
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ‘ಮೇಕ್ ಇನ್ ಇಂಡಿಯಾ' ಮಂತ್ರ ಜಪಿಸುತ್ತಿರುವಾಗಲೇ ಬಂಗಾಳಿ ವಿಜ್ಞಾನಿಯೊಬ್ಬರು ಕಡಿಮೆ ಬೆಲೆಯ, ಅತ್ಯಂತ ಕಡಿಮೆ ತೂಕದ ಸ್ವದೇಶಿ ‘ಬುಲೆಟ್‌ಪ್ರೂಫ್' ಜಾಕೆಟ್‌ವೊಂದನ್ನು ಅಭಿವೃದ್ಧಿಪಡಿಸಿದ್ದಾರೆ.
ಇದರ ಬಳಕೆಗೆ ರಕ್ಷಣಾ ಸಚಿವಾಲಯದ ಉನ್ನತಾಧಿಕಾರ ಸಮಿತಿ ಕೂಡ ಒಪ್ಪಿಗೆ ಸೂಚಿಸಿದೆ. ಇದರಿಂದಾಗಿ 70 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ಯೋಧರು ಸಂಪೂರ್ಣವಾಗಿ ಭಾರತದಲ್ಲೇ ತಯಾರಾದ ಬುಲೆಟ್‌ಪ್ರೂಫ್ ಜಾಕೆಟ್ ಅನ್ನು ಧರಿಸಲು ಹಾದಿ ಸುಗಮವಾದಂತಾಗಿದೆ. ಜತೆಗೆ ರಕ್ಷಣಾ ಇಲಾಖೆ ಯ ಬೊಕ್ಕಸಕ್ಕೆ ಪ್ರತಿ ವರ್ಷ 20 ಸಾವಿರ ಕೋಟಿ ರು. ಉಳಿತಾಯವಾಗಲಿದೆ.
ಸೇನೆ ಹಾಗೂ ಅರೆಸೇನಾ ಪಡೆಗಳಿಗಾಗಿ ಕೇಂದ್ರ ಸರ್ಕಾರ ಅಮೆರಿಕದಿಂದ ಗುಂಡು ನಿರೋಧಕ ಕವಚಗಳನ್ನು ಖರೀದಿಸುತ್ತಿದೆ. ಈ ಒಂದು ಕವಚಕ್ಕೆ 1.5 ಲಕ್ಷ ರು. ಬೆಲೆ ಇದೆ. ಜತೆಗೆ ಒಂದು ಕವಚ 15ರಿಂದ 18 ಕೆ.ಜಿ.ವರೆಗೂ ತೂಕವಿದೆ. ಇಷ್ಟು ಮಣ ಭಾರದ ಜಾಕೆಟ್ ಧರಿಸಿ ಉಗ್ರರ ಜತೆ ಕಾದಾಡಬೇಕಾದ ಪರಿಸ್ಥಿತಿ ಯೋಧರಿಗಿದೆ.
ಇದನ್ನು ಮನಗಂಡ ಬಂಗಾಳಿ ವಿಜ್ಞಾನಿ ಪ್ರೊ| ಶಂತನು ಭೌಮಿಕ್ ಅತ್ಯಂತ ಕಡಿಮೆ ತೂಕದ, ಥರ್ಮೋ ಪ್ಲಾಸ್ಟಿಕ್ ಜಾಕೆಟ್ ಅನ್ನು ಅಭಿವೃದ್ಧಿಪಡಿ ಸಿದ್ದಾರೆ. ಈ ಜಾಕೆಟ್ ಬೆಲೆ .50 ಸಾವಿರ ವಿರಲಿದ್ದು, ತೂಕ 1.5 ಕೆ.ಜಿ.ಯಿರಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.