
ಶ್ರೀನಗರ(ಆ.04): ಪಾಕ್ ಸೇನೆಯ ಜಾಯಮಾನವೇ ಅಷ್ಟು. ತನಗಾಗಿ, ತನ್ನ ದೇಶಕ್ಕಾಗಿ ಪ್ರಾಣತೆತ್ತ ಯೋಧರ ಶವ ಮುಟ್ಟಲೂ ನಾ ಒಲ್ಲೆ ಎನ್ನುವ ಜಾಐಮಾನ ಅದರದ್ದು. ತನ್ನ ಸೈನಿಕರ ಶವಕ್ಕೂ ಅಗೌರವ ನೀಡದ, ಅದನ್ನು ಅನಾಥವಾಗಿ ಬಿಟ್ಟು ಬಿಡುವ ಜಗತ್ತಿನ ಏಕೈಕ ಸೇನೆ ಅಂದರೆ ಅದು ಪಾಕ್ ಸೇನೆ ಮಾತ್ರ.
ಗಡಿಯೊಳಗೆ ನುಸುಳಲು ಯತ್ನಿಸಿದ್ದ ಉಗ್ರರು ಹಾಗೂ ಅವರಿಗೆ ಸಹಾಯ ಮಾಡಲೆತ್ನಿಸಿದ ಪಾಕ್ ಬಾರ್ಡರ್ ಆ್ಯಕ್ಷನ್ ಟೀಂ(BAT)ಕಮಾಂಡೋಗಳನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ.
ಆದರೆ ತನ್ನ ಕಮಾಂಡೋಗಳ ಶವವನ್ನು ಸ್ವೀಕರಿಸಲು ಇದುವರೆಗೂ ಪಾಕ್ ಸೇನೆ ಮುಂದಾಗಿಲ್ಲ. ಈ ಹಿನ್ನೆಲೆಯಲ್ಲಿ ನಿಮ್ಮ ಮೃತ ಸೈನಿಕರ ಶವ ಕೊಂಡೊಯ್ಯಲು ಬನ್ನಿ ಎಂದು ಭಾರತೀಯ ಸೇನೆ ಪಾಕ್ ಸೇನೆಗೆ ಸಂದೇಶ ರವಾನಿಸಿದೆ.
ಬಿಳಿ ಧ್ವಜದೊಂದಿಗೆ ನಿಮ್ಮ ಸೈನಿಕರ ಮೃತದೇಹಳಗಳನ್ನು ತೆಗೆದುಕೊಂಡು ಹೋಗಿ ಎಂದು BATಗೆ ಭಾರತೀಯ ಸೇನೆ ತಿಳಿಸಿದೆ. ಆದರೆ ಭಾರತೀಯ ಸೇನೆಯ ಸಂದೇಶಕ್ಕೆ ಪಾಕ್ ಸೇನೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ನಿನ್ನೆ ಕರೆನ್ ಸೆಕ್ಟರ್ ಬಳಿ ಗಡಿ ನಿಯಂತ್ರಣ ರೇಖೆ ದಾಟಲೆತ್ನಿಸಿದ್ದ BATನ ಐವರು ಕಮಾಂಡೋಗಳನ್ನು ಭಾರತೀಯ ಸೇನೆ ಹೊಡೆದುರುಳಿಸಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.