಗೆಡವಿದೆ.  ಇದು ಆರ್ಥಿಕತೆ ವಿಷಯದಲ್ಲಿ ವಿಪಕ್ಷಗಳ ತೀವ್ರ ಟೀಕೆಗೆ ಗುರಿಯಾಗಿದ್ದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಪಾಲಿಗೆ ಶುಭ ಸುದ್ದಿಯಾಗಿ ಹೊರಹೊಮ್ಮಿದೆ. 

ಮುಂದಿನ ಒಂದು ದಶಕದ ಅವಧಿಯಲ್ಲಿ ಭಾರತ ವಾರ್ಷಿಕ ಶೇ.7.9ರಷ್ಟು ಆರ್ಥಿಕ ಪ್ರಗತಿ ದರ ಸಾಧಿಸಲಿದೆ. ಈ ಮೂಲಕ ಭಾರತ, ವಿಶ್ವದ ಅತಿದೊಡ್ಡ ಮತ್ತು ಭಾರೀ ವೇಗದಲ್ಲಿ ಬೆಳವಣಿಗೆ ಕಾಣುತ್ತಿರುವ ಆರ್ಥಿಕತೆ ಹೊಂದಿರುವ ದೇಶಗಳಾದ ಚೀನಾ ಮತ್ತು ಅಮೆರಿಕವನ್ನೂ ಮೀರಿಸಲಿದೆ ಎಂದು ಹಾರ್ವರ್ಡ್ ವಿವಿಯ ಅಂತಾರಾಷ್ಟ್ರೀಯ ಅಭಿವೃದ್ಧಿ ಕೇಂದ್ರ ತಿಳಿಸಿದೆ.

ಮುಂಬರುವ ದಶಕದಲ್ಲಿ ಭಾರತ ಮತ್ತು ವಿಯೆಟ್ನಾಂನಂಥ ರಾಷ್ಟ್ರಗಳು ಇತರೆ ರಾಷ್ಟ್ರಗಳಿಗಿಂತ  ಅಭಿವೃದ್ಧಿ ಪಥದಲ್ಲಿ ಸಾಗಲಿವೆ. ವಾರ್ಷಿಕವಾಗಿ ಶೇ.7.9ರಷ್ಟು ವೃದ್ಧಿಯಾಗಲಿರುವ ಭಾರತದ ಆರ್ಥಿಕತೆಯು, ವಿಶ್ವದ ಇತರ ರಾಷ್ಟ್ರಗಳ ಆರ್ಥಿಕ ಬೆಳವಣಿಗೆ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಇದೇ ಸಂದರ್ಭ ಅಥವಾ 2026ರ ವೇಳೆ ಚೀನಾದ ಆರ್ಥಿಕ ಅಭಿವೃದ್ಧಿ 4.9 ಆಗಿರಲಿದ್ದರೆ, ಅಮೆರಿಕ ಶೇ.3 ಮತ್ತು ಫ್ರಾನ್ಸ್ 3.5ರಷ್ಟು ಆರ್ಥಿಕ ಅಭಿವೃದ್ಧಿ ಸಾಧಿಸಲಿವೆ ಎಂದು ವರದಿ ಹೇಳಿದೆ.

click me!