ರಾಜಕೀಯಕ್ಕೆ ಐಎಎಸ್ ಅಧಿಕಾರಿಗಳು ಬರುತ್ತಿರುವುದು ಖುಷಿ ಕೊಟ್ಟಿದೆ; ರಾಜನಾಥ್ ಸಿಂಗ್

Published : Oct 14, 2016, 03:06 PM ISTUpdated : Apr 11, 2018, 01:04 PM IST
ರಾಜಕೀಯಕ್ಕೆ ಐಎಎಸ್ ಅಧಿಕಾರಿಗಳು ಬರುತ್ತಿರುವುದು ಖುಷಿ ಕೊಟ್ಟಿದೆ; ರಾಜನಾಥ್ ಸಿಂಗ್

ಸಾರಾಂಶ

ನನ್ನ ಪ್ರೀತಿಯ ಬಂಧು ಭಗಿನಿಯರೆ ನಿಮೆಗೆಲ್ಲ ಸ್ವಾಗತ ಎಂದು ಕನ್ನಡದಲ್ಲಿ ಮಾತು ಆರಂಭಸಿದ ರಾಜನಾಥ್ ಶಿವರಾಮ್  ಬಿಜೆಪಿಗೆ ಸೇರುವ ಮೊದಲು ದೆಹಲಿಯಲ್ಲಿ ಯಡಿಯೂರಪ್ಪ ಈ ಬಗ್ಗೆ ತಿಳಿಸಿದರು. ಬಳಿಕ ಸದಾನಂದ ಗೌಡ , ಅನಂತ ಕುಮಾರ್ ಸಹ ಬೆಂಗಳೂರಿಗೆ ಬರುವಂತೆ ಮನವಿ ಮಾಡಿದರು.  ಮಾಜಿ ಐಎಎಸ್ ಅಧಿಕಾರಿಗಳು  ಬರುತ್ತಿದ್ದಾರೆ ಎಂದು ಖುಷಿ ಪಟ್ಟು ಬಂದಿದ್ದೇನೆ ಎಂದು ರಾಜನಾಥ್ ಸಿಂಗ್ ಸಂತಸ ವ್ಯಕ್ತಪಡಿಸಿದರು.  

ಬೆಂಗಳೂರು (ಅ.14): ನನ್ನ ಪ್ರೀತಿಯ ಬಂಧು ಭಗಿನಿಯರೆ ನಿಮೆಗೆಲ್ಲ ಸ್ವಾಗತ ಎಂದು ಕನ್ನಡದಲ್ಲಿ ಮಾತು ಆರಂಭಸಿದ ರಾಜನಾಥ್ ಶಿವರಾಮ್  ಬಿಜೆಪಿಗೆ ಸೇರುವ ಮೊದಲು ದೆಹಲಿಯಲ್ಲಿ ಯಡಿಯೂರಪ್ಪ ಈ ಬಗ್ಗೆ ತಿಳಿಸಿದರು. ಬಳಿಕ ಸದಾನಂದ

ಗೌಡ , ಅನಂತ ಕುಮಾರ್ ಸಹ ಬೆಂಗಳೂರಿಗೆ ಬರುವಂತೆ ಮನವಿ ಮಾಡಿದರು.  ಮಾಜಿ ಐಎಎಸ್ ಅಧಿಕಾರಿಗಳು  ಬರುತ್ತಿದ್ದಾರೆ ಎಂದು ಖುಷಿ ಪಟ್ಟು ಬಂದಿದ್ದೇನೆ ಎಂದು ರಾಜನಾಥ್ ಸಿಂಗ್ ಸಂತಸ ವ್ಯಕ್ತಪಡಿಸಿದರು.  

ನಟ, ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಮ್ ಇಂದು ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಅನಂತ್ ಕುಮಾರ್ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ರಾಜನಾಥ್ ಸಿಂಗ್, ಸಂವಿಧಾನದಲ್ಲಿ

ದಲಿತರಿಗೆ ನೀಡಿರುವ ಸವಲತ್ತನ್ನು ಬೇರೆಲ್ಲೂ ನೀಡಿಲ್ಲ. ದೇಶ ಶಕ್ತಿ, ಸ್ವಾಭಿಮಾನದಿಂದ ಬೆಳೆಯಬೇಕು ಎಂದು ಅಂಬೇಡ್ಕರ್ ನಂಬಿದ್ದರು. ಅದಕ್ಕೆ ಒಗ್ಗಟ್ಟನ್ನು ಜಪಿಸಿದರು. ಈ ದೇಶದಲ್ಲಿ ದಲಿತರಿಗೆ ಅವರ ಹಕ್ಕನ್ನು ನೀಡಲು ಕ್ರಾಂತಿ ಅವಶ್ಯಕತೆ ಇಲ್ಲ .

ಕಾರಣ ಸಂವಿಧಾನದಲ್ಲಿ ಇರುವುದನ್ನೇ ನೀಡಿದ್ರು ಸಾಕು ಎಂದು ಅಂಬೇಡ್ಕರ್ ನಂಬಿದ್ದರು ಎಂದು ಹೇಳಿದ್ದಾರೆ.

ನಾವು ಎಲ್ಲೂ ಹಿಂದೂಸ್ತಾನ ಎಂದು ಬಿಂಬಿಸಿಕೊಂಡಿಲ್ಲ.ಈಗಲೂ ಭಾರತ ಜಾತ್ಯತೀತ ರಾಷ್ಟ್ರವಾಗಿಯೆ ಉಳಿದಿದೆ. ನಮ್ಮ ಪುರಾಣದಲ್ಲಿ ಎಲ್ಲಿಯೂ ಸಹ ಅಸ್ಪ್ರಶ್ಯತೆ ಬಗ್ಗೆ ಹೇಳಿಲ್ಲ. ಯಾವ  ಸಂತರೂ ಜಾತಿ ಬಗ್ಗೆ ಮಾತಾಡಿಲ್ಲ. ಆದರೆ ಬಳಿಕ ಆಳಿದವರು ಜಾತಿ ವ್ಯವಸ್ಥೆ ತಂದರು  ಎಂದಿದ್ದಾರೆ.

ದೇಶದ ಇತಿಹಾಸದಲ್ಲಿ ಕಾಂಗ್ರೆಸ್ ಬಿಟ್ಟರೆ ಬೇರೆ ಯಾರಿಗೂ ಪೂರ್ಣ ಬಹುಮತ ಸಿಕ್ಕಿರಲಿಲ್ಲ. ಆದರೆ ನಮ್ಮ ಬಿಜೆಪಿಗೆ ಸಿಕ್ಕಿದೆ. 2 ವರ್ಷದಲ್ಲಿ ಕೆಲವೊಂದು ಕೆಲಸದಲ್ಲಿ ನಿಧಾನ ಆಗಿರಬಹುದು. ಆದರೆ ಸರ್ಕಾರದ ಮೇಲೆ ಚಿಕ್ಕ ಭ್ರಷ್ಟಾಚಾರದ ವಾಸನೆಯೂ ಇಲ್ಲ ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜಗತ್ತಿನಲ್ಲಿ ಅತಿಹೆಚ್ಚು ಮದ್ಯಪಾನ ಮಾಡುವ ದೇಶ ಯಾವುದು? ಭಾರತಕ್ಕೆ ಎಷ್ಟನೇ ಸ್ಥಾನ ಗೊತ್ತಾ?
ಸಿಎಂ ಹೇಳಿದ ಮೇಲೂ ಅಧಿಕಾರ ಹಂಚಿಕೆ ಬಗ್ಗೆ ಚರ್ಚೆ ಸಲ್ಲ: ಸಚಿವ ಸತೀಶ್‌ ಜಾರಕಿಹೊಳಿ