ಸ್ವಂತ ಅಣ್ಣನನ್ನೇ ಮದುವೆಯಾದ ತಂಗಿ: ಬೆಚ್ಚಿ ಬೀಳಿಸಿದೆ ಕಾರಣ

Published : Jan 31, 2019, 04:48 PM ISTUpdated : Feb 01, 2019, 01:57 PM IST
ಸ್ವಂತ ಅಣ್ಣನನ್ನೇ ಮದುವೆಯಾದ ತಂಗಿ: ಬೆಚ್ಚಿ ಬೀಳಿಸಿದೆ ಕಾರಣ

ಸಾರಾಂಶ

ತಂಗಿಯೊಬ್ಬಳು ಅಣ್ಣನನ್ನೇ ವರಿಸಿರುವ ಪ್ರಕರಣ ಸದ್ಯ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಆದರೀಗ ಇದರ ಹಿಂದಿನ ಕಾರಣ ಮತ್ತಷ್ಟು ವಿಚಿತ್ರವಾಗಿದ್ದು, ಈ ಕಾರಣಕ್ಕಾಗಿ ಅಣ್ಣನನ್ನು ಮದುವೆಯಾಗಬೇಕಾಯ್ತಾ ಎಂಬ ಪ್ರಶ್ನೆ ಉದ್ಭವಿಸುವಂತೆ ಮಾಡಿದೆ. ಅಷ್ಟಕ್ಕೂ ಆ ತಂಗಿ ಅಣ್ಣನನ್ನು ಮದುವೆಯಾಗಿದ್ದೇಕೆ? ಇಲ್ಲಿದೆ ವಿವರ

ಪಂಜಾಬ್‌ನಲ್ಲಿ ಸಂಬಂಧಗಳನ್ನು ನುಚ್ಚು ನೂರಾಗಿಸುವ ಘಟನೆಯೊಂದು ನಡೆದಿದೆ. ಈ ಸುದ್ದಿ ಕೇಳಿದರೆಲ್ಲರೂ ಒಂದು ಬಾರಿ ಬೆಚ್ಚಿ ಬಿದ್ದಿದ್ದಾರೆ. ಹುಡುಗಿಯೊಬ್ಬಳು ತನ್ನ ಒಡಹುಟ್ಟಿದ ಅಣ್ಣನನ್ನೇ ವರಿಸಿದ್ದು, ಇದರ ಹಿಂದಿನ ಕಾರಣ ಮಾತ್ರ ಬಹಳಷ್ಟು ವಿಚಿತ್ರವಾಗಿದೆ. 

ಹೌದು ತಾನು ಆಸ್ಟ್ರೇಲಿಯಾಗೆ ಹೋಗಬೇಕು ಎಂಬ ಒಂದೇ ಒಂದು ಆಸೆಗೆ ಕಟುಬಿದ್ದ ತಂಗಿ ಅಣ್ಣನನ್ನೇ ವರಿಸಿದ್ದಾಳೆ. ಮದುವೆಯಾದ ಬಳಿಕ ತನ್ನಿಚ್ಛೆಯಂತೆ ನಕಲಿ ಪಾಸ್ ಪೋರ್ಟ್ ಮಾಡಿಸಿಕೊಂಡು ಆಸ್ಟ್ರೇಲಿಯಾಗೆ ಹಾರಿದ್ದಾಳೆ. ಆದರೆ ಇದನ್ನು ಗಮನಿಸಿದ ಮಹಿಳೆಯೊಬ್ಬಳು ಪೊಲೀಸರಿಗೆ ದೂರು ನೀಡಿದ ಬಳಿಕ ಈ ವಿಚಾರ ಬೆಳಕಿಗೆ ಬಂದಿದೆ. 

ಈ ಮದುವೆಯಾಟದಲ್ಲಿ ವಧು ಹಾಗೂ ವರ[ಅಣ್ಣ-ತಂಗಿ]ಯ ಪೋಷಕರು ಹಾಗೂ ಕುಟುಂಬಸ್ಥರೂ ಶಾಮೀಲಾಗಿದ್ದರೆಂಬುವುದು ಮತ್ತೂ ಅಚ್ಚರಿ ಮೂಡಿಸಿದೆ. ವೀಸಾ ಸಮಸ್ಯೆ ಇದ್ದ ಕಾರಣ ಯುವತಿಗೆ ಆಸ್ಟ್ರೇಲಿಯಾಗೆ ಹೋಗುವುದು ಅಸಾಧ್ಯವಾಗಿತ್ತು. ಹೀಗಾಗಿ ಆಕೆ ತನ್ನ ಅಣ್ಣನನ್ನೇ ವರಿಸಿದ್ದಾಳೆನ್ನಲಾಗಿದೆ.

ತನಿಖೆ ನಡೆಸಿರುವ ಪೊಲೀಸ್ ಅಧಿಕಾರಿಗಳು ಈ ಕುರಿತಾಗಿ ಪ್ರತಿಕ್ರಿಯಿಸಿದ್ದು, ತನಿಖೆಯಿಂದ ಈವರೆಗೂ ಯುವತಿಯ ಅಣ್ಣ ಆಸ್ಟ್ರೇಲಿಯಾದ ನಾಗರಿಕ ಹಕ್ಕು ಪಡೆದಿದ್ದ, ಹೀಗಾಗಿ ಯುವತಿ ನಕಲಿ ದಾಖಲೆ ಸೃಷ್ಟಿಸಿದ್ದಾರೆ. ಗುರುದ್ವಾರದಿಂದ ನಕಲಿ ಮ್ಯಾರೇಜ್ ಸರ್ಟಿಫಿಕೇಟ್ ಮಾಡಿಸಿ, ಪಾಸ್ ಪೋರ್ಟ್ ಮಾಡಿಸಿಕೊಂಡಿದ್ದಾಳೆ. ಬಳಿಕ ಆಸ್ಟ್ರೇಲಿಯಾಗೆ ಹಾರಿದ್ದಾಳೆ ಎಂದಿದ್ದಾಳೆ. ವಿದೇಶಕ್ಕೆ ಹೋಗಲು ಇವರು ಸಾಮಾಜಿಕ, ಕಾನೂನು ಹಾಗೂ ಧಾರ್ಮಿಕ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಅವರನ್ನು ಬಂಧಿಸುವ ಎಲ್ಲಾ ಪ್ರಯತ್ನಗಳನ್ನು ನಡೆಸುತ್ತಿದ್ದೇವೆ. ಆದರೆ ಇಬ್ಬರೂ ಪರಾರಿಯಾಗುತ್ತಿದ್ದಾರೆ ಎಂದಿದ್ದಾರೆ.

ವಿದೇಶಕ್ಕೆ ಹೋಗಲು ಮೋಸ ಮಾಡುವ ವಿವಿಧ ಪ್ರಕರಣಗಳು ಈವರೆಗೆ ಬೆಳಕಿಗೆ ಬಂದಿವೆ. ಆದರೆ ವಿದೇಶಕ್ಕೆ ತೆರಳುವ ಸಲುವಾಗಿ ತಂಗಿಯೊಬ್ಬಳು ಸ್ವಂತ ಅಣ್ಣನೊಂದಿಗೆ ಮದುವೆಯಾಗಿದ್ದು ಮಾತ್ರ ಇದೇ ಮೊದಲೆನ್ನಬಹುದು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಪಶ್ಚಿಮ ಬಂಗಾಳದಲ್ಲಿ ಬಾಬ್ರಿ ಮಸೀದಿಗೆ ಅಡಿಗಲ್ಲು ಹಾಕಿದ ಟಿಎಂಸಿ ಶಾಸಕ
ಇಡಿಯಿಂದ ಮತ್ತೆ ಅನಿಲ್ ಅಂಬಾನಿ 1120 ಕೋಟಿ ಹೆಚ್ಚುವರಿ ಆಸ್ತಿ ಮುಟ್ಟುಗೋಲು