ನಾವು ಸರ್ಜಿಕಲ್ ದಾಳಿ ಮಾಡಿದರೆ ಸುಧಾರಿಸಲು ಭಾರತಕ್ಕೆ ಒಂದು ಪೀಳಿಗೆ ಅಗತ್ಯ

Published : Nov 24, 2016, 05:53 PM ISTUpdated : Apr 11, 2018, 12:36 PM IST
ನಾವು ಸರ್ಜಿಕಲ್ ದಾಳಿ ಮಾಡಿದರೆ ಸುಧಾರಿಸಲು ಭಾರತಕ್ಕೆ ಒಂದು ಪೀಳಿಗೆ ಅಗತ್ಯ

ಸಾರಾಂಶ

ಇದೇ ವೇಳೆ, ಭಾರತದ ವಿರುದ್ಧ ಪ್ರತಿದಾಳಿಗೆ ನಾವು ಶಕ್ತರಾಗಿದ್ದು, ಭಾರತದ ಬೆದರಿಕೆಗೆ ಹೆದರುವುದಿಲ್ಲ ಎಂದು ಪಾಕ್ ವಾಯುಪಡೆ ಮುಖ್ಯಸ್ಥ ಮಾರ್ಷಲ್ ಸೊಹೇಲ್ ಅಮಾನ್ ಸಹ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಇನ್ನೊಂದೆಡೆ, ಗುರುವಾರ ಎಲ್‌ಒಸಿಯಲ್ಲಿ ನಾಗರಿಕ ಮತ್ತು ಸೇನಾ ನಾಯಕರೊಂದಿಗೆ ಸಭೆ ನಡೆಸಿದ ಪಾಕ್ ಪ್ರಧಾನಿ ನವಾಜ್ ಷರೀಫ್, ‘‘ಪಾಕಿಸ್ತಾನ ಮತ್ತು ಭಾರತದ ನಡುವಿನ ಇಬ್ಭಾಗ ಅಪೂರ್ಣ ಅಜೆಂಡಾ ಆಗಿದ್ದು, ಸ್ವಾತಂತ್ರಕ್ಕಾಗಿ ಹೋರಾಡುತ್ತಿರುವ ಕಾಶ್ಮೀರಿ ಜನತೆಯನ್ನು ನಾವು ಎಂದಿಗೂ ಕೈಬಿಡುವುದಿಲ್ಲ. ಉದ್ದೇಶಪೂರ್ವಕವಾಗಿ ನಾಗರಿಕರನ್ನು ಗುರಿಯಾಗಿಸಿ ಭಾರತದ ಪಡೆಗಳ ದಾಳಿಯನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ,’’ ಎಂದಿದ್ದಾರೆ.

ಶ್ರೀನಗರ/ ನ್ಯೂಯಾರ್ಕ್(ನ.24): ಕಾಶ್ಮೀರದ ಗಡಿಯಲ್ಲಿ ಭಾರತ, ಪಾಕಿಸ್ತಾನ ಸೇನೆಗಳ ನಡುವೆ ಶೆಲ್ಲಿಂಗ್ ಮತ್ತು ಗುಂಡಿನ ಚಕಮಕಿಗಳು ತೀವ್ರಗೊಂಡಿರುವ ನಡುವೆಯೇ, ಪಾಕಿಸ್ತಾನ ಸೇನಾ ಪಡೆಯ ಮುಖ್ಯಸ್ಥ ಜನರಲ್ ರಹೀಲ್ ಷರೀಫ್ ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ. ಒಂದು ವೇಳೆ ಪಾಕಿಸ್ತಾನವೇದರೂ ಸರ್ಜಿಕಲ್ ದಾಳಿ ಮಾಡಿದರೆ ಅದರಿಂದ ಸುಧಾರಿಸಿಕೊಳ್ಳಲು ಭಾರತಕ್ಕೆ ಕನಿಷ್ಠ ಒಂದು ಪೀಳಿಗೆ ಬೇಕು ಎಂದು ಜ.ರಹೀಲ್ ಷರೀಫ್ ಹೇಳಿದ್ದಾರೆ.

ಇದೇ ವೇಳೆ, ಭಾರತದ ವಿರುದ್ಧ ಪ್ರತಿದಾಳಿಗೆ ನಾವು ಶಕ್ತರಾಗಿದ್ದು, ಭಾರತದ ಬೆದರಿಕೆಗೆ ಹೆದರುವುದಿಲ್ಲ ಎಂದು ಪಾಕ್ ವಾಯುಪಡೆ ಮುಖ್ಯಸ್ಥ ಮಾರ್ಷಲ್ ಸೊಹೇಲ್ ಅಮಾನ್ ಸಹ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಇನ್ನೊಂದೆಡೆ, ಗುರುವಾರ ಎಲ್‌ಒಸಿಯಲ್ಲಿ ನಾಗರಿಕ ಮತ್ತು ಸೇನಾ ನಾಯಕರೊಂದಿಗೆ ಸಭೆ ನಡೆಸಿದ ಪಾಕ್ ಪ್ರಧಾನಿ ನವಾಜ್ ಷರೀಫ್, ‘‘ಪಾಕಿಸ್ತಾನ ಮತ್ತು ಭಾರತದ ನಡುವಿನ ಇಬ್ಭಾಗ ಅಪೂರ್ಣ ಅಜೆಂಡಾ ಆಗಿದ್ದು, ಸ್ವಾತಂತ್ರಕ್ಕಾಗಿ ಹೋರಾಡುತ್ತಿರುವ ಕಾಶ್ಮೀರಿ ಜನತೆಯನ್ನು ನಾವು ಎಂದಿಗೂ ಕೈಬಿಡುವುದಿಲ್ಲ. ಉದ್ದೇಶಪೂರ್ವಕವಾಗಿ ನಾಗರಿಕರನ್ನು ಗುರಿಯಾಗಿಸಿ ಭಾರತದ ಪಡೆಗಳ ದಾಳಿಯನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ,’’ ಎಂದಿದ್ದಾರೆ.

ಈ ನಡುವೆ, ಕಾಶ್ಮೀರ ಕಣಿವೆಯ ನೌಗಾಮ್ ಮತ್ತು ಗುಲ್ಮಾರ್ಗ್ ಗಡಿರೇಖೆಯಲ್ಲಿ ಕಳೆದ ೧೮ ಗಂಟೆಗಳಲ್ಲಿ ಎರಡು ಬಾರಿ ಒಳ ನುಸುಳಲು ಯತ್ನಿಸಿದ ಉಗ್ರರ ಯತ್ನವನ್ನು ಯೋಧರು ವಿಫಲಗೊಳಿಸಿದ್ದಾರೆ. ಯೋಧರ ಮೇಲೆ ಗುಂಡಿನ ದಾಳಿ ನಡೆಸಿದ ಉಗ್ರರ ವಿರುದ್ಧ ಪ್ರತಿ ದಾಳಿ ಮಾಡುವ ಮೂಲಕ ಉಗ್ರರನ್ನು ಹೊಡೆದೋಡಿಸಿದ್ದೇವೆ ಎಂದು ಸೇನಾ ಪಡೆ ಹೇಳಿಕೊಂಡಿದೆ.

ವಿಶ್ವಸಂಸ್ಥೆಗೆ ಪಾಕ್ ದೂರು: ಜಮ್ಮು-ಕಾಶ್ಮೀರದ ಗಡಿಯಲ್ಲಿ ಪೂರ್ಣ ಪ್ರಮಾಣದ ಬಿಕ್ಕಟ್ಟು ಉದ್ಭವಿಸಿದ್ದು, ಈ ವಿಚಾರದಲ್ಲಿ ವಿಶ್ವಸಂಸ್ಥೆ ಮಧ್ಯಸ್ಥಿಕೆ ವಹಿಸಬೇಕೆಂದು ಪಾಕಿಸ್ತಾನ ಮನವಿ ಮಾಡಿದೆ. ವಿಶ್ವಸಂಸ್ಥೆಯ ಉಪ ಪ್ರಧಾನ ಕಾರ್ಯದರ್ಶಿ ಜಾನ್ ಎಲಿಯಾಸನ್ ಮತ್ತು ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್‌ರ ಕಚೇರಿ ಸಿಬ್ಬಂದಿ ಮುಖ್ಯಸ್ಥ ಎಡ್ಮಾಂಡ್ ಮುಲೆಟ್‌ರನ್ನು ವಿಶ್ವಸಂಸ್ಥೆಗೆ ಪಾಕಿಸ್ತಾನ ರಾಯಭಾರಿ ಮಲೀಹಾ ಲೋಧಿ ಭೇಟಿ ಮಾಡಿದ್ದಾರೆ. ಈ ವೇಳೆ ಕಾಶ್ಮೀರದಲ್ಲಿ ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಬೆದರಿಕೆಯೊಡ್ಡುವ ವಾತಾವರಣ ಸೃಷ್ಟಿಯಾಗಿದೆ ಎಂದು ದೂರಿದ್ದಾರೆ. ಕಾಶ್ಮೀರದಲ್ಲಿ ಮಾನವ ಹಕ್ಕುಗಳನ್ನು ಭಾರತ ಉಲ್ಲಂಘಿಸುತ್ತಿದ್ದು, ಅಂತಾರಾಷ್ಟ್ರೀಯ ಸಮುದಾಯದ ದೃಷ್ಟಿ ಬೇರೆಡೆ ಸೆಳೆಯಲು ಭಾರತ ಉದ್ದೇಶಪೂರ್ವಕವಾಗಿಯೇ ಗಡಿಯಲ್ಲಿ ಉದ್ವಿಗ್ನತೆ ಸೃಷ್ಟಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ ಎಂದು ಹೇಳಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಶಿಡ್ಲಘಟ್ಟ ಪೌರಾಯುಕ್ತೆಗೆ ಬೆದರಿಕೆ ಪ್ರಕರಣ: ರಾಜೀವ್‌ಗೌಡ ವಿರುದ್ಧ 2 ಕೇಸ್‌, ಬೆನ್ನಲ್ಲೇ ನಾಪತ್ತೆ; 3 ತಂಡ ರಚಿಸಿ ಪೊಲೀಸರ ಶೋಧ ಕಾರ್ಯ!
ಸಾಹಿತ್ಯಾಸಕ್ತರ ಸಮ್ಮುಖದಲ್ಲಿ ಜೈಪುರ ಸಾಹಿತ್ಯೋತ್ಸವ ಶುರು