
ಚಂಡೀಗಢ[ಮಾ.26]: ಭಾರತೀಯ ವಾಯುಪಡೆಯ ಬಲವನ್ನು ಹೆಚ್ಚು ಪರಿಣಾಮಕಾರಿಗೊಳಿಸಬಲ್ಲವು ಎನ್ನಲಾದ ಅಮೆರಿಕ ನಿರ್ಮಿತ ಅತ್ಯಾಧುನಿಕ ತಂತ್ರಜ್ಞಾನವನ್ನೊಳಗೊಂಡ ಚಿನೂಕ್ ಹೆಲಿಕಾಪ್ಟರ್‌ಗಳು ಭಾರತೀಯ ವಾಯುಪಡೆಗೆ ಸೇರ್ಪಡೆಯಾಗಿವೆ.
ನಾಲ್ಕು ಚಿನೂಕ್ ಹೆಲಿಕಾಪ್ಟರ್‌ಗಳನ್ನು ಸೇನೆಗೆ ಸೇರಿಸಿಕೊಂಡ ಬಳಿಕ ಮಾತನಾಡಿದ ವಾಯುಪಡೆ ಮುಖ್ಯಸ್ಥ ಬಿ.ಎಸ್. ಧನೋವಾ, ‘ರಫೇಲ್ ಯುದ್ಧ ವಿಮಾನದ ರೀತಿ ಚಿನೂಕ್ ಹೆಲಿಕಾಪ್ಟರ್‌ಗಳು ಗೇಮ್ ಚೇಂಜರ್ ಆಗಿವೆ. ಅಲ್ಲದೆ, ವೈವಿದ್ಯಮಯ ಭೂಪ್ರದೇಶವಾಗಿರುವ ಭಾರತದಲ್ಲಿ ಭದ್ರತೆಯ ಸವಾಲುಗಳು ಹೆಚ್ಚಿವೆ. ಯಾವುದೇ ತಡೆಯಿಲ್ಲದೆ ನೇರವಾಗಿ ಮೇಲಕ್ಕೆ ಜಿಗಿಯುವ ಚಿನೂಕ್ ಹೆಲಿಕಾಪ್ಟರ್ ನೆರವಿನಿಂದ ಯಾವುದೇ ಸವಾಲನ್ನು ಎದುರಿಸಬಹುದು,’ ಎಂದು ಹೇಳಿದ್ದಾರೆ.
ಯಾವುದೇ ರೀತಿಯ ವಾತಾವರಣದಲ್ಲಿ ಕಾರ್ಯಾಚರಿಸಬಲ್ಲ ಸಾಮರ್ಥ್ಯ ಹೊಂದಿರುವ ಚಿನೂಕ್ ಪ್ರವಾಹ, ನೆರೆ ಸೇರಿದಂತೆ ಇನ್ನಿತರ ರಕ್ಷಣಾ ಕಾರ್ಯಾಚರಣೆಗೂ ಅನುಕೂಲಕರವಾಗಿರಲಿದೆ. ಒಟ್ಟಾರೆ, ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿರುವ ಅವಳಿ ಇಂಜಿನ್ ಸಾಮರ್ಥ್ಯದ ಚಿನೂಕ್ ಅನ್ನು ಸೇನಾಪಡೆಗಳ ರವಾನೆ, ಸಲಕರಣೆ ಹಾಗೂ ಸಾಮಗ್ರಿಗಳು ಮತ್ತು ಇಂಧನ ಸರಬರಾಜಿಗೂ ಬಳಸಬಹುದಾಗಿದೆ.
ಚಿನೂಕ್ ಕೇವಲ ಹಗಲಿನಲ್ಲಿ ಅಷ್ಟೇ ಅಲ್ಲದೆ, ರಾತ್ರಿ ವೇಳೆಯೂ ಸೇನಾ ಕಾರ್ಯಾಚರಣೆಯಲ್ಲಿ ಬಳಸಬಹುದಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.