ಕೆಲ ದಿನಗಳಲ್ಲೇ ಭಾರತ 20 ಹೋಳಾಗಲಿದೆ, ಬೇಕಿದ್ದರೆ ಕಾದು ನೋಡಿ ಎಂದ ಪಾಕಿಸ್ತಾನ

Published : Dec 13, 2016, 10:25 AM ISTUpdated : Apr 11, 2018, 12:58 PM IST
ಕೆಲ ದಿನಗಳಲ್ಲೇ ಭಾರತ 20 ಹೋಳಾಗಲಿದೆ, ಬೇಕಿದ್ದರೆ ಕಾದು ನೋಡಿ ಎಂದ ಪಾಕಿಸ್ತಾನ

ಸಾರಾಂಶ

ಕೆಲ ದಿನಗಳ ಹಿಂದಷ್ಟೇ ಕೇಂದ್ರ ಗೃಹಸಚಿವ ರಾಜ್'ನಾಥ್ ಸಿಂಗ್ 'ಪಾಕಿಸ್ತಾನ ಭಯೋತ್ಪಾದಕರನ್ನು ತಡೆಯುವಲ್ಲಿ ವಿಫಲವಾದರೆ, ಅದು ಹತ್ತು ಹೋಳಾಗಲಿದೆ' ಎಂದಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಪಾಕಿಸ್ತಾನದ ಗೃಹಮಂತ್ರಿ ನಿಸಾರ್ ಅಲಿ ಖಾನ್ 'ಇದು ಕೇವಲ ಸುಳ್ಳು ಭರವಸೆ, ಪಾಕಿಸ್ತಾನವನ್ನು ಹೋಳಾಗಿಸುವ ಬಿಜೆಪಿಯ ಕನಸು ಕೇವಲ ಅವರ ಭ್ರಮೆಯಷ್ಟೇ' ಅಲ್ಲದೆ 'ಭಾರತ ಬೇರೆ ರಾಷ್ಟ್ರಗಳಿಂದ ಅಲ್ಲ, ಬದಲಾಗಿ ತನ್ನದೇ ನೀತಿಯಿಂದ ವಿಭಾಜಿಸಲ್ಪಡುತ್ತಿದೆ. ಬೇಕಾದರೆ ಇನ್ನು ಕೆಲ ಸಮಯ ಕಾದು ನೋಡಿ ಭಾರತ ತನ್ನಿಂದಲೇ 20 ಹೋಳಾಗಲಿದೆ' ಎಂದೂ ಇದೇ ವೇಳೆ ಹೇಳಿರುವುದಾಗಿ 'ರೇಡಿಯೋ ಪಾಕಿಸ್ತಾನ್' ವರದಿ ಮಾಡಿದೆ.    

ಇಸ್ಲಮಾಬಾದ್(ಡಿ.13): ಒಂದಿಲ್ಲೊಂದು ಕಾರಣದಿಂದ ಭಾರತದ ವಿರುದ್ಧ ಕಿಡಿಕಾರುವ ಪಾಕಿಸ್ತಾನದ ಬುದ್ದಿ ಇನ್ನೂ ನೆಟ್ಟಗಾಗಿಲ್ಲ. ಇದೀಗ ಪಾಕಿಸ್ತಾನದ ಗೃಹಮಂತ್ರಿ ನಿಸಾರ್ ಅಲಿ ಖಾನ್ 'ಪಾಕಿಸ್ತಾನವನ್ನು ಹಲವು ಹೋಳುಗಳಾಗಿ ತುಂಡರಿಸುವ ಭಾರತದ ಕನಸು ಕೇವಲ ಎಂದು ಭ್ರಮೆಯಷ್ಟೇ' ಎಂದು ಗುಡುಗಿದ್ದಾರೆ. ಇಷ್ಟೇ ಅಲ್ಲದೆ ಭಾರತದ ವಿಚಾರವಾಗಿ ಇನ್ನೂ ಉದ್ಧಟತನದ ಹೇಳಿಕೆ ನೀಡಿದ್ದು, ಭಾರತೀಯರನ್ನು ಕೆರಳಿಸಿದೆ.

ಕೆಲ ದಿನಗಳ ಹಿಂದಷ್ಟೇ ಕೇಂದ್ರ ಗೃಹಸಚಿವ ರಾಜ್'ನಾಥ್ ಸಿಂಗ್ 'ಪಾಕಿಸ್ತಾನ ಭಯೋತ್ಪಾದಕರನ್ನು ತಡೆಯುವಲ್ಲಿ ವಿಫಲವಾದರೆ, ಅದು ಹತ್ತು ಹೋಳಾಗಲಿದೆ' ಎಂದಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಪಾಕಿಸ್ತಾನದ ಗೃಹಮಂತ್ರಿ ನಿಸಾರ್ ಅಲಿ ಖಾನ್ 'ಇದು ಕೇವಲ ಸುಳ್ಳು ಭರವಸೆ, ಪಾಕಿಸ್ತಾನವನ್ನು ಹೋಳಾಗಿಸುವ ಬಿಜೆಪಿಯ ಕನಸು ಕೇವಲ ಅವರ ಭ್ರಮೆಯಷ್ಟೇ' ಅಲ್ಲದೆ 'ಭಾರತ ಬೇರೆ ರಾಷ್ಟ್ರಗಳಿಂದ ಅಲ್ಲ, ಬದಲಾಗಿ ತನ್ನದೇ ನೀತಿಯಿಂದ ವಿಭಾಜಿಸಲ್ಪಡುತ್ತಿದೆ. ಬೇಕಾದರೆ ಇನ್ನು ಕೆಲ ಸಮಯ ಕಾದು ನೋಡಿ ಭಾರತ ತನ್ನಿಂದಲೇ 20 ಹೋಳಾಗಲಿದೆ' ಎಂದೂ ಇದೇ ವೇಳೆ ಹೇಳಿರುವುದಾಗಿ 'ರೇಡಿಯೋ ಪಾಕಿಸ್ತಾನ್' ವರದಿ ಮಾಡಿದೆ.    

ಜಮ್ಮು ಕಾಶ್ಮೀರದ ಕಠುವಾ ಜಿಲ್ಲೆಯಲ್ಲಿ 'ಶಹೀದ್ ದಿವಸ್' ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸಚಿವ ರಾಜ್'ನಾಥ್ ಸಿಂಗ್ 'ಭಾರತವನ್ನು ಧಾರ್ಮಿಕವಾಗಿ ವಿಭಾಜಿಸಿದ ಬಳಿಕವಷ್ಟೇ ಪಾಕಿಸ್ತಾನ ಅಸ್ಥಿತ್ವ ಪಡೆದುಕೊಂಡಿತ್ತು. ಆದರೆ ಅದು ತನ್ನ ಒಗ್ಗಟ್ಟನ್ನು ಕಾಪಾಡುವಲ್ಲಿ ವಿಫಲವಾಯಿತು. 1971ರಲ್ಲಿ ಪಾಕಿಸ್ತಾನ ಎರಡು ಹೋಳಾಗಿ(ಬಾಂಗ್ಲಾದೇಶ) ವಿಭಜಿತವಾಗಿದೆ. ಇನ್ನೂ ಪಾಠ ಕಲಿಯದೇ ಹೋದರೆ 10 ಭಾಗವಾಗಿ ವಿಭಜಿತವಾಗಲಿದೆ. ಆದರೆ ಇದಕ್ಕೆ ಭಾರತ ಕಾರಣವಾಗುವುದಿಲ್ಲ' ಎಂದಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಎಂ ರಾಂಗ್‌ ಫ್ಲೈಟ್‌ ಹತ್ತಿದ್ದಾರೆ: ಸಿದ್ಧರಾಮಯ್ಯ ವಿರುದ್ಧ ಆರ್‌.ಅಶೋಕ್‌ ಗರಂ!
ನನ್ನ-ಸಿಎಂ ಸಿದ್ದರಾಮಯ್ಯ ನಡುವೆ ಒಪ್ಪಂದವಾಗಿದೆ: ಡಿ.ಕೆ.ಶಿವಕುಮಾರ್ ಹೇಳಿಕೆ ಹಾಟ್ ಟಾಪಿಕ್!