ಅಮೆರಿಕಾದಲ್ಲಿ 13,781 ಕೋಟಿ ಒಡೆಯರಾದ ಭಾರತೀಯ ಮೂಲದ ದಂಪತಿ

By Web DeskFirst Published Jul 25, 2018, 2:03 PM IST
Highlights

ಅಮೆರಿಕದಲ್ಲಿ ಭಾರತೀಯ ಮೂಲಕದ ದಂಪತಿ ತ್ಯಂತ ಕಡಿಮೆ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಮಾಡುವ ಮೂಲಕ ಕಂಪನಿಯೊಂದನ್ನು ಸ್ಥಾಪನೆ ಮಾಡಿದ್ದು, ಇದೀಗ ಈ ಕಂಪನಿಯನ್ನು ಮಾರಾಟ ಮಾಡುವ ಮೂಲಕ ಸಾವಿರಾರು ಕೋಟಿ ಒಡೆಯರಾಗಿದ್ದಾರೆ. 

ವಾಷಿಂಗ್ಟನ್: ಇತ್ತೀಚೆಗಷ್ಟೇ ಅಮೆರಿಕದ ಸ್ವಯಂ ಶ್ರೀಮಂತರ ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಭಾರತೀಯ ಮೂಲದ ನೀರಜಾ ಸೇಠಿ ಇದೀಗ ಮತ್ತೆ ಸುದ್ದಿಯಾ ಗಿದ್ದಾ ರೆ. ನೀರಜಾ ಸೇಠಿ ತಮ್ಮ ಪತಿ ಭರತ್ ದೇಸಾಯಿ ಜತೆಗೂಡಿ 18  ವರ್ಷಗಳ ಹಿಂದೆ ತಮ್ಮದೇ ಅಪಾರ್ಟ್ ಮೆಂಟ್‌ನಲ್ಲಿ ಕೇವಲ 1.37  ಲಕ್ಷ. ರು. ಬಂಡವಾಳ ಹಾಕಿ ಕಂಪನಿಯೊಂದನ್ನು ಸ್ಥಾಪಿಸಿದ್ದರು. 

ಸಿಂಟೆಲ್ ಹೆಸರಿನ ಈ ಮಾಹಿತಿ ತಂತ್ರಜ್ಞಾನ ಕಂಪನಿಯನ್ನು ಇದೀಗ ಫ್ರಾನ್ಸ್ ಮೂಲದ ಐಟಿ ದೈತ್ಯ ಸಂಸ್ಥೆ ಆಟೋಸ್ ಭರ್ಜರಿ 23000 ಕೋಟಿ ರು.ಗೆ ಖರೀದಿಸಿದೆ. ಹೀಗಾಗಿ ಕಂಪನಿಯಲ್ಲಿ ದಂಪತಿ ಹೊಂದಿ ದ್ದ ಷೇರಿನ ಅನ್ವಯ ಅವರಿಗೆ 13781 ಕೋಟಿ ಬಂದಿದೆ.

click me!