ಟಿಟ್ ಫಾರ್ ಟ್ಯಾಟ್: ಥಾರ್ ಲಿಂಕ್ ಎಕ್ಸಪ್ರೆಸ್ ರದ್ದುಗೊಳಿಸಿದ ಭಾರತ!

By Web DeskFirst Published Aug 16, 2019, 8:04 PM IST
Highlights

ಮುಯ್ಯಿಗೆ ಮುಯ್ಯಿ ಎಂದ ಭಾರತ| ಜುಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದತಿ ಹಿನ್ನೆಲೆ| ಸ್ಮಜೋತಾ ಎಕ್ಸಪ್ರೆಸ್ ರೈಲು ಸೇವೆ ರದ್ದುಗೊಳಿಸಿರುವ ಪಾಕಿಸ್ತಾನ| ಥಾರ್ ಲಿಂಕ್ ಎಕ್ಸಪ್ರೆಸ್ ರೈಲು ಸೇವೆ ರದ್ದುಗೊಳಿಸಿದ ಭಾರತ| ರಾಜಸ್ಥಾನದ ಜೋಧ್’ಪುರದಿಂದ ಕರಾಚಿಗೆ ಸಂಪರ್ಕ ಕಲ್ಪಿಸುವ  ಥಾರ್ ಲಿಂಕ್ ಎಕ್ಸಪ್ರೆಸ್| 

ನವದೆಹಲಿ(ಆ.16): ಮುಯ್ಯಿಗೆ ಮುಯ್ಯಿ ಎಂಬಂತೆ ಸಮ್ಜೋತಾ ಎಕ್ಸಪ್ರೆಸ್ ರೈಲು ಸೇವೆ ರದ್ದುಗೊಳಿಸಿರುವ ಪಾಕಿಸ್ತಾನಕ್ಕೆ, ಥಾರ್ ಲಿಂಕ್ ಎಕ್ಸಪ್ರೆಸ್ ರೈಲು ರದ್ದುಗೊಳಿಸಿ ಭಾರತ ಗುದ್ದು ನೀಡಿದೆ. 

ರಾಜಸ್ಥಾನದ ಜೋಧ್’ಪುರದಿಂದ ಪಾಕಿಸ್ತಾನದ ಕರಾಚಿಗೆ ಸಂಪರ್ಕ  ಕಲ್ಪಿಸುತ್ತಿದ್ದ  ಥಾರ್ ಲಿಂಕ್ ಎಕ್ಸಪ್ರೆಸ್ ರೈಲು ಸಂಚಾರವನ್ನು ಸ್ಥಗಿತಗೊಳಿಸಿರುವುದಾಗಿ ಭಾರತೀಯ ರೈಲ್ವೇ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Indian Railways: Thar Express train(Jodhpur to Karachi) stands cancelled till further orders pic.twitter.com/ZFeKwVaFqF

— ANI (@ANI)

ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿರುವ ಭಾರತದ ನಡೆ ವಿರೋಧಿಸಿದ್ದ ಪಾಕಿಸ್ತಾನ, ಸಮ್ಜೋತಾ ಎಕ್ಸಪ್ರೆಸ್ ರೈಲು ಸೇವೆಯನ್ನು ರದ್ದುಗೊಳಿಸಿತ್ತು.

ಇದಕ್ಕೆ ಪ್ರತಿಯಾಗಿ ಇಂದಿನಿಂದ ಥಾರ್ ಲಿಂಕ್ ಎಕ್ಸಪ್ರೆಸ್ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. 

click me!