
ಬೋಸ್ಟನ್(ಸೆ. 30) ಇಟಲಿಯ ಲಿಯನಾರ್ಡೊ ಡ ವಿಂಚಿ ಕಲಾಕೃತಿ ಮೋನಾಲಿಸಾ ಯಾರಿಗೆ ತಾನೆ ಗೊತ್ತಿಲ್ಲ. ಜಗತ್ತಿನಲ್ಲಿಯೇ ಅತಿ ಸುಂದರ ಕಲಾಕೃತಿ ಎಂಬ ಖ್ಯಾತಿಯನ್ನು ಇದು ಪಡೆದುಕೊಂಡಿದೆ.
ಆದರೆ ಭಾರತೀಯ ಮೂಲದ ವಿಜ್ಞಾನಿಯೊಬ್ಬರು ಸಂಶೋಧನೆಯಿಂದ ಹೊಸ ಸುದ್ದಿಯನ್ನು ಹೊರಹಾಕಿದ್ದಾರೆ. ಡಾ ವಿಂಚಿಯ ಮೋನಾಲಿಸಾ ಹೈಪೋಥೈರ್ಯಾಡಿಸಂ ನಿಂದ ಬಳಲುತ್ತಿದ್ದರು ಎಂದಿದ್ದಾರೆ.
ಅಮೆರಿಕದ ಬ್ರೇಗಂನಲ್ಲಿ ನೆಲೆಸಿರುವ ಭಾರತೀಯ ಮೂಲದ ವಿಜ್ಞಾನಿ ಮನ್ ದೀಪ್ ಆರ್ ಮೆಹ್ರಾ ಮತ್ತು ಅಮೆರಿಕದ ಆಸ್ಪತ್ರೆಯೊಂದು ಈ ಚಿತ್ರದ ಮೇಲೆ ಸಂಶೋಧನೆ ಮಾಡಿದೆ.
ಲೀಸಾ ಘೆರಾರ್ದಿನಿ ಅಂದರೆ ಮೋನಾಲಿಸಾ ಹೆಣ್ಣು ಮಕ್ಕಳಿಗೆ ಕಾಡುವ ಹೈಪರ್ ಲೆಪಿಡೀಮಿಯಾದಿಂದ ಬಳಲುತ್ತಿದ್ದರು ಎಂದು ಸಂಶೊಧನೆ ಹೇಳಿದೆ. ಚಿತ್ರವನ್ನು ಸ್ಥೂಲವಾಗಿ ಅಧ್ಯಯನ ಮಾಡಿರುವ ಸಂಶೋಧಕರು ಈ ತೀರ್ಮಾನಕ್ಕೆ ಬಂದಿದ್ದಾರೆ.
ಲೀಸಾ ಘೆರಾರ್ದಿನಿ ಸುಮಾರು 63 ವರ್ಷ ಇದ್ದಾಗ ಈ ಸಮಸ್ಯೆಗೆ ಗುರಿಯಾಗಿರಬಹುದು. ಈ ಸಮಸ್ಯೆ ಕಾಣಿಸಿಕೊಂಡಾಗ ಥೈರಾಯ್ಡ್ ಗ್ರಂಥಿಗಳೂ ನೈಸರ್ಗಿಕವಾಗಿ ಬೇಕಾಗುವವಷ್ಟು ಹಾರ್ಮೋನ್ ಬಿಡುಗಡೆ ಮಾಡುವುದಿಲ್ಲ.
ಈ ಸಂಶೋಧನೆಯ ವಿವರವನ್ನು ಜರ್ನಲ್ ಒಂದರಲ್ಲಿ ಪ್ರಕಟ ಮಾಡಲಾಗಿದ್ದು ಮೋನಾಲಿಸಾಳ ಕೂದಲು, ಹಳದಿ ಚರ್ಮ ಮತ್ತು ಕೊಂಚ ಊದಿದ ಕುತ್ತಿಗೆಯ ಆಧಾರವನ್ನು ಸಂಶೋಧಕರು ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.