ಅಂಚೆ ಇಲಾಖೆ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್

By Web DeskFirst Published Jul 30, 2018, 11:15 AM IST
Highlights

ಅಂಚೆ ಕಚೇರಿ ಗ್ರಾಹಕರಿಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್ ಇದೆ. ಬಹುನಿರೀಕ್ಷೀತ ಪೇಮೆಂಟ್ ಬ್ಯಾಂಕ್ ಸೇವೆ ಆಗಸ್ಟ್ ತಿಂಗಳಲ್ಲಿ ಆರಂಭವಾಗಲಿದೆ.

ನವದೆಹಲಿ: ಅಂಚೆ ಇಲಾಖೆಯ ಬಹುನಿರೀಕ್ಷೀತ ಪೇಮೆಂಟ್ ಬ್ಯಾಂಕ್ ಸೇವೆ ಆಗಸ್ಟ್ ತಿಂಗಳಲ್ಲಿ ಆರಂಭವಾಗಲಿದೆ. ಹೊಸ ಸೇವೆ ಆರಂಭಕ್ಕೆ ನಾವು ಎಲ್ಲಾ ರೀತಿಯಲ್ಲೂ ಸಜ್ಜಾಗಿದ್ದೇವೆ ಎಂದು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಸೇಠಿ ಹೇಳಿದ್ದಾರೆ. 

17  ಕೋಟಿ ಖಾತೆಗಳೊಂದಿಗೆ ಮತ್ತು 650  ಶಾಖೆಗಳಲ್ಲಿ ನಾವು ಶೀಘ್ರ ಸೇವೆ ಆರಂಭಿಸಲಿದ್ದೇವೆ. ಸೇವೆ ಉದ್ಘಾಟನೆಯ ದಿನಾಂಕ ಶೀಘ್ರ ನಿರ್ಧಾರವಾ ಗಲಿದೆ. ನಿರ್ವಹಣೆ, ತಂತ್ರಜ್ಞಾನ ಮತ್ತು ಮಾರುಕಟ್ಟೆಗೆ ಸಂಬಂಧಿಸಿದಂತೆ ಯೋಜನೆಗೆ ನಾವು ಸಿದ್ಧವಾಗಿದ್ದೇವೆ ಎಂದು ಸೇಠಿ ತಿಳಿಸಿದ್ದಾರೆ. 

ಆರ್‌ಬಿಐ ಇದುವರೆಗೆ ಏರ್ ಟೆಲ್, ಪೇಟಿಎಂ ಮತ್ತು ಭಾರತೀಯ ಅಂಚೆ ಇಲಾಖೆಗೆ ಪೇಮೆಂಟ್ ಬ್ಯಾಂಕ್ ಆರಂಭಕ್ಕೆ ಅನುಮತಿ ನೀಡಿದೆ. ಈ ಸೇವೆಯಡಿ ಗ್ರಾಹಕರು ಗರಿಷ್ಠ 1 ಲಕ್ಷ ರು.ವರೆಗೆ ಠೇವಣಿ ಇಡಬಹುದು. ಜೊತೆಗೆ ಇತರೆ ಹಲವಾರು ಬ್ಯಾಂಕಿಂಗ್ ಸೇವೆಗಳು ಲಭ್ಯವಿರಲಿವೆ.

click me!