ರಿಯಾಯಿತಿ ಇಂಧನ ಪೂರೈಕೆಗೆ ಒಪೆಕ್ಸ್ ಸಭೆಯಲ್ಲಿ ಭಾರತ ಆಗ್ರಹ

First Published Jun 20, 2018, 4:23 PM IST
Highlights

ರಿಯಾಯಿತಿ ಇಂಧನ ಪೂರೈಕೆಗೆ ಒಪೆಕ್ಸ್ ಸಭೆಯಲ್ಲಿ ಭಾರತ ಆಗ್ರಹ

ಪೆಟ್ರೋಲಿಯಂ ರಪ್ತು ರಾಷ್ಟ್ರಗಳ ಒಕ್ಕೂಟ- ಒಪೆಕ್ಸ್ ಸಭೆ

ದುಬಾರಿಯಲ್ಲದ ರಿಯಾಯಿತಿ ದರದಲ್ಲಿ ಇಂಧನ ಪೂರೈಕೆ

ಪೆಟ್ರೋಲಿಯಂ ಖಾತೆ  ಸಚಿವ ಧರ್ಮೇಂದ್ರ ಪ್ರಧಾನ್ ಮಾಹಿತಿ

ವಿಯನ್ನಾ(ಜೂ.20): ರಿಯಾಯಿತಿ ದರದಲ್ಲಿ ಇಂಧನ  ಪೂರೈಸುವಂತೆ  ಪೆಟ್ರೋಲಿಯಂ ರಪ್ತು ರಾಷ್ಟ್ರಗಳ ಒಕ್ಕೂಟ- ಒಪೆಕ್ಸ್ ಸಭೆಯಲ್ಲಿ ಮತ್ತೊಮ್ಮೆ ಮನವಿ ಮಾಡಲಾಗುವುದು ಎಂದು ಪೆಟ್ರೋಲಿಯಂ ಖಾತೆ  ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.

ಪೆಟ್ರೋಲ್ ಹಾಗೂ ಡೀಸೆಲ್ ಉತ್ಪನ್ನಗಳು ರಿಯಾಯಿತಿ ದರದಲ್ಲಿ ಸಿಗಬೇಕೆಂದು ಭಾರತದ ಆಶಯ. ಕಳೆದ ಹಲವು ವರ್ಷಗಳಿಂದ ಭಾರತ ಇದನ್ನು ಪ್ರಸ್ತಾಪಿಸುತ್ತಲೇ ಬಂದಿದೆ. ಮುಂದಿನ ಸಭೆಯಲ್ಲಿ ಅದನ್ನೇ ಪುನರಾವರ್ತಿಸುತ್ತೇವೆ. ನಾಲ್ಕು ವರ್ಷಗಳ ಹಿಂದೆ ಭಾರತದ ಮಾತನ್ನು ನಿರ್ಲಕ್ಷಿಸುತ್ತಿದ್ದರು. ಆದರೆ ಈಗ ಭಾರತ ಸ್ವಂತ ಧ್ವನಿ ಹೊಂದಿದೆ ಎಂದರು.

ಭಾರತದ ಅಗತ್ಯಕ್ಕೆ ತಕ್ಕಂತೆ  ದುಬಾರಿಯಲ್ಲದ ರಿಯಾಯಿತ ದರದಲ್ಲಿ ಒಪೆಕ್ ರಾಷ್ಟ್ರಗಳು ಇಂಧನ ಪೂರೈಸುವಂತೆ ಪ್ರಧಾನ್ ಆಗ್ರಹಿಸಿದರು. ಇಂಧನ ಪೂರೈಕೆ ಜಾಲದಲ್ಲಿ ಅಡ್ಡಿಯುಂಟು ಮಾಡದ ಬಗ್ಗೆ ಭರವಸೆ ಹಿನ್ನೆಲೆಯಲ್ಲಿ ಈ ಸಭೆ ಮಹತ್ವದ ಪಾತ್ರ ವಹಿಸಲಿದೆ. 

ತೈಲ ಉತ್ಪನ್ನ ರಾಷ್ಟ್ರಗಳ ಬೆಲೆ ಇಳಿಕೆ ಎದುರು ನೋಡಲಾಗುತ್ತಿದ್ದು, ತೈಲ ಬೆಲೆಗಳು ಸಾಮಾನ್ಯರಿಗೂ ತಲುಪಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತಿದೆ ಎಂದು ಸಚಿವರು ಇದೇ ವೇಳೆ ತಿಳಿಸಿದರು.

click me!